ಚಿತ್ರದುರ್ಗ | ಕಲ್ಲು ಬಂಡೆಗಳ ನಾಡಾಗಿದ್ದರು, ಜನರ ಹೃದಯ ಮೃದು ; ದುರ್ಗದ ಜನರನ್ನು ಕೊಂಡಾಡಿದ ಸಚಿವ ಬಿಸಿ ಪಾಟೀಲ್

1 Min Read

ಚಿತ್ರದುರ್ಗ : ಇಂದು 73ನೇ ಸಂಭ್ರಮದ ಗಣರಾಜ್ಯೋತ್ಸವ. ಈ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಬಿಸಿ ಪಾಟೀಲ್ ಇಂದು ಜಿಲ್ಲೆಯಲ್ಲಿ ಧ್ವಜಾರೋಹಣ ಮಾಡಿದ್ದಾರೆ. ಬಳಿಕ ಮಾತನಾಡಿ ಇದು ನನ್ನ ಪುಣ್ಯ ಎಂದಿದ್ದಾರೆ.

ಈ  ಹಿಂದೆ ನಾನು ಪೊಲೀಸ್ ಆಗಿದ್ದಾಗ ಇದೇ ಮೈದಾನದಲ್ಲಿ ಸೆಲ್ಯೂಟ್ ಹೊಡೆಯುತ್ತಿದ್ದೆ. ಆದರೆ ಇಂದು ಅದೇ‌ ಮೈದಾನದಲ್ಲಿ ಗೌರವ ಸ್ವೀಕರಿಸುತ್ತಿದ್ದೇನೆ, ಇದು ನನ್ನ ಪುಣ್ಯ. ಜಿಲ್ಲೆಯ ಮಣ್ಣಿನ ಗುಣ ಗೊತ್ತಿದೆ. ಇದು ಕೋಟೆ ಕಲ್ಲು ಬಂಡೆಗಳ ನಾಡಗಿದ್ದರೂ ಇಲ್ಲಿನ ಜನರ ಹೃದಯ ಮೃದು.

ಈ ಹಿಂದೆ ಪೊಲೀಸ್ ಅಧಿಕಾರಿಯಾಗಿ ಭಾಗವಹಿಸಿದ್ದೆ, ಈಗ ಸಚಿವನಾಗಿ ಭಾಗಿಯಾಗಿದ್ದೇನೆ. ಇಲ್ಲಿಂದಲೇ ಸಿನಿಮಾ ಜರ್ನಿಯನ್ನು ಶುರು‌ಮಾಡಿದೆ. ಹೀಗಾಗಿ ಇಂದು ತವರು ಮನೆಗೆ ಬಂದಷ್ಟು ಖುಷಿ ತಂದಿದೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *