ಆಸ್ಟ್ರೇಲಿಯಾ ವಿರುದ್ಧದ ಪಂದ್ಯ ಇನ್ನೇನು ನಡೆಯಬೇಕು ಎನ್ನುವಾಗ್ಲೇ ಪಾಕಿಸ್ತಾನದ ಆರಂಭಿಕ ಹಾಗೂ ಸ್ಪೋಟಕ ಬ್ಯಾಟ್ಸ್ ಮನ್ ಮೊಹಮ್ಮದ್ ರಿಜ್ವಾನ್ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರು. ಈ ಘಟನೆ ಪಾಕ್ ತಂಡದವರನ್ನ ಆತಂಕಕ್ಕೆ ದೂಡಿತ್ತು. ಆ ಬಳಿಕ ರಿಜ್ವಾನ್ ಅವರನ್ನ ಚಿಕಿತ್ಸೆಗೆಂದು ಮುಂಬೈ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದೀಗ ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ.
ರಿಜ್ವಾನ್ ಅವರಿಗೆ ತೀವ್ರತರನಾದ ಎದೆನೋವು ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಅವರಿಗೆ ಸರಿಯಾದ ಚಿಕಿತ್ಸೆ ನೀಡಿ ಬದುಕಿಸಿದ್ದು, ಭಾರತೀಯ ವೈದ್ಯ ಶಹೀರ್ ಅನ್ನೋದು ಮತ್ತೊಂದು ವಿಚಾರ. ದುಬೈನ ಮೆಡೋರ್ ಆಸ್ಪತ್ರೆಗೆ ದಾಖಲಿಸಿದ ಬಳಿಕ, ಅಲ್ಲಿನ ವೈದ್ಯ ಶಹೀರ್ ಸನಲ್ಬದಿನ್ ರಿಜ್ವಾನ್ ಗೆ ಚಿಕಿತ್ಸೆ ನೀಡಿದ್ದರು. ಐಸಿಯು ನಲ್ಲೇ 36 ಗಂಟೆಗಳ ಕಾಲ ಚಿಕಿತ್ಸೆ ಪಡೆದು ರಿಜ್ವಾನ್ ಚೇತರಿಸಿಕೊಂಡಿದ್ದಾರೆ. ಐಸಿಯುನಲ್ಲಿದ್ದಾಗಲೂ ನಾನು ಪಂದ್ಯವಾಡಬೇಕು ಎಂದು ರಿಜ್ವಾನ್ ಹೇಳುತ್ತಿದ್ದರಂತೆ.
ಈ ಬಗ್ಗೆ ವೈದ್ಯ ಶಹೀರ್ ಮಾಹಿತಿ ಹಂಚಿಕೊಂಡಿದ್ದಾರೆ. ಉಸಿರಾಟದ ತೊಂದರೆಯಿದ್ದರು, ನಾನು ಸೆಮಿಫೈನಲ್ ನಲ್ಲಿ ಆಡಲೇಬೇಕು ಎಂಬ ಹುಮ್ಮಸ್ಸು ತೋರಿಸುತ್ತಿದ್ದರು. ಆ ಹುಮ್ಮಸ್ಸಿನಿಂದ ಅವರು ಬೇಗ ಗುಣಮುಖರಾಗಿದ್ದಾರೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇದೇ ಖುಷಿಯಲ್ಲಿ ರಿಜ್ವಾದ್ ಗಿಫ್ಟ್ ವೊಂದನ್ನ ನೀಡಿದ್ದಾರೆ. 16ನೇ ನಂಬರ್ ಜೆರ್ಸಿಯನ್ನ ವೈದ್ಯನಿಗೆ ನೀಡಿದ್ದಾರೆ.