Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ನಮ್ಮ ದೇಶದ ಯುವ ಶಕ್ತಿಯನ್ನು ಮೋದಿ ಸರಿಯಾಗಿ ಬಳಸಿಕೊಳ್ತಿಲ್ಲ : ಸಿದ್ದರಾಮಯ್ಯ

Facebook
Twitter
Telegram
WhatsApp

ಬೆಂಗಳೂರು: ಯೂತ್ ಕಾಂಗ್ರೆಸ್ ವತಿಯಿಂದ ಅರಮನೆ ಆವರಣದಲ್ಲಿ ಸಭೆ ಆಯೋಜನೆ ಮಾಡಲಾಗಿದೆ. ಕಾರ್ಯಕ್ರಮಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ರಾಷ್ಟ್ರೀಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಭಾಗಿಯಾಗಿದ್ದಾರೆ.

ಈ ಕಾರ್ಯಕ್ರಮದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿದ್ದು, ದೇಶದಲ್ಲಿ ೫೦% ಯುವಜನರಿದ್ದಾರೆ. ಜಗತ್ತಿನ ಯಾವ ದೇಶದಲ್ಲೂ ಇಷ್ಟು ಯುವಶಕ್ತಿ ಇಲ್ಲ. ಯುವಶಕ್ತಿಯನ್ನ ನಾವು ಬಳಸಿಕೊಳ್ಳಬೇಕು. ಆಗ ಮಾತ್ರ ದೇಶವನ್ನ ಕಟ್ಟೋಕೆ‌ ಸಾಧ್ಯವಾಗುತ್ತದೆ.

ನಮ್ಮ ದೇಶದಲ್ಲಿ ಯುವ ಶಕ್ತಿ‌ಬಳಸಿಕೊಳ್ತಿಲ್ಲ. ಅದರಲ್ಲೂ ಮೋದಿ ಸರಿಯಾಗಿ ಬಳಸಿಕೊಳ್ತಿಲ್ಲ. ಯುವಕರಿಂದ ಕೆಲಸವನ್ನ ತೆಗೆಸ್ತಿಲ್ಲ. ಯುವಕರಿಗೆ ಉದ್ಯೋಗಗಳನ್ನ ಕೊಡ್ತಿಲ್ಲ. ಮೋದಿ‌ ಸರ್ಕಾರವನ್ನ ಯುವಕರು ಖಂಡಿಸಬೇಕು ಎಂದಿದ್ದಾರೆ. ಸುಬ್ರಮಣ್ಯಂ ಸ್ವಾಮಿ ಟ್ವೀಟ್ ಮಾಡಿದ್ದಾರೆ. ಸುಬ್ರಮಣ್ಯಂ ಸ್ವಾಮಿ ಬಿಜೆಪಿಯವರು. ಆರ್ಥಿಕತೆಯಲ್ಲಿ ಹಿಂದೆ ೧೦೩ನೇ ಸ್ಥಾನಕ್ಕೆ ಬಂದಿದ್ದೆವು. ಮನಮೋಹನ್ ಸಿಂಗ್ ಕಾಲದಲ್ಲಿ ಬಂದಿದ್ದೆವು. ಇವತ್ತು ೧೪೪ ನೇ ಸ್ಥಾನಕ್ಕೆ ಹೋಗಿದ್ದೇವೆ. ಎಂಎಸ್ ಎಂಇ ಸೃಷ್ಟಿಸಿದ್ದ ಉದ್ಯೋಗ ೧೦ ಕೋಟಿ. ಈಗ ಇವುಗಳ ಉದ್ಯೋಗ ೨.೩ ಕೋಟಿ ಮಾತ್ರ. ಉದ್ಯೋಗಾವಕಾಶದಲ್ಲೂ ಕುಸಿತವಾಗಿದೆ. ಇದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ. ಕೇಂದ್ರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ

ಕೇಂದ್ರ ಅಗ್ನಿಪಥ್ ಯೋಜನೆ ತಂದಿದೆ. ೧೭ ವರ್ಷಕ್ಕೆ ಕೆಲಸಕ್ಕೆ ಸೇರಬೇಕು. ನಾಲ್ಕು ವರ್ಷದ ನಂತರ ವಾಪಸ್ ಬರಬೇಕು. ಆ ನಂತರ ಅವರ ಜೀವನ ಹೇಗೆ ನಡೆಸಬೇಕು. ಮತ್ತೆ ಅವರನ್ನ ನಿರುದ್ಯೋಗಿಗಳನ್ನ ಮಾಡೋದು. ಮೋದಿ ರೈತರ ಬಗ್ಗೆ ಎಲ್ಲಾದ್ರೂ ಮಾತನಾಡ್ತಾರ?. ಯುವಕ ಭವಿಷ್ಯದ ಬಗ್ಗೆ ಮಾತನಾಡ್ತಾರಾ..? ಯುವಕರಿಗೆ ಉದ್ಯೋಗ ಕೊಡಿ ಅಂದ್ರೆ ಇಲ್ಲ. ಹಿಂದೆ ಯುವಕರು ಮೋದಿ ಮೋದಿ ಅಂತಿದ್ರು. ಯುವಕರಿಗೆ ಎಂಥ ಕೆಟ್ಟ ಪರಿಸ್ಥಿತಿ ತಂದಿಟ್ಟಿದ್ದಾರೆ ನೋಡಿ.

ಚೀನಾದಲ್ಲಿ ತಲಾ ಆದಾಯ ೧೨.೫೦೦ ಸಾವಿರ ಡಾಲರ್.‌ನಮ್ಮ ದೇಶದಲ್ಲಿ ೧೮೫೦ ಡಾಲರ್ ಇದೆ. ತಲಾ ಆದಾಯ ಹೆಚ್ಚಳ ಮಾಡುವ ಕೆಲಸ ಮಾಡ್ತಿಲ್ಲ. ದೇಶದ ಆರ್ಥಿಕತೆ ಅದೋಗತಿಗೆ ಹೋಗ್ತಿದೆ. ಕೇಂದ್ರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಆರ್ ಎಸ್ ಎಸ್ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದು, ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ತ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಡೀ ಪಠ್ಯವನ್ನ ಕೇಸರೀಕರಣ ಮಾಡಿದ್ದಾರೆ. ಮಕ್ಕಳಿಗೆ ವಿಷ ಕೊಡೋಕೆ ಹೊರಟಿದ್ದಾರೆ. ಆರ್ ಎಸ್ ಎಸ್ ಅವರ ಹಿಡನ್ ಅಜೆಂಡಾ ಎಲ್ಲರೂ ತಿಳ್ಕೋಬೇಕು. ಆರ್ ಎಸ್ ಎಸ್ ಲೀಡರ್ ಗಳು ಎಲ್ಲದಕ್ಕೂ ಮುಂದೆ ಬರಲ್ಲ. ಒರಿಜಿನಲ್ ಆರ್ ಎಸ್ ಎಸ್ ನವರು ಚಡ್ಡಿ ಹೊತ್ತು ಬರಲಿಲ್ಲ. ದಲಿತರ ಮೇಲೆ ಚಡ್ಡಿ ಹೊರಿಸಿ ಕಳಿಸಿದ್ರು. ಎನ್ ಎಸ್ ಯುಐ ಅಧ್ಯಕ್ಷ ಚಡ್ಡಿ ಸುಟ್ಟಿದ್ದಕ್ಕೆ ಜೈಲಿಗೆ ಕಳಿಸಿದ್ದರು. ಈ ದೇಶದಲ್ಲಿ ಯಾವ ಸಮಸ್ಯೆ ಬಗ್ಗೆಯೂ ಮಾತಾಡುವಂತಿಲ್ಲ. ವಾಸ್ತವ ಸಮಸ್ಯೆಗಳನ್ನ ಮುಚ್ಚಿಟ್ಟು, ಭಾವನಾತ್ಮಕ ವಿಚಾರಗಳನ್ನು ಮುನ್ನಲೆಗೆ ತರ್ತಿದ್ದಾರೆ. ಆರ್ ಎಸ್ ಎಸ್ ಮತ್ತು ಬಿಜೆಪಿಯವರು. ಇವತ್ತು ಸಂವಿಧಾನ ಅಪಾಯದಲ್ಲಿದೆ. ಪ್ರಜಾಪ್ರಭುತ್ವ ಅಪಾಯದಲ್ಲಿದೆ. ದೇಶಕ್ಕಾಗಿ ಪ್ರಾಣ ಕಳೆದುಕೊಂಡವರು ಕಾಂಗ್ರೆಸ್ ನವರೇ ಹೊರತು ಬಿಜೆಪಿಯವರಲ್ಲ. ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ಸಂವಿಧಾನ ಓದುವಂತೆ ಸಿದ್ದರಾಮಯ್ಯ ಸಲಹೆ

ದೇಶದ ಬೆಲೆ ಗೊತ್ತಿರೋದು ಕಾಂಗ್ರೆಸ್ ನವರಿಗೆ ಮಾತ್ರ. ಬಿಜೆಪಿಯವರು ಯಾವತ್ತೂ ತಳ ಸಮುದಾಯದವರ ಬಗ್ಗೆ ಯೋಚನೆ ಮಾಡಲ್ಲ. ವಿಪಿ ಸಿಂಗ್ ಅವರುಮೀಸಲಾತಿ ಕೊಡೋದಾಗಿ ಹೇಳಿದಾಗ ವಿರೋಧ ಮಾಡಿದ್ಯಾರು?. ಇದೇ ಬಿಜೆಪಿಯ ಅಡ್ವಾಣಿಯವರು ರಥಯಾತ್ರೆ ಹೊರಟ್ರು. ಅನಂತ್ ಕುಮಾರ್ ಕೂಡ ವಿರೋಧಿಸಿದ್ರು ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಬೇಸಿಗೆಯಲ್ಲಿ ಕೂದಲಿಗೆ ಎಣ್ಣೆ ಹಚ್ಚಿದರೆ ಏನಾಗುತ್ತೆ ಗೊತ್ತಾ ?

ಸುದ್ದಿಒನ್ : ಹವಾಮಾನದ ಬದಲಾವಣೆಗೆ ಅನುಗುಣವಾಗಿ ಚರ್ಮ ಮತ್ತು ಕೂದಲಿಗೆ ಸರಿಯಾದ ಪೋಷಣೆ ನೀಡಬೇಕು. ಇಲ್ಲದಿದ್ದರೆ ಖಂಡಿತವಾಗಿಯೂ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಲ್ಲದೆ, ಅನೇಕ ಜನರು ತಮ್ಮ ಕೂದಲಿಗೆ ಎಣ್ಣೆಯನ್ನು ಹಾಕುವುದಿಲ್ಲ ಏಕೆಂದರೆ ಅದು ಬೇಸಿಗೆಯಲ್ಲಿ

ಈ ರಾಶಿಯವರು ತುಂಬಾ ಪ್ರೀತಿಸುವರು ಆದರೆ ಬೇರೆಯವರ ಜೊತೆ ಮದುವೆ ಒಳ್ಳೆಯದಲ್ಲ

ಈ ರಾಶಿಯವರು ತುಂಬಾ ಪ್ರೀತಿಸುವರು ಆದರೆ ಬೇರೆಯವರ ಜೊತೆ ಮದುವೆ ಒಳ್ಳೆಯದಲ್ಲ, ಗುರುವಾರ ರಾಶಿ ಭವಿಷ್ಯ -ಮೇ-2,2024 ಸೂರ್ಯೋದಯ: 05:53, ಸೂರ್ಯಾಸ್ತ : 06:32 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ ,

ಇಂದಿನಿಂದ ರಾಜ್ಯಾದ್ಯಂತ ಮಳೆ : ಬೆಂಗಳೂರಿಗೆ ಮಳೆ ದರ್ಶನ ಯಾವಾಗಿಂದ..?

ಬೆಂಗಳೂರು: ಬಿಸಿಲಿನ ತಾಪ ಅದ್ಯಾಕೆ ದಿನೇ ದಿನೇ ಏರಿಕೆಯಾಗುತ್ತಿದೆಯೋ ತಿಳಿದಿಲ್ಲ. ಜನರಂತು ಬಿಸಿಲಿನ ಬೇಗೆಗೆ ಹೈರಾಣಾಗಿ ಹೋಗಿದ್ದಾರೆ. ಕಳೆದ ವರ್ಷವಂತು ಮಳೆಯಿಲ್ಲ ಈ ವರ್ಷ ಮೊದಲ ಮಳೆಯೂ ಸರಿಯಾಗಿ ಆಗಿಲ್ಲ. ಮೇ ತಿಂಗಳಿಗೆ ಬಂದರೂ

error: Content is protected !!