Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ आध्यात्मिक अन्य

---Advertisement---

ಮೊಳಕಾಲ್ಮೂರು | ಶ್ರೀ ಕೋಟೆಗುಡ್ಡ ಮಾರಮ್ಮ ಜಾತ್ರೆಗೆ ಸಕಲ ಸಿದ್ಧತೆ

---Advertisement---

 

ಸುದ್ದಿಒನ್, ಮೊಳಕಾಲ್ಮುರು, ಜನವರಿ. 04 : ಶೂನ್ಯಮಾಸದ ಜಾತ್ರೆಗಳಲ್ಲಿ ಜಿಲ್ಲೆಯಲ್ಲಿಯೇ ಬಹಳಷ್ಟು ಪ್ರಸಿದ್ಧವಾಗಿರುವ ತಾಲ್ಲೂಕಿನ ರಾಯಾಪುರದ ಮ್ಯಾಸರಹಟ್ಟಿಯಲ್ಲಿ ನೆಲೆಸಿರುವ ಕೋಟೆಗುಡ್ಡ ಮಾರಮ್ಮ ದೇವಿ’ ಜಾತ್ರೆ ಜ.06ರಂದು ಆರಂಭವಾಗಲಿದೆ.

ಈಗಾಗಲೇ ಗ್ರಾಮದಲ್ಲಿ ಜಾತ್ರೆಗೆ ಸಕಲ ಸಿದ್ಧತೆಗಳು ಆರಂಭವಾಗಿದ್ದು, ಅಂಗಡಿ–ಮುಂಗಟ್ಟುಗಳನ್ನು ಹಾಕಲಾಗುತ್ತಿದೆ. ದೇವಸ್ಥಾನಕ್ಕೆ ಸುಣ್ಣಬಣ್ಣ ಬಳಿದು ಅಲಂಕಾರ ಮಾಡಿ ಜಾತ್ರೆಗೆ ಸಿದ್ಧಗೊಳಿಸುವ ಕಾರ್ಯ ಭರದಿಂದ ಸಾಗಿದೆ.

ಜಾತ್ರೆಯ ಅಂಗವಾಗಿ ಜ,06ಬೆಳಿಗ್ಗೆ ಗಂಗಾಪೂಜೆ, ಸಂಜೆ ಅಗ್ನಿಕುಂಡ, ಕಾಸು ಮೀಸಲು ಅರ್ಪಣೆ ನಡೆಯಲಿದೆ.07ರಂದು ಬೆಳಿಗ್ಗೆ ವಿಶೇಷ ಧಾರ್ಮಿಕ ಕಾರ್ಯಕ್ರಮ, ಸಂಜೆ ವೀರಪೋತ ರಾಜುಲು’ ಅವರಿಂದ ಪೂಜೆ, ವಿಶೇಷವಾಗಿ ಜ,08 ಗುರುವಾರ ಸಂಜೆ 4.30ಕ್ಕೆ ಪ್ರಸಿದ್ಧ ’ಸಿಡಿ ಮಹೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಲಿದೆ. 09ರಂದು ಬೆಳಿಗ್ಗೆ ದೇವಿಯನ್ನು ಗುಡಿ ತುಂಬಿಸುವ ಮೂಲಕ ಜಾತ್ರೆಗೆ ತೆರೆ ಬೀಳಲಿದೆ ಎಂದು ದೇವಸ್ಥಾನ ಸಮಿತಿ ಪ್ರಕಟಣೆ ತಿಳಿಸಿದೆ.

ಹಿನ್ನೆಲೆ: ಹಾನಗಲ್‌ ಸಮೀಪ ಇರುವ ಕೋಟೆಗುಡ್ಡ ಮಾರಮ್ಮದೇವಿ ಮೂಲ ಸ್ಥಳವಾಗಿದ್ದು, ನಂತರ ದೇವಿ ಹಾನಗಲ್‌ ಹಾಗೂ ನೆರೆಯ ಆಂಧ್ರದ ರಾಯದುರ್ಗದಲ್ಲಿ ನೆಲೆಸಿ ಕಳೆದ ನಾಲ್ಕು ದಶಕಗಳ ಹಿಂದೆ ರಾಯಾಪುರದ ದೇವರಹಟ್ಟಿಯಲ್ಲಿ ಬಂದು ನೆಲೆ ನಿಂತಿದೆ.

‘ಹರಕೆ ತೀರಿಸುವ ದೇವಿ’ ಎಂದೇ ಪ್ರಸಿದ್ಧವಾಗಿರುವ ಈ ದೇವಿಗೆ ಬಳೆ, ಹೂವು ಅರ್ಪಣೆ ವಿಶೇಷವಾಗಿ ನಡೆ ಯುತ್ತದೆ. ಇದನ್ನು ಬೆಂಗಳೂರು–
ಬಳ್ಳಾರಿ ರಾಜ್ಯ ಹೆದ್ದಾರಿಗೆ ಅಂಟಿಕೊಂಡಿರುವ ಸ್ಥಳದಲ್ಲಿ ಕಾಣಬಹುದು ಎಂದು ದೇವಸ್ಥಾನ ಪೂಜಾರಿ ನಾಗೇಂದ್ರ ತಿಳಿಸಿದ್ದಾರೆ.

Join WhatsApp

Join Now

Join Telegram

Join Now