ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಶಾಸಕ ರಘುಮೂರ್ತಿ ಭೇಟಿ ;  ಶೀಘ್ರ ಪರಿಹಾರದ ಭರವಸೆ

suddionenews
1 Min Read

ಸುದ್ದಿಒನ್, ಚಳ್ಳಕೆರೆ, (ಅ.15): ನಗರದ ಗಾಂಧಿನಗರ, ಅಂಬೇಡ್ಕರ್ ನಗರ, ರಹೀಂ ನಗರ, ಚಿತ್ರಯ್ಯನಹಟ್ಟಿಯಲ್ಲಿ ಮಳೆಯಿಂದ ಹಾನಿಯಾದ ಮನೆಗಳನ್ನು ಶುಕ್ರವಾರ ಶಾಸಕ ಟಿ.ರಘುಮೂರ್ತಿ ವೀಕ್ಷಣೆ ಮಾಡಿ, ಪರಿಹಾರ ಕೊಡಿಸುವುದಾಗಿ ಸಂತ್ರಸ್ಥರಿಗೆ ಸಂತ್ವಾನ ಹೇಳಿದ ಅವರು ಮಳೆಯಿಂದ ಹಾನಿಗೊಳಗಾದ ಮನೆಗಳ ವರದಿಯನ್ನು ಸರ್ಕಾರಕ್ಕೆ ಶೀಘ್ರವೇ ಸಲ್ಲಿಸಿ ಸಂತ್ರಸ್ಥರಿಗೆ ಪರಿಹಾರ ದೊರಕಿಸಿಕೊಡಬೇಕು ಎಂದು ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.

ನಗರದಲ್ಲಿ ಮಳೆಯಿಂದ ಹಲವು ಮನೆಗಳು ಕುಸಿದಿವೆ, ಮಣ್ಣಿನ ಮನೆಗಳ ಹೆಚ್ಚಿನದಾಗಿ ಬಿದ್ದಿವೆ, ಇನ್ನು ಬೀಳು ಅಂತದಲ್ಲಿರುವ ಮನೆಗಳನ್ನು ಗುರಿತಿಸಬೇಕು, ಮಳೆ ಬಂದಾಗ ಆ ಮನೆಗಳು ಕುಸಿದು ಬಿದ್ದು ಅಪಾಯವಾಗುವುದನ್ನು ತಪ್ಪಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ರಾಜಕಾಲುವೆಗಳಲ್ಲಿ ನೀರು ಸರಗವಾಗಿ ಹರಿಯುವಂತೆ ರಾಜ ಕಾಲುವೆಯಲ್ಲಿ ಬೆಳಿದಿರುವ ಸೀಮೆಜಾಲಿ ಗಿಡಗಳನ್ನು ಸ್ವಚ್ಚ ಮಾಡಬೇಕು. ಕಾಲುವೆಯಲ್ಲಿ ಉಳೆತ್ತುವ ಕೆಲಸವಾಗಬೇಕು, ರಾಜ ಕಾಲುವೆಗಳನ್ನು ಉಳೆತ್ತದೆ ಇರುವುದರಿಂದ ಮಳೆ ಹೆಚ್ಚಿನದಾಗಿ ಸುರಿದಾಗ ರಾಜಕಾಲುವೆ ಕಾಲುವೆ ತುಂಬಿ ಮನೆಗಳಿಗೆ ನೀರು ನುಗ್ಗುತ್ತದೆ. ಆದಷ್ಟು ಕಾಲುವೆಗಳನ್ನು ಆಗಾಗ ಸ್ವಚ್ಚಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ನೋಡಿಕೊಳ್ಳಬೇಕು ಎಂದರು.

ಈ ವೇಳೆ ನಗರಸಭೆ ಅಧ್ಯಕ್ಷೆ ಸಿ.ಬಿ. ಜಯಲಕ್ಷ್ಮಿ,  ಸ್ಥಾಯಿಸಮಿತಿ ಅಧ್ಯಕ್ಷ ರಮೇಶ್ ಗೌಡ, ತಹಶೀಲ್ದಾರ್ ಎನ್. ರಘುಮೂರ್ತಿ, ಪೌರಾಯುಕ್ತ ಪಾಲಯ್ಯ, ಸದಸ್ಯರಾದ ಸುಜಾತ ಪಾಲಯ್ಯ, ಕವಿತಾ, ನಗರಸಭೆ ಮಾಜಿ ಸದಸ್ಯ ಪ್ರಸನ್ನಕುಮಾರ್, ಮುಖಂಡರಾದ ಬೋರಯ್ಯ, ಪಾಲಯ್ಯ ಇದ್ದರು.

Share This Article
Leave a Comment

Leave a Reply

Your email address will not be published. Required fields are marked *