ಧಾರವಾಡ: ಎಲ್ಲರೂ ಬಹಳ ಕುತೂಹಲದಿಂದ ಕಾಯ್ತಾ ಇದ್ದಂತ ತೀರ್ಪು ಇದೀಗ ಪ್ರಕಟವಾಗಿದೆ. ಶಾಸಕ ವಿನಯ್ ಕುಲಕರ್ಣಿಗೆ ಜನಪ್ರತಿನಿಧಿಗಳ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿದೆ. ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ 15ನೇ ಆರೋಪಿಯಾಗಿದ್ದರು. ಇದೀಗ ವಿನಯ್ ಕುಲಕರ್ಣಿ ಸೇರಿದಂತೆ 16 ಮಂದಿಗೆ ಜೀವಾವಧಿ ಶಿಕ್ಷೆಯನ್ನು ನೀಡಲಾಗಿದೆ. 19ನೇ ಆರೋಪಿ ಚನ್ನಕೇಶವನಿಗೆ ಮಾತ್ರ ಏಳು ವರ್ಷಗಳ ಕಾಲ ಶಿಕ್ಷೆ ನೀಡಲಾಗಿದೆ.
ಜೀವಾವಧಿ ಶಿಕ್ಷೆಗೆ ಗುರಿಯಾದ ಕಾರಣ ಶಾಸಕ ಸ್ಥಾನದಿಂದಾನೂ ವಿನಯ್ ಕುಲಕರ್ಣಿ ವಜಾಗೊಂಡಿದ್ದಾರೆ. 2016ರ ಜೂನ್ 5 ರಂದು ನಡೆದ ಘಟನೆ ಇದಾಗಿದೆ. ಧಾರವಾಡದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಯೋಗೀಶ್ ಗೌಡ ಅವರನ್ನ ದುಷ್ಕರ್ಮಿಗಳು ಜಿಮ್ ನಲ್ಲಿಯೆರ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಧಾರವಾಡ ಉಪನಗರ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದರು.

ವಿಕ್ರಮ್, ಕೀರ್ತಿ ಕುಮಾರ್, ಸಂದೀಪ್, ವಿನಾಯಕ್, ಮಹಾಬಲೇಶ್ವರ್, ಸಂತೋಷ್, ದಿನೇಶ್, ಅಶ್ವತ್ಥ್, ಸುನೀಲ್, ನಜೀರ್ ಅಹ್ಮದ್, ಷಾನವಾಜ್, ನೂತನ್, ಹರ್ಷಿತ್, ವಿನಯ್ ಕುಲಕರ್ಣಿ, ಚಂದ್ರು ಮಾಮ, ವಿಕಾಸ್ ಕಲಬುರಗಿ, ಚನ್ನಕೇಶವ ಟಿಂಗರಿಕರ್, ವಾಸುದೇವ ನಿಲೇಕಣಿ, ಸೋಮಶೇಖರ್ ಅವರನ್ನು ಈ ಕೇಸಲ್ಲಿ ಆರೋಪಿಗಳ ಸ್ಥಾನದಲ್ಲಿ ನಿಲ್ಲಿಸಲಾಗಿತ್ತು. ಆಸ್ತಿ ವಿವಾದದ ವಿಚಾರಕ್ಕೆ ಈ ಕೊಲೆ ನಡೆದಿತ್ತು ಎನ್ನಲಾಗಿದ್ದು, ಕಳೆದ ಹತ್ತು ವರ್ಷಗಳಿಂದಾನೂ ಈ ಕೇಸ್ ನಡೀತಾ ಇತ್ತು. ಇಂದು ಮಹತ್ವದ ತೀರ್ಪು ಹೊರಬಿದ್ದಿದ್ದು, ಆರೋಪಿಗಳಿಗೆ ಜೀವಾವಧಿ ಶಿಕ್ಷೆಯನ್ನ ಕೋರ್ಟ್ ವಿಧಿಸಿದೆ. ಇದರಿಂದ ಯೋಗೀಶ್ ಗೌಡ ಕುಟುಂಬಸ್ಥರು ಖುಷಿಯಾಗಿದ್ದಾರೆ. ಜೀವಾವಧಿ ಶಿಕ್ಷೆ ನೀಡಲಿ ಎಂದೆ ಬಯಸಿದ್ದರು.
















