ದೆಹಲಿ: ಕಾಂಗ್ರೆಸ್ ಸರ್ಕಾರದಲ್ಲಿ ಇಂದಿಗೂ ನಾಯಕತ್ವ ಬದಲಾವಣೆಯ ವಿಚಾರ ಬೂದಿ ಮುಚ್ಚಿದ ಕೆಂಡದಂತೆ ಇದೆ. ಈ ಬಗ್ಗೆ ಡಿಕೆ ಶಿವಕುಮಾರ್ ಬೆಂಬಲಿಗರು ಆಗಾಗ ಬಹಿರಂಗವಾಗಿ ಮಾತನ್ನಾಡುವುದು ಉಂಟು. ಸದ್ಯ ಮಾರ್ಚ್ 10ಕ್ಕೆ ಡಿಕೆಶಿ ಎಲ್ಲರಿಗೂ ಔತಣಕೂಟದ ವ್ಯವಸ್ಥೆ ಮಾಡಿದ್ದಾರೆ. ಈ ಬೆನ್ನಲ್ಲೇ ಸಚಿವ ಹೆಚ್ ಕೆ ಪಾಟೀಲ್ ದೆಹಲಿಯ ಪ್ರಯಾಣವನ್ನ ಕೈಗೊಂಡಿದ್ದಾರೆ. ಅಲ್ಲಿ ಹೈಕಮಾಂಡ್ ನಾಯಕರಿಗೆ ಈ ವಿಚಾರ ತಿಳಿಸಿದ್ರಾ ಏನು ಎಂಬೆಲ್ಲದರ ಬಗ್ಗೆ ಮಾತನ್ನಾಡಿದ್ದಾರೆ.
ನಿನ್ನೆ ನಮ್ಮ ನ್ಯಾಷನಲ್ ಫೆಡರೇಷನ್ ಬ್ಯಾಂಕ್ ನ ಮೀಟಿಂಗ್ ಇತ್ತು ಅದಕ್ಕೆ ದೆಹಲಿಗೆ ಬಂದಿದ್ದೆ. ಜೊತೆಗೇನೆ ನಮ್ಮ ನಾಯಕರನ್ನು ಭೇಟಿಯಾಗಬೇಕು ಅಂತ ಇದ್ದೀನಿ. ನಮ್ಮ ಖರ್ಗೆ ಸಾಹೇಬ್ರು ನಿನ್ನೆನೆ ಬೆಂಗಳೂರಿಗೆ ಹೋಗಿರುವ ಕಾರಣ ಅದು ಸಾಧ್ಯವಾಗಿಲ್ಲ. ಬೇರೆ ನಾಯಕರ ಭೇಟಿಗೆ ಸಮಯ ಕೇಳಿದ್ದೇನೆ. ಹೈಕಮಾಂಡ್ ನಾಯಕರನ್ನು ಭೇಟಿಯಾದಾಗ ನಮ್ಮ ಕರ್ನಾಟಕದ ರಾಜಕೀಯ ವಿದ್ಯಾಮಾನಗಳ ಬಗ್ಗೆ ಮಾತನ್ನಾಡ್ತೇನೆ. ಗೊಂದಲಗಳೇನು ಇಲ್ಲ. ಕೆಲವೊಂದು ಅಂಶಗಳು ಪತ್ರಿಕೆ ಮೂಲಕ ದೊಡ್ಡ ದೊಡ್ಡದಾಗಿ ಬರ್ತಾ ಇದೆ. ಅದಕ್ಕೆಲ್ಲಾ ನಮ್ಮ ಹೈಕಮಾಂಡ್ ನಾಯಕರು ಬಗೆ ಹರಿಸ್ತಾರೆ.
ಹೈಕಮಾಂಡ್ ನವರು ಸುಮ್ಮನೆ ಇದ್ದಾರೆ ಎಂಬ ಊಹೆ ಮಾಡಿಕೊಳ್ಳುವಂತಿಲ್ಲ. ಆದಷ್ಟು ಬೇಗ ಬಗೆಹರಿಯುತ್ತೆ. ನಾಯಕತ್ವದ ಬದಲಾವಣೆ ಬಗ್ಗೆ ಮಾತನಾಡಬಾರದು, ವಿಶ್ಲೇಷಣೆ ಮಾಡುವುದಾಗಲಿ ಮಾಡಬೇಡಿ ಅಂತ ಹೇಳಿ ಮಲ್ಲಿಕಾರ್ಜುನ ಖರ್ಗೆ ಅವರು ಸೂಚನೆ ನೀಡಿದ್ದಾರೆ. ಹೀಗಾಗಿ ನಾನು ವ್ಯಾಖ್ಯಾನ ನೀಡಲ್ಲ. ನಾನು ಗದಗದಿಂದ ದೆಹಲಿಗೆ ಬಂದಿದ್ದೇನೆ. ಅವರ ಔತಣಕೂಟದ ಬಗ್ಗೆ ಗೊತ್ತಿಲ್ಲ. ಆಮೇಲೆ ಊಟಕ್ಕೆ ಕರೆಧಿರಬಹುದು. ಸಿದ್ದರಾಮಯ್ಯ ಅವರು ಕೂಡ ಕರೆಯುತ್ತಿರಬಹುದು ಎಂಬ ಮಾಹಿತಿಯನ್ನ ನೀಡಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.








