ಬೆಂಗಳೂರು: ಸಿದ್ದರಾಮಯ್ಯ ಪೂರ್ತಿ confuse ಆಗಿಬಿಟ್ಟವರೆ. ಪಾಪ ಅವ್ರಿಗೆ ತಳಮಳ ಆಗೋಗಿದೆ. ಏನಂದ್ರೆ ಏನು ಹೇಳಬೇಕು ಗೊತ್ತಾಗ್ತಿಲ್ಲ ಅವ್ರಿಗೆ. ಯೂನಿಫಾರ್ಮ್ ಹಾಕೊಳಿ ಅಂತ ಹೇಳಬೇಕೋ ಬೇಡ ಅಂತ ಹೇಳಬೇಕಾ ಗೊತ್ತಾಗ್ತಿಲ್ಲ. ಈ ಸ್ಪಷ್ಟತೆ ಅವರನ್ನು ಕಾಡುತ್ತಿದೆ. ಈ ಸ್ಪಷ್ಟತೆ ಇಲ್ಲದ ಕಾರಣ ಯಾವ ರೀತಿಯ ನಿಲುವನ್ನು ತೆಗೆದುಕೊಳ್ಳಬೇಕು ಎಂಬುದು ಕಾಂಗ್ರೆಸ್ ಪಕ್ಷಕ್ಕೆ ಗೊಂದಲವಾಗಿದೆ ಎಂದಿದ್ದಾರೆ.
ಸಮವಸ್ತ್ರ ಹಾಕಿಕೊಳ್ಳಬೇಕು ಅಂದ್ರೆ ಯಾಕೆ ಹಾಕಿಕೊಳ್ಳಬೇಕು, ಯಾವ ಕಾಲದಲ್ಲಿ ಮಾಡಿದ್ರು. ಹಾಕಿಕೊಳ್ಳಬೇಕು ಬೇಕು ಅಂತ ಇದ್ದಾಗ ಹಾಕಿಕೊಳ್ಳಿ ಅಂತ ಹೇಳಬೇಕು ತಾನೇ ಗೊಂದಲ ಯಾಕೆ..? ಇವತ್ತು ಬೇರೆ ಬೇರೆ ಕಾನೂನು ಮಾಡೋಕೆ ಆಗುತ್ತಾ..? ಕಾನೂನು ಒಂದೇ ಇರುತ್ತೆ. ಅದನ್ನು ಪಾಲನೆ ಮಾಡುವಂತದ್ದು ಈ ಪಕ್ಷಗಳಿಗೆ ಇರಬೇಕು.
ಬರೀ ಒಲೈಕೆ ಮಾಡುವ ಕೆಲಸವನ್ನೆ ಮಾಡುತ್ತಾ ಬಂದಿದ್ದಾರೆ. ಇನ್ಬಾದರೂ ಈ ಒಲೈಕೆ ಮಾಡೋದನ್ನ ನಿಲ್ಲಿಸಿ ಕಾನೂನಿಗೆ ಗೌರವ ಕೊಡಿ. ನಮ್ಮ ಮಾತುಗಳನ್ನು ಗೌರವಿಸಬೇಡಿ ಕಾನೂನು ಗೌರವಿಸಿ ಸಾಕು. ಆಗ ತನಗೆ ತಾನೇ ಸಮಸ್ಯೆಗಳು ಬಗೆಹರಿಯುತ್ತವೆ. ಕಾನೂನು ಯಾರಪ್ಪ ಅಂದ್ರೆ ಕಷ್ಟ. ಅವರು ಮಾಡಿರುವ ಕಾನೂನನ್ನೇ ಅವರು ಗೌರವಿಸಲಿ ಸಾಕು.
ಆಜಾನ್ ವಿಚಾರದಲ್ಲಿ, ಹಿಜಾಬ್, ಸಮವಸ್ತ್ರ ಇನ್ನೊಂದು ಎಲ್ಲದರಲ್ಲೂ ಕಾನೂನು ಪಾಲಿಸಿ. ನಾಡಿಗೆ ಅವಮಾನ ಮಾಡಬೇಡಿ. ಕನ್ನಡ ನಾಡು ಒಂದು ಸೌಹಾರ್ದಯುತವಾಗಿ, ಪ್ರಗತಿಯುತವಾಗಿ, ಸಮೃದ್ಧಿಯಿಂದ ಇಡೀ ವಿಶ್ವದ ಮಾನ್ಯತೆ ಪಡೆದಿದೆ. ಆವಿಷ್ಕಾರ, ತಂತ್ರಜ್ಞಾನ ಯಾವ ಕ್ಷೇತ್ರದಲ್ಲಿ ಆಗಲಿ ಕರ್ನಾಟಕ ಮೇಲ್ಪಂಕ್ತಿಯಲ್ಲಿದೆ. ಹಾಗಾಗಿ ಮಸಿ ಬಳಿಯುವ ಕೆಲಸ ಮಾಡಬೇಡಿ. ರಾಜಕೀಯ ಪಕ್ಷಗಳು ಕಾನೂನು ಪಾಲಿಸಿ, ಪಾಲಿಸಲು ಸೂಚಿಸಿ ಎಂದಿದ್ದಾರೆ.