Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

🔴 ಅಡ್ಮಿಷನ್ ಓಪನ್

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ

2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)

ಸಂಪೂರ್ಣ ಮಾಹಿತಿ & ದಾಖಲಾತಿಗಾಗಿ ಕ್ಲಿಕ್ ಮಾಡಿ ➔
---Advertisement---

ಮೈಕ್ರೋ ಫೈನಾನ್ಸ್ ಕಿರುಕುಳ : ರಾಮನಗರದಲ್ಲಿ ಮಹಿಳೆ ಆತ್ಮಹತ್ಯೆ..!

---Advertisement---

ರಾಮನಗರ: ಗ್ರಾಮೀಣ ಭಾಗದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ಹೆಚ್ಚಾಗಿದೆ. ಜನ ಕೂಡ ಸುಲಭವಾಗಿ ಸಿಗುತ್ತೆ ಎಂಬ ಕಾರಣಕ್ಕೆ ಹಿಂದೆ ಮುಂದೆ ಯೋಚಿಸದೆ ಹಣವನ್ನ ತೆಗೆದುಕೊಂಡು ಬಿಡುತ್ತಾರೆ. ಆದರೆ ಆ ಸಾಲ ತೀರಿಸಲಾಗದೆ, ಆ ಬಡ್ಡಿಯ ಒತ್ತಡ ತಾಳಲಾರದೆ ಎಷ್ಟೋ ಜನ ಆತ್ಮಹತ್ಯೆಯ ಮೊರೆ ಹೋಗಿದ್ದಾರೆ. ಇದೀಗ ರಾಮನಗರದಲ್ಲೂ ಅಂಥದ್ದೇ ಕೇಸ್ ರಿಜಿಸ್ಟರ್ ಆಗಿದೆ.

ಅದರಲ್ಲೂ ಮೈಸೂರು, ಚಾಮರಾಜನಗರ, ತುಮಕೂರು, ಹಾವೇರಿ, ರಾಮನಗರ ಭಾಗದಲ್ಲಿ ಈ ಮೈಕ್ರೋ ಫೈನಾನ್ಸ್ ಕಂಪನಿಗಳು ದೊಡ್ಡ ಮಟ್ಟಕ್ಕೆ ತಲೆ ಎತ್ತಿವೆ. ಸಣ್ಣ ರೈತರಿ, ಅತಿ ಸಣ್ಣ ರೈತರೇ ಇವರ ಟಾರ್ಗೆಟ್. ಸಾಲ ಕೊಡ್ತೀವಿ, ಹೆಚ್ಚೇನು ಡಾಕ್ಯುಮೆಂಟ್ ಬೇಡ ಎಂದು ಹೇಳಿ ಸಾಲವನ್ನ ಕೊಟ್ಟು ಬಿಡುತ್ತಾರೆ. ರೈತರಿಗೆ ಇವರೇಳುವ ಬಡ್ಡಿ ದರಗಳ ರೀತಿ ಅರ್ಥವೂ ಆಗುವುದಿಲ್ಲ. ಸಾಲ ಕೊಟ್ಟ ಮೇಲೆ ಕಿರುಕುಳ ಶುರು ಮಾಡುತ್ತಾರೆ. ಈ ಕಿರುಕುಳದಿಂದ ಅದೆಷ್ಟೋ ಜನರು ಜೀವವನ್ನೇ ಕಳೆದುಕೊಂಡಿದ್ದಾರೆ. 60 ವರ್ಷದ ಯಶೋಧಮ್ಮ ಇದೀಗ ಮೈಕ್ರೋ ಫೈನಾನ್ಸ್ ಗೆ ಬಲಿಯಾಗಿದ್ದಾರೆ.

ಯಶೋಧಮ್ಮ ಖಾಸಗಿ ಫೈನಾನ್ಸ್ ಕಂಪನಿಗಳಲ್ಲಿ ಸುಮಾರು 5 ಲಕ್ಷದವರೆಗೂ ಸಾಲ ಪಡೆದಿದ್ದರು. ಮನೆ ಬಳಿ ಬಂದ ಫೈನಾನ್ಸ್ ಕಂಪನಿಯವರು ಗಲಾಟೆ ಮಾಡಿದ್ದರಂತೆ ಇದರಿಂದ ನೊಂದ ಯಶೋದಮ್ಮ ಅತ್ಮಹತ್ಯೆಗೆ ಶರಣಾಗಿದ್ದಾರೆ. ಇನ್ನು ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದರ ನಡುವೆ ಫೈನಾನ್ಸ್ ಕೊಟ್ಟು ಪೀಡಿಸುತ್ತಿದ್ದ ಬಿಡದಿಯ ಫೈನಾನ್ಸ್ ಕಂಪನಿ ಮ್ಯಾನೇಜರ್ ಒಬ್ಬರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಕೂಡ ಇತ್ತೀಚೆಗೆ ಫೈನಾನ್ಸ್ ಕಂಪನಿಗಳಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಸಾಲ ಕೊಟ್ಟು ತೊಂದರೆ ಕೊಟ್ಟರೆ ದೂರು ನೀಡಿ ಎಂದಿದ್ದಾರೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...