ಚಿಕ್ಕಬಳ್ಳಾಪುರ: ಮೋದಿಯವರಿಗೆ ದಕ್ಷಿಣ ಭಾರತದಲ್ಲಿ ಕರ್ನಾಟಕವೇ ಬಹಳ ಮುಖ್ಯ. ದಕ್ಷಿಣ ಭಾರತ ಹೆಬ್ಬಾಗಿಲು ಕರ್ನಾಟಕ. ಹೀಗಾಗಿ ಕರ್ನಾಟಕದ ಬಗ್ಗೆ ಮೋದಿಯವರಿಗೆ ಅತಿ ಹೆಚ್ಚು ಪ್ರೀತಿ ಇರುವಂತ ಕ್ಷೇತ್ರವಾಗಿದೆ ಎಂದು ಸಚಿವ ಆರ್ ಅಶೋಕ್ ಹೇಳಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಪ್ರಧಾನಿ ಮೋದಿ ಬಗ್ಗೆ ಮಾತನಾಡಿದ್ದರು. ಗಣರಾಜ್ಯೋತ್ಸವ ಟ್ಯಾಬ್ಲೋ ವಿಚಾರಕ್ಕೆ ಮಾತನಾಡಿದ್ದ ಡಿಕೆಶಿ, ಕರ್ನಾಟಕದ ಬಗ್ಗೆ ಮೋದಿಗೆ ಗೌರವ ಇಲ್ಲ. ಕೇಳುವ ಧೈರ್ಯವೂ ಇಲ್ಲ ಎಂದಿದ್ದರು. ಇದಕ್ಕೆ ತಿರುಗೇಟು ನೀಡಿರುವ ಸಚಿವ ಆರ್ ಅಶೋಕ್, ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರನ್ನು ಕಂಡರೆ ಡಿಕೆ ಶಿವಕುಮಾರ್ ಅವರಿಗೆ ಭಯ. ಅತಿವೃಷ್ಟಿ ಆದಾಗ ಅತಿ ಹೆಚ್ಚು ಹಣವನ್ನು ಕೇಂದ್ರ ಸರ್ಕಾರ ನೀಡಿದೆ. ಕಾಂಗ್ರೆಸ್ ಸರ್ಕಾರವಿದ್ದಾಗ ಒಂದು ವರ್ಷ ಕಾಯಿಸಿದ್ದರು. ಈಗ ಒಂದೇ ತಿಂಗಳಲ್ಲಿ ಪರಿಹಾರ ಸಿಗುತ್ತಾ ಇದೆ.

ರೈಲ್ವೇ, ಹೈವೇ, ನೀರಾವರಿಗೆ ಅತಿಹೆಚ್ಚು ಅನುದಾನ ನೀಡುತ್ತಿದ್ದಾರೆ. ಕಳಸಾ ಬಂಡೂರಿ ಯೋಜನೆಗೆ ಕ್ಲಿಯರೆನ್ಸ್ ಕೂಡ ನೀಡಿದ್ದಾರೆ. ಕಾಂಗ್ರೆಸ್ ಇದ್ದಾಗ ಯಾಕೆ ಕೊಡಲಿಲ್ಲ. ಮನಮೋಹನ್ ಸಿಂಗ್ ಇದ್ದಾಗಲೂ ಮೇಕೆದಾಟು, ಮಹದಾಯಿ ಜ್ಞಾಪಕ ಬರಲಿಲ್ಲವಾ ಎಂದು ಪ್ರಶ್ನಿಸಿದ್ದಾರೆ.

