Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕ್ಯಾನ್ಸರ್ ಮತ್ತು ಸಕ್ಕರೆ ಕಾಯಿಲೆ ಇರುವವರಿಗೆ ಔಷಧ ಇನ್ಮುಂದೆ ಅಗ್ಗ..!

---Advertisement---

ನವದೆಹಲಿ: 2026-27ನೇ ಕೇಂದ್ರ ಬಜೆಟ್ ಅನ್ನು ನಿರ್ಮಲಾ ಸೀತರಾಮನ್ ಮಂಡಿಸುತ್ತಿದ್ದು, ಬಜೆಟ್ ನಲ್ಲಿ ಮೆಡಿಸನ್ ವಿಚಾರಕ್ಕೆ ಸಮಾಧಾನಕರ ವಿಚಾರ ತಿಳಿಸಿದ್ದಾರೆ. ಅದರಲ್ಲೂ ಕ್ಯಾನ್ಸರ್ ಮತ್ತು ಸಕ್ಕರೆ ರೋಗಕ್ಕೆ ಸಂಬಂಧಿಸಿದ ಔಷಧಗಳ ಬೆಲೆ ಇಳಿಕೆಯಾಗಲಿರುವ ಸುದ್ದಿಯನ್ನು ನೀಡಿದ್ದಾರೆ. ಗಂಭೀರ ಕಾಯಿಲೆಗಳ ಚಿಕಿತ್ಸಾ ವೆಚ್ಚವನ್ನು ತಗ್ಗಿಸುವ ಮತ್ತು ಆರೋಗ್ಯ ಸೇವೆಯನ್ನು ಎಲ್ಲರಿಗೂ ಕೈಗೆಟಕುವಂತೆ ಮಾಡುವ ಉದ್ದೇಶದಿಂದ ಈ ನಿರ್ಧಾರವನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ.

ಕ್ಯಾನ್ಸರ್ ನಂತಹ ಮಾರಣಾಂತಿಕ ಕಾಯಿಲೆ ಹಾಗೂ ದಿನೇ ದಿನೇ ಹೆಚ್ಚುತ್ತಿರುವ ಸಕ್ಕರೆ ಕಾಯಿಲೆಯ ಔಷಧಗಳ ಬೆಲೆ ಇಳಿಕೆಯಾಗುತ್ತಿರುವುದು ಲಕ್ಷಾಂತರ ಕುಟುಂಬಗಳಿಗೆ ದೊಡ್ಡ ಆರ್ಥಿಕ ನೆರವು ನೀಡಲಿದೆ. ದೇಶದಲ್ಲಿ ಕ್ಯಾನ್ಸರ್ ಮತ್ತು ಸಕ್ಕರೆ ಕಾಯಿಲೆಯ ಔಷಧಗಳನ್ನು ಅಗ್ಗವಾಗಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಚಿಕಿತ್ಸೆಯ ವೆಚ್ಚವನ್ನು ಕಡಿಮೆ ಮಾಡುವುದು ಮತ್ತು ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಸಿಗುವಂತೆ ಮಾಡುವುದು ನಮ್ಮ ಆದ್ಯತೆಯಾಗಿದೆ ಎಂದು ನಿರ್ಮಲಾ ಸೀತರಾಮನ್ ತಿಳಿಸಿದ್ದಾರೆ.

ಇನ್ನು ಕ್ಯಾನ್ಸರ್ ಮತ್ತು ಸಕ್ಕರೆ ಕಾಯಿಲೆಯ ಔಷಧಗಳ ಮೇಲಿನ ಜಿಎಸ್ಟಿ ದರವನ್ನು ಇಳಿಕೆ ಮಾಡಿರುವುದು ಬೆಲೆ ಇಳಿಕೆಗರ ಪ್ರಮುಖ ಕಾರಣವಾಗಿದೆ. ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ ಕೆಲವು ಪ್ರಮುಖ ಔಷಧಗಳ ಆಮದು ಸುಂಕದಲ್ಲಿ ರಿಯಾಯಿತಿ ನೀಡಲಾಗಿದೆ. ದೇಶಿಯವಾಗಿ ಔಷಧಗಳ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇದರಿಂದ ಅದೆಷ್ಟೊ ಜನಕ್ಕೆ ಸಾಕಷ್ಟು ಸಹಾಯವಾಗಲಿದೆ. ಯಾಕಂದ್ರೆ ಕ್ಯಾನ್ಸರ್ ರೋಗಕ್ಕೆ ಬೇಕಾದ ಔಷಧ ತುಂಬಾ ದುಬಾರಿಯಾಗಿದೆ. ಹೀಗಾಗಿ ಮಧ್ಯಮವರ್ಗದವರಿಗೆ ಆಸ್ಪತ್ರೆ ವೆಚ್ಚ ಭರಿಸುವುದೇ ಕಷ್ಟಕರವಾಗಿತ್ತು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ಉದ್ಯೋಗ ಸೃಷ್ಟಿ ಹಾಗೂ ಕೌಶಲ್ಯಾಭಿವೃದ್ಧಿಗೆ ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಕೈಗಾರಿಕಾ ಸಹಭಾಗಿತ್ವದ “ಹೈಪರ್-ಆಕ್ಟಿವ್ ಇನ್ನೋವೇಷನ್ ಹಬ್”ಗಳ ನಿರ್ಮಾಣ ಅತ್ಯಗತ್ಯ

ತೆಳ್ಳಗಿದ್ದರೆ ಮಾತ್ರ ಫಿಟ್ ಎಂದರ್ಥವಲ್ಲ: ನಿಜವಾದ ಫಿಟ್‌ನೆಸ್‌ನ ಗುರುತುಗಳೇನು? ತಜ್ಞರ ಸಲಹೆ ಇಲ್ಲಿದೆ

ಕೂದಲು ಉದುರುವಿಕೆ ತಡೆದು, ದಟ್ಟವಾಗಿ ಬೆಳೆಯಲು ಈ ‘ಸೂಪರ್‌ಫುಡ್‌’ಗಳನ್ನು ನಿಮ್ಮ ಆಹಾರದಲ್ಲಿ ತಪ್ಪದೇ ಸೇರಿಸಿ!

ಚಿತ್ರದುರ್ಗ : ಮೊಳಕಾಲ್ಮೂರಿನಲ್ಲಿ ಭೀಕರ ರಸ್ತೆ ಅಪಘಾತ : ಸೇತುವೆಗೆ ಕಾರು ಡಿಕ್ಕಿಯಾಗಿ ಇಬ್ಬರು ಸಾವು!

ಮೊಬೈಲ್‌-ಸ್ಕ್ರೀನ್‌ಗೆ ಬ್ರೇಕ್ ನೀಡಿ: ಮಾನಸಿಕ ಆರೋಗ್ಯ ಕಾಪಾಡಲು ‘ಡಿಜಿಟಲ್ ಡಿಟಾಕ್ಸ್’ ಏಕೆ ಮುಖ್ಯ?

ನೀತಿ ಕಥೆ: ನಂಬಿಕೆದ್ರೋಹಕ್ಕೆ ಕ್ಷಮೆಯಿಲ್ಲ (ಯುವರಾಜ ಮತ್ತು ಕರಡಿಯ ಕಥೆ)