ಸುದ್ದಿಒನ್, ಮೊಳಕಾಲ್ಮುರು, ಏಪ್ರಿಲ್. 04 : ತಾಲ್ಲೂಕಿನ ತಳಕು ಹೋಬಳಿಯ ರುದ್ರಮ್ಮನಹಳ್ಳಿಯಲ್ಲಿ ನಾಳೆ ( ಏ. 05, ಭಾನುವಾರ) ಉಚಿತ ಆರೋಗ್ಯ ತಪಾಸಣಾ ಶಿಬಿರ ಏರಪಡಿಸಲಾಗಿದೆ.
ಡಿ.ಜಿ.ಎಮ್. ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ, ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಗದಗ,
NIMA, K.S.B ಹಾಗೂ ಜಿಲ್ಲಾ ಘಟಕ ಚಿತ್ರದುರ್ಗ, ಅಮೃತ ಆಯುರ್ವೇದ ಮೆಡಿಕಲ್ ಕಾಲೇಜ್, ಚಿತ್ರದುರ್ಗ ಇವರ ಸಹಯೋಗದೊಂದಿಗೆ ಅಲುಮ್ಮಿ ಅಸೋಸಿಯೆಶನ್ 22ನೇ ಸ್ನೇಹ ಸಿಂಚನ 2026 ಅನುಸ್ಮರಣ – 2001 ನೇ ಬ್ಯಾಚ್ ನವರು ಈ ಉಚಿತ ತಪಾಸಣಾ ಶಿಬಿರ ಆಯೋಜಿಸಿದ್ದಾರೆ.

ಈ ಶಿಬಿರದಲ್ಲಿ ಬಿ.ಪಿ, ಶುಗರ್, ಮಕ್ಕಳ ಆರೋಗ್ಯ ತಪಾಸಣೆ, ಆರೋಗ್ಯಕರ ಜೀವನ ಶೈಲಿಯ ಕುರಿತು ಡಾ. ಸಣ್ಣ ಓಬಯ್ಯ ಅವರು ತಪಾಸಣೆ ನಡೆಸುವರು.
ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಶಿಬಿರ ಆರಂಭವಾಗಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 7899087394 ಸಂಪರ್ಕಿಬಹುದು.
















