Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಶಾಸಕ ಎನ್ ವೈ ಗೋಪಾಲಕೃಷ್ಣ ಅವರನ್ನು ವೈಯಕ್ತಿಕವಾಗಿ ತೇಜೋವಧೆ ಮಾಡಿಲ್ಲ : ಕೆಜೆ ಜಯಲಕ್ಷ್ಮಿ ಸ್ಪಷ್ಟನೆ

---Advertisement---

 

ವರದಿ ಮತ್ತು ಫೋಟೋ ಕೃಪೆ
ಹೆಚ್. ಮಹಾಂತೇಶ್, ರಾಯಾಪುರ.
ಮೊ : 93806 27082

ಸುದ್ದಿಒನ್, ನಾಯಕನಹಟ್ಟಿ, ಆಗಸ್ಟ್ . 08 : ಗರ್ಭಿಣಿ ಸ್ತ್ರೀಯರ ಮತ್ತು ಬಾಣಂತಿಯರು ಪಡುವ ಕಷ್ಟಗಳು ಅವರ ಬವಣೆ ನೋಡಿ ಸರ್ಕಾರಿ ಆಸ್ಪತ್ರೆಗೆ ಪ್ರಸೂತಿ ವೈದ್ಯರನ್ನು ನೇಮಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇನೆ ಹೊರತು ಶಾಸಕ ಎನ್. ವೈ. ಗೋಪಾಲಕೃಷ್ಣ ಅವರನ್ನು ವೈಯಕ್ತಿಕವಾಗಿ ತೇಜೋವಧೆ ಮಾಡಿಲ್ಲ ಎಂದು ಹಂಪಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಕೆಜೆ ಜಯಲಕ್ಷ್ಮಿ ಸ್ಪಷ್ಟಿಕರಣ ನೀಡಿದ್ದಾರೆ.

ನಾಯಕನಹಟ್ಟಿ ಪಟ್ಟಣದಲ್ಲಿ ಶುಕ್ರವಾರದಂದು ಈ ಕುರಿತಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬುಡಕಟ್ಟು ಸಮುದಾಯದ ಮಹಿಳೆ ಸಾಮಾಜಿಕ ಚಳುವಳಿಗಳಿಂದಲೆ ಬೆಳೆದು ಬಂದವಳು. ಶೋಷಿತ ಸಮುದಾಯಗಳ ಹಕ್ಕುಗಳಿಗಾಗಿ ನಿರಂತರವಾಗಿ ಹೋರಾಟ ಮಾಡುತ್ತಿದ್ದೇನೆ. ಮೊಳಕಾಲ್ಮುರು ಕ್ಷೇತ್ರ ತುಂಬಾ ಹಿಂದುಳಿದ ಕ್ಷೇತ್ರ ಬುಡಕಟ್ಟು ಮತ್ತು ಶೋಷಿತ,ಬಡ ಜನರೇ ಹೆಚ್ಚಿರುವ ಕ್ಷೇತ್ರ, ನಾನು ಸಹ ಒಬ್ಬ ಈ ಹೆಣ್ಣು ಮಗಳಾಗಿ ಗರ್ಭಿಣಿ ಮತ್ತು ಬಾಣಂತಿಯರ ಮಹಿಳೆಯರು ಅನುಭವಿಸುವ ಯಾತನೆಗಳ ಬಗ್ಗೆ ನನಗೆ ಅರಿವಿದೆ. ಹಾಗಾಗಿ ಸರ್ಕಾರಿ ಆಸ್ಪತ್ರೆಗೆ ಹೆರಿಗೆ ವೈದ್ಯರನ್ನು ನೇಮಿಸುವಂತೆ ನನ್ನದೇ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದೇನೆ.ಇದರಲ್ಲಿ ಯಾವುದೇ ವೈಯಕ್ತಿಕವಾಗಿ ತೇಜೋವಧೆ ಮಾಡಿಲ್ಲ.

ಶಾಸಕರನ್ನು ನಿಂದಿಸುವಷ್ಟು ದೊಡ್ಡವಳಲ್ಲ, ನಾನು ರೈತನ ಮಗಳು ಏಳು ಸಲ ಗೆದ್ದಿರುವ ಶಾಸಕರ ಬಗ್ಗೆ ನನಗೆ ಅಪಾರವಾದ ಗೌರವ ಅಭಿಮಾನವಿದೆ. ಶಾಸಕರು ವಿದ್ಯಾವಂತ ಕುಟುಂಬದಿಂದ ಬಂದವರು,ನಾನು ಕೂಡ ವಿದ್ಯಾವಂತಳು ನನ್ನ ಕ್ಷೇತ್ರಕ್ಕೆ ವೈದ್ಯರು ಬೇಕು ಅಂತ ಕೇಳಿದ್ದೆ, ಇದನ್ನೇ ತಪ್ಪಾಗಿ ಅರ್ಥೈಸಿಕೊಂಡು ಕ್ಷೇತ್ರದ ಶಾಸಕರ ಬೆಂಬಲಿಗರು ಕೆಪಿಸಿಸಿ ಮಹಿಳಾ ವಿಭಾಗದ ರಾಜ್ಯಾಧ್ಯಕ್ಷೆ ಸೌಮ್ಯ ರೆಡ್ಡಿ ಅವರಿಗೆ ದೂರು ಕೊಟ್ಟಿದ್ದಾರೆ,ದೂರು ಕೊಡುಲು ಹೋದ ನೂರಾರು ಸಾರ್ವಜನಿಕರ ಎದುರು ಸೌಮ್ಯ ರೆಡ್ಡಿ ಅವರು ಮೆಂಟಲ್ ಎಂದಿದ್ದಾರೆ ಇದು ನನ್ನ ಮನಸ್ಸಿಗೆ ತುಂಬಾ ಘಾಸಿ ಉಂಟು ಮಾಡಿದೆ.

ಸಾರ್ವಜನಿಕರ ಎದುರು ಹೆಣ್ಣುಮಕ್ಕಳ ಬಗ್ಗೆ ಇನ್ನೊಬ್ಬ
ಹೆಣ್ಣು ಮಗಳು ಅಪಮಾನ ಮಾಡುವುದು ಸರಿಯಲ್ಲ.ನನ್ನನ್ನು ಮೆಂಟಲ್ ಎಂದು ಸರ್ಟಿಫೈ ಮಾಡಲು ಸೌಮ್ಯ ರೆಡ್ಡಿ ಅವರು ವೈದ್ಯರಲ್ಲ ಅವರು ವಿದ್ಯಾವಂತರು ಈ ರೀತಿ ಮಾತನಾಡುವ ಮುನ್ನ ನಮ್ಮದೇ ಪಕ್ಷದ ಮಹಿಳೆಗೆ ಅವಮಾನ ಮಾಡುತ್ತಿದ್ದೇನೆ ಎಂದು ತಿಳಿಯಬೇಕಿತ್ತು ನನಗೂ ಕೂಡ ತುಂಬಾ ನೋವಾಗಿದೆ.

ನಾನು ಕೂಡ ಈ ಬಗ್ಗೆ ವರಿಷ್ಟರ ಗಮನಕ್ಕೆ ತರುತ್ತೇನೆ,ಕೆಪಿಸಿಸಿ ಮಹಿಳಾ ವಿಭಾಗದಲ್ಲಿ ನಾನು ಕೂಡ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ,ಪಕ್ಷಕೋಸ್ಕರ ದುಡಿದಿದ್ದೇನೆ ವರುಣ ಕ್ಷೇತ್ರದ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯ ಪರವಾಗಿ ಅವರ ಅಭಿಮಾನಿಯಾಗಿ ಪ್ರಚಾರದಲ್ಲಿ ತೊಡಗಿದ್ದೇನೆ ನನಗೂ ನನ್ನ ಕುಟುಂಬಕ್ಕೂ ಗೌರವಿದೆ, ಬುಡಕಟ್ಟು ಸಮುದಾಯದಿಂದ ರಾಜಕೀಯಕ್ಕೆ ಬರುವ ಮಹಿಳೆಯರ ಸಂಖ್ಯೆ ತೀರ ಕಮ್ಮಿ ಇಂಥದ್ರಲ್ಲಿ ನಾನು ಸಾರ್ವಜನಿಕರ ಸೇವೆಗೆಂದು ಸರ್ಕಾರಿ ನೌಕರಿಯನ್ನು ತೊರೆದು ಜನರ ಸೇವೆಗೆಂದು ಬಂದಿರುವೆ, ಆದರೆ ನನ್ನನ್ನು ಮೆಂಟಲ್ ಕೇಸ್ ಎಂದು ಬಿಂಬಿಸಲು ಹೊರಟ ಶಾಸಕರ ಬೆಂಬಲಿಗರು ಮತ್ತು ಮೆಂಟಲ್ ಕೇಸ್ ಎಂದ ಸೌಮ್ಯ ರೆಡ್ಡಿ ಬಗ್ಗೆ ಮುಂದಿನ ದಿನಗಳಲ್ಲಿ ಕಾನೂನುತ್ಮಕವಾಗಿ ಉತ್ತರ ನೀಡುವೆ ಎಂದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...