Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮೋದಿಯವರ ಹುಟ್ಟು ಹಬ್ಬ ಸೇವಾ ಪಾಕ್ಷಿಕ : ಶ್ರೀ ಪಾಂಡು ರಂಗನಾಥಸ್ವಾಮಿ ದೇವಸ್ಥಾನದ ಕಲ್ಯಾಣಿ ಸ್ವಚ್ಚ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಚಿತ್ರದುರ್ಗ ಸೆ. 24 : ಭಾರತೀಯ ಜನತಾ ಪಾರ್ಟಿಯವತಿಯಿಂದ ಸೆ. 17 ರಿಂದ ನಡೆಯುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಅಂಗವಾಗಿ ಹಮ್ಮಿಕೊಂಡಿರುವ ಸೇವಾ ಪಾಕ್ಷಿಕ ಅಭಿಯಾನದಡಿಯಲ್ಲಿ ಚಿತ್ರದುರ್ಗ ಗ್ರಾಮಾಂತರ ಮಂಡಲದಿಂದ ಚಿತ್ರದುರ್ಗ ತಾಲ್ಲೂಕಿನ ಗಂಜಿಗಟ್ಟೆ ಗ್ರಾಮದಲ್ಲಿ ಬುಧವಾರ ನಡೆದ ಸ್ವಚ್ಚತಾ ಕಾರ್ಯಕ್ರಮದಲ್ಲಿ ಬೆಟ್ಟದ ಮೇಲಿರುವ ಶ್ರೀ ಪಾಂಡು ರಂಗನಾಥಸ್ವಾಮಿ ದೇವಸ್ಥಾನದ ಕಲ್ಯಾಣಿಯನ್ನು ಸ್ವಚ್ಚ ಮಾಡಲಾಯಿತು.

ಚಿತ್ರದುರ್ಗ ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ಕೆ.ನಾಗರಾಜ್ ಉಪ್ಪನಾಯಕನಹಳ್ಳಿ ಇವರು ಮಾತನಾಡಿ ನಮಗೆ ಸ್ವಚ್ಚತೆ ಅತಿ ಮುಖ್ಯವಾಗಿದೆ ಎಲ್ಲಿ ಸ್ವಚ್ಚತೆ ಇರುವುದಿಲ್ಲವೂ ಅಂತಹ ಪ್ರದೇಶಗಳಲ್ಲಿ ರೋಗಗಳು ಕಾಣುತ್ತವೆ, ನಮ್ಮ ಮನೆ, ಶಾಲೆ, ಆಸ್ಪತ್ರೆ, ಸೇರಿದಂತೆ ಎಲ್ಲಡೆ ಸಹಾ ಸ್ವಚ್ಚತೆಯನ್ನು ಕಾಪಾಡುವುದರ ಮೂಲಕ ನಮ್ಮ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳಬೇಕಿದೆ, ನಮ್ಮ ಮನೆಯ ಕಸವನ್ನು ಬೇರೆಯವರ ಮನೆ ಮುಂದೆ ಹಾಕದೇ ಅದನ್ನು ಕಸದ ಗಾಡಿಯಲ್ಲಿ ಅಥವಾ ಕಸದ ತೊಟ್ಟಿಯಲ್ಲಿ ಹಾಕುವುದರ ಮೂಲಕ ಸ್ವಚ್ಚತೆಯನ್ನು ಕಾಪಾಡಬೇಕಿದೆ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಚಿತ್ರದುರ್ಗ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಸಚಿನ್, ಯುವ ಮೋರ್ಚಾದ ಅಧ್ಯಕ್ಷ ಸಿದ್ದೇಶ್, ಗ್ರಾಮದ ಮುಖಂಡರಾದ ಆನಂದಪ್ಪ, ರಮೇಶ್ ಪಮಡರಹಳ್ಳಿ, ವಿನಯ ನಂದಿಪುರ, ರಾಘವೇಂದ್ರ ಗಂಜಿಗಟ್ಟೆ ಪ್ರಾಣೇಶ್ ಸೇರಿದಂತೆ ಭಾಗವಹಿಸಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...