ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ, ಜುಲೈ. 28 : ತಾಲೂಕು ಬಹುತೇಕ ಗ್ರಾಮಗಳು ಗುಡ್ಡಗಳ ಸಮೀಪ ಇರುವುದರಿಂದ ಕಾಡುಪ್ರಾಣಿಗಳ ಓಡಾಟ ಹೆಚ್ಚಿರುತ್ತದೆ ಹಾಗಾಗಿ ಸಾರ್ವಜನಿಕರು ಜಾಗೃತೆಯಿಂದ ಇರಬೇಕಾಗುತ್ತದೆ ಎಂದು ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಅವರು ತಿಳಿಸಿದರು.
ತಾಲೂಕಿನ ಅನ್ನೇಹಾಳ್ ಗ್ರಾಮಕ್ಕೆ ಸೋಮವಾರ ಭೇಟಿ ನೀಡಿ ಚಿರತೆ ದಾಳಿಗೆ ಒಳಗಾದ ಗ್ರಾಮದ ನಿವಾಸಿ ಸಿದ್ದೇಶ್ ಅವರ ಆರೋಗ್ಯವನ್ನು ವಿಚಾರಿಸಿ ಕುಟುಂಬಸ್ಥರಿಗೆ ಆತ್ಮಸ್ಥೈರ್ಯವನ್ನು ತುಂಬಿ ಮಾತನಾಡಿದರು. ರೈತಾಪಿ ವರ್ಗದವರು ಯಥೇಚ್ಛವಾಗಿ ತೋಟ ಹೊಲಗಳಿಗೆ ರಾತ್ರಿ ವೇಳೆ ಹೋಗುವುದರಿಂದ ಇಂತಹ ಅನಾಹುತಗಳಿಗೆ ತುತ್ತಾಗುತ್ತಿದ್ದಾರೆ ತಾವುಗಳು ಎಚ್ಚರಿಕೆಯಿಂದ ತೋಟ, ಹೊಲಗಳಿಗೆ ಬೆಳಗಿನ ಸಮಯಹೋಗಿ ಕೆಲಸಗಳನ್ನು ಮಾಡಿಕೊಳ್ಳಿ ಎಂದು ತಿಳಿಸಿದರು.
ಓಬಣ್ಣನಹಳ್ಳಿ, ಕಕ್ಕೇರು, ಅನ್ನೇಹಾಳ್, ಮಹದೇವನಕಟ್ಟೆ, ಗ್ರಾಮಗಳಲ್ಲಿ ಚಿರತೆಗಳ ಓಡಾಟ ಹೆಚ್ಚಾಗಿದೆ ಇದಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿದ್ದೇನೆ, ಚಿರತೆಗಳು ಓಡಾಟ ಕಂಡಲ್ಲಿ ಬೋನ್ ಗಳನ್ನು ಇಡಬೇಕೆಂದು ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದೇನೆ ಎಂದು ತಿಳಿಸಿದರು.
ಕಳೆದ ಜುಲೈ 17ರಂದು ಅನ್ನೇಹಾಳ್ ಗ್ರಾಮದ ಸಿದ್ದೇಶ್
ಸಂಜೆ ಜಮೀನಿಗೆ ಹೋಗಿದ್ದಾಗ ಹೊಂಚುಹಾಕಿ ಕುಳಿತಿದ್ದ ಚಿರತೆ ದಾಳಿ ನಡೆಸಿದೆ. ತಲೆಯ ಹಿಂಬದಿಯು ರಕ್ತಸಿಕ್ತವಾಗಿದ್ದು, ಅಲ್ಲದೆ ಮೈ ಕೈಗೆ ಪರಚಿ ಗಾಯಗೊಳಿಸಿದೆ. ಹೆಚ್ಚಿನ ಚಿಕಿತ್ಸೆಗಾಗಿ ಯುವಕನನ್ನು ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಯನ್ನು ಮುಗಿಸಿ ಗುಣಮುಖರಾಗಿ ಗ್ರಾಮಕ್ಕೆ ಧಾವಿಸಿದ ಸಿದ್ದೇಶ್ ರವರ ನಿವಾಸಕ್ಕೆ ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಅವರು ಭೇಟಿ ಮಾಡಿ ಆರೋಗ್ಯವನ್ನು ವಿಚಾರಿಸಿ ಆರ್ಥಿಕ ಸಹಾಯ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಶಿವಣ್ಣ, ಅನ್ನೇಹಾಳ್ ಗ್ರಾಮದ ಮುಖಂಡರಾದ ಲೋಕೇಶ್, ಗುರು ಶಾಂತಪ್ಪ, ಸಿದ್ದೇಶ್, ಶೇಖರ್, ನಿರಂಜನ್ ಮೂರ್ತಿ, ಲೋಕೇಶ, ಪ್ರಭು ಸುಧಾ ನೀಲಮ್ಮ, ಸಾವಿತ್ರಮ್ಮ, ರತ್ನಮ್ಮ, ದೀಪು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಗ್ರಾಮಸ್ಥರು ಇದ್ದರು.

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್ಡೇಟ್. ನೀವು ಯಾವಾಗಲೂ ಅಪ್ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್