Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ನೂತನ ಎಐಸಿಸಿ ಅಧ್ಯಕ್ಷರ ಮುಂದೆ ಸಾಲುಸಾಲು ಸವಾಲು…!

Facebook
Twitter
Telegram
WhatsApp

ಸುದ್ದಿಒನ್ ವೆಬ್ ಡೆಸ್ಕ್

ನವದೆಹಲಿ : 24 ವರ್ಷಗಳ ನಂತರ ಮೊದಲ ಗಾಂಧಿಯೇತರ ಕಾಂಗ್ರೆಸ್ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ತಮ್ಮ ಇನ್ನಿಂಗ್ಸ್ ಆರಂಭಿಸುತ್ತಿದ್ದಂತೆ, ಅವರ ಮುಂದೆ ಸಾಕಷ್ಟು ಸವಾಲುಗಳಿವೆ. ಲೋಕಸಭೆ ಚುನಾವಣೆಗೆ ಎರಡು ವರ್ಷಕ್ಕಿಂತ ಕಡಿಮೆ ಅವಧಿಯಿದ್ದು, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಅಸ್ತಿತ್ವವನ್ನು ಕುಗ್ಗಿಸಿರುವ ಪಕ್ಷವನ್ನು ಮತ್ತೆ ಪುನಶ್ಚೇತನಗೊಳಿಸುವ ನಿರೀಕ್ಷೆಯನ್ನು ಹೊಂದಿದ್ದಾರೆ.

• ಎಲ್ಲಕ್ಕಿಂತ ಮುಖ್ಯವಾಗಿ ಪಕ್ಷದ ಅತೃಪ್ತ ಕಾರ್ಯಕರ್ತರಲ್ಲಿ ಆತ್ಮಸ್ಥೈರ್ಯ ತುಂಬಬೇಕಿದೆ. ನಾನಾ ಬಣಗಳನ್ನು ಒಟ್ಟುಗೂಡಿಸಿ ಅವರ ಜತೆ ಕೂತು ಅವರ ಅಹವಾಲುಗಳ ಕುರಿತು ಚರ್ಚಿಸಿ, ಬಣಗಳ ನಡುವೆ ಸಾಮರಸ್ಯವನ್ನು ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಬೇಕಾಗಿದೆ.

• 2024 ರ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಬೇಕಿದೆ. ಬಿಜೆಪಿಯನ್ನು ಎದುರಿಸಲು ಚುನಾವಣಾ ತಂತ್ರಗಾರಿಕೆಯನ್ನು ರೂಪಿಸಲು ಖರ್ಗೆ ಮತ್ತು ಅವರ ಇಡೀ ತಂಡ ಕೈಜೋಡಿಸಬೇಕು.ಮುಂಬರುವ ವಿಧಾನಸಭಾ ಚುನಾವಣೆ ಕಾಂಗ್ರೆಸ್ ಪಾಲಿಗೆ ಅಗ್ನಿ ಪರೀಕ್ಷೆಯಾಗಲಿದೆ. ಬಿಜೆಪಿಯನ್ನು ಎದುರಿಸಲು ವಿನೂತನ ಯೋಜನೆಗಳೊಂದಿಗೆ ಮತದಾರರ ಗಮನ ಸೆಳೆಯಬೇಕಿದೆ.

• ಕಾಂಗ್ರೆಸ್ ತನ್ನನ್ನು ತಾನು ಪರಾಮರ್ಶನೆ ಮಾಡಿಕೊಳ್ಳುವ ಸಮಯ ಬಂದಿದೆ. ನಾಯಕತ್ವದ ಕಾರ್ಯಚಟುವಟಿಕೆಯಲ್ಲಿ ಟೀಮ್ ವರ್ಕ್ ಮಾಡಬೇಕು. ಪಕ್ಷದ ಹಿರಿಯ ನಾಯಕರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಖರ್ಗೆ ಅವರಿಗೆ ಸಹಾಯ ಮಾಡಬಹುದು. ಚುನಾವಣೆಗಾಗಿ ಕಾರ್ಯತಂತ್ರವನ್ನು ರೂಪಿಸಬೇಕು ಮತ್ತು ಭವಿಷ್ಯಕ್ಕಾಗಿ ಮಾರ್ಗಸೂಚಿಯನ್ನು ರೂಪಿಸಬೇಕು.

• ಮುಂದಿನ ದಿನಗಳಲ್ಲಿ ಪಕ್ಷದಲ್ಲಿರುವ ಯುವಕರಿಗೆ ಪಕ್ಷದಲ್ಲಿ ಸರಿಯಾದ ಸ್ಥಾನಮಾನವನ್ನು ನೀಡುವಲ್ಲಿ ಖರ್ಗೆಯವರು ಪ್ರಮುಖ ಪಾತ್ರವನ್ನು ನಿರ್ವಹಿಸಬೇಕಾಗಿದೆ. ಆದರೆ ಹಾಗೆ ಮಾಡುತ್ತಾ ಪಕ್ಷದಲ್ಲಿ ವರಿಷ್ಠರನ್ನು ಕಡೆಗಣಿಸದಂತೆ ನೋಡಿಕೊಳ್ಳಬೇಕಿದೆ. ಹಿರಿಯ ಮತ್ತು ಕಿರಿಯರ ವಿಚಾರದಲ್ಲಿ ತುಂಬಾ ಸೂಕ್ಷ್ಮವಾಗಿ ವ್ಯವಹರಿಸಬೇಕಾಗಿದೆ. ಒಂದೆಡೆ ಅಶೋಕ್ ಗೆಹ್ಲೋಟ್ ಅವರನ್ನು ಸಮಾಧಾನಪಡಿಸಬೇಕಾಗಿದೆ ಮತ್ತು ಅದೇ ಸಮಯದಲ್ಲಿ, ಸಚಿನ್ ಪೈಲಟ್ ಅವರನ್ನೂ ನಿಭಾಯಿಸಬೇಕು. ಇದು ಖರ್ಗೆ ಅವರ ರಾಜಕೀಯ ಚಾಣಾಕ್ಷತೆಯನ್ನು ಪರೀಕ್ಷಿಸುವ ಕತ್ತಿ ಮೇಲಿನ ನಡಿಗೆಯಾಗಲಿದೆ. ಖರ್ಗೆ ಅವರು ಪಕ್ಷವನ್ನು ಗೆಲುವಿನ ದಡಕ್ಕೆ ಕೊಂಡೊಯ್ದರೆ ಮಾತ್ರ ಪಕ್ಷದಲ್ಲಿನ ಪಕ್ಷಾಂತರಗಳು ಮತ್ತು ಒಡಕುಗಳು ಕಡಿಮೆಯಾಗುತ್ತವೆ.

• ಮತ್ತೊಂದು ಪ್ರಮುಖ ಕೆಲಸವೆಂದರೆ ಯುಪಿಎಗೆ ಹೊಸ ಆಯಾಮ ನೀಡುವುದು. ಕಾಂಗ್ರೆಸ್ ತನ್ನ ದಾರಿ ತಪ್ಪಿದೆ ಎಂದು ಭಾವಿಸುವ ಅನೇಕ ಮಿತ್ರಪಕ್ಷಗಳಿವೆ. ಮುಂದಿನ ದಿನಗಳಲ್ಲಿ ಹಳೆಯ ಮಿತ್ರ ಪಕ್ಷದೊಂದಿಗೆ ಕೈಜೋಡಿಸಿ ಮತ್ತೆ ಮೈತ್ರಿ ಮುಂದುವರಿಯುವಂತೆ ಮನವೊಲಿಸಬೇಕಿದೆ. ಮತ್ತು ಆ ಪಕ್ಷಗಳಿಗೆ ಕಾಂಗ್ರೆಸ್ ಮಾತ್ರ ನಮ್ಮ ಆಯ್ಕೆ ಎಂದು ನಂಬಿಕೆ  ಬರುವಂತೆ ಪಕ್ಷಗಳೊಂದಿಗೆ ನಡೆದುಕೊಳ್ಳಬೇಕು. ಆಗ ಮಾತ್ರ ಖಂಡಿತವಾಗಿಯೂ ಹೆಚ್ಚಿನ ಪಕ್ಷಗಳು ಯುಪಿಎಗೆ ಸೇರುತ್ತವೆ.

ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್‌ ಉಸ್ತುವಾರಿಯನ್ನು ವಹಿಸಿಕೊಳ್ಳುತ್ತಿರುವ ಈ ವೇಳೆಯಲ್ಲಿ ಅವರ ಮುಂದೆ ಸಾಲುಸಾಲು ಸವಾಲುಗಳಿವೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮುಂದಿನ ವರ್ಷದಿಂದ ಎಸ್ಎಸ್ಎಲ್ಸಿ ಮಕ್ಕಳಿಗಿಲ್ಲ ಗ್ರೇಸ್ ಮಾರ್ಕ್ಸ್..!

ಬೆಂಗಳೂರು: ಈ ಬಾರಿಯ ಎಸ್ಎಸ್ಎಲ್ಸಿ ಫಲಿತಾಂಶ ಕಳೆದ ಬಾರಿಗಿಂತ ಕಡಿಮೆ ಬಂದಿದೆ. ಅದರಲ್ಲೂ ಕಳೆದ ವರ್ಷಕ್ಕಿಂತ ಹೆಚ್ಚಿನ ಗ್ರೇಸ್ ಮಾರ್ಕ್ಸ್ ನೀಡಲಾಗಿದ್ದರು, ಫಲಿತಾಂಶ ಹೇಳಿಕೊಳ್ಳುವ ಮಟ್ಟಕ್ಕೆ ಬಂದಿಲ್ಲ. ಈ ಗ್ರೇಸ್ ಮಾರ್ಕ್ಸ್ ವಿಚಾರವಾಗಿ ಸಿಎಂ

ರಾಜಕೀಯ ನಿಂತ ನೀರಲ್ಲ, ಕೆಲವ ಬದಲಾವಣೆಗಳು ಅನಿವಾರ್ಯ : ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ಮೇ. 17 :  ನಾನು ನನ್ನ ಶಾಸಕ ಸ್ಥಾನ ಅವಧಿ ಮುಗಿದ ಮೇಲೆ ಬೇರೆ ಪಕ್ಷಕ್ಕೆ

ಸಾಲ ಇರುವ ಜಮೀನು ನೀಡಿ ಜ್ಯೂ.ಎನ್ಟಿಆರ್ ಗೆ ಮೋಸ ಮಾಡಿದ ಯುವತಿ ವಿರುದ್ಧ ನಟ ದೂರು..!

ಜ್ಯೂ. NTR ಆಸ್ತಿಯೊಂದನ್ನು ಖರೀದಿಸಲು ಹೋಗಿ ಮೋಸ ಹೋಗಿದ್ದಾರೆ. ಇದೀಗ ಮೋಸ ಮಾಡಿದ ಯುವತಿ ವಿರುದ್ಧ ಕೋರ್ಟ್ ಮೊರೆ ಹೋಗಿದ್ದಾರೆ. ಆಸ್ತಿ ಮೇಲೆ ಕೋಟ್ಯಾಂತರ ರೂಪಾಯಿ ಸಾಲವಿದ್ದು, ನ್ಯಾಯ ಕೇಳುತ್ತಿದ್ದಾರೆ. ಜ್ಯೂ. NTR, ಆರ್

error: Content is protected !!