Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮೂಡಾ ಕೇಸ್: ಇಡಿ ತನಿಖೆಗೆ ತಡೆ ಸಿಕ್ಕಿಬಿಟ್ಟರೆ ಕ್ಲೀನ್ ಚಿಟ್ ಸಿಕ್ಕಂತೆ ಆಗುತ್ತಾ..?

---Advertisement---

ಬೆಂಗಳೂರು: ಮೂಡಾ ಹಗರಣದಲ್ಲಿ ಸಿಎಂ ಪತ್ನಿ ಪಾರ್ವತಿ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಬಿಜೆಪಿ ನಾಯಕರು ಈ ಸಂಬಂಧ ದೊಡ್ಡ ಹೋರಾಟವನ್ನೇ ಮಾಡಿದ್ದರು. ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದರು. ಈಗ ಪಾರ್ವತಿ ಅವರಿಗೆ ರಿಲೀಫ್ ಸಿಕ್ಕಿರುವ ಬಗ್ಗೆ ಬಿಜೆಪಿ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ.

ಈ ಸಂಬಂಧ ಅಶ್ವತ್ಥ್ ನಾರಾಯಣ್ ಅವರು ಮಾತನಾಡಿ, ಮೂಡಾ ಹಗರಣದ ವಿಚಾರದಲ್ಲಿ ಬಹಳ ಸ್ಪಷ್ಟವಾಗಿದೆ. ಸನ್ಮಾನ್ಯ ಮುಖ್ಯಮಂತ್ರಿಗಳ ಕುಟುಂಬ ಹಾಗೇ ಬೇರೆ ವ್ಯಕ್ತಿಗಳು ಇನ್ವಾಲ್ ಆಗಿರುವುದು ಎದ್ದು ಕಾಣಿಸ್ತಾ ಇದೆ. ಇವತ್ತು ಕೇವಲ ಇಡಿ ತನಿಖೆ ಮಾಡದೆ ಇರುವುದಕ್ಕೆ ತಡೆ ಸಿಕ್ಕಿರುವುದು. ಇಡಿ ತನಿಖೆಗೆ ತಡೆ ಸಿಕ್ಕಿಬಿಟ್ಟರೆ ಕ್ಲೀನ್ ಚಿಟ್ ಸಿಕ್ಕಂತೆ ಆಗುತ್ತಾ..? ಲೋಕಾಯುಕ್ತ ಪೂರ್ತಿ ತನಿಖೆ ಆಗಲಿ ಅಂತ ಕಾಯ್ತಾ ಇದ್ದಾರೆ. ಇದು ಬಹಳ ಅಗಾಧವಾದ ಕೇಸ್. ಇದು ತುಂಬಾ ಚಿಕ್ಕ ಕೇಸ್. ತನಿಖೆ ಮಾಡಿದರೆ ಎಲ್ಲಾ ಸತ್ಯ ಗೊತ್ತಾಗುತ್ತೆ ಎಂದಿದ್ದಾರೆ.

ಐಸೋಲೇಟೆಡ್ ಕೇಸಲ್ಲಿ ಇಡಿ ಅನ್ನೋದು ಸಣ್ಣ ಭಾಗ. ಹಣ ಬದಲಾವಣೆ ಬಗ್ಗೆ ಇಡಿ ತನಿಖೆ ಮಾಡಬೇಕು ಅಙತ ಹೊರಟಿತ್ತು. ಆದರೆ ಅದಕ್ಕೆ ಸರಿಯಾದ ಬೆಂಬಲ ಸಿಕ್ಕಿಲ್ಲ. ನಂಗೆ ಸಂಪೂರ್ಣ ನಂಬಿಕೆ ಇದೆ. ಈ ಕೇಸಲ್ಲಿ ಯಾರೂ ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಇವರು ಹಗರಣ ಮಾಡಿಲ್ಲ ಅಂತ ಇಲ್ಲ. ಬಹಳ ಸ್ಪಷ್ಟವಾಗಿ ಕಾಣಿಸ್ತಾ ಇದೆ ಹಗರಣ ಆಗಿರುವುದು. ತನಿಖೆ ಆದ ನಂತರ ಕೋರ್ಟ್ ವಿಚಾರಣೆ ನಡೆಯುತ್ತೆ. ತೃಪ್ತಿಕರವಾಗಿದೆಯಾ ಇಲ್ವಾ ಅಂತ ನೋಡಿಕೊಂಡು ಹೋರಾಟದ ಬಗ್ಗೆ ಯೋಚನೆ ಮಾಡ್ತೀವಿ ಎಂಬ ರೀತಿಯಾಗಿ ಮತ್ತೆ ಹೋರಾಟ ಮಾಡ್ತೀರಾ ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...