ಬೆಂಗಳೂರು: ಸಚಿವ ಅಶ್ವತ್ಥ್ ನಾರಾಯಾಣ್ ಮತ್ತು ಎಂ ಬಿ ಪಾಟೀಲ್ ಭೇಟಿ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಇದು ರಕ್ಷಣೆಗಾಗಿ ನಡೆದ ಭೇಟಿ ಎಂದಿದ್ದರು. ಈ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಎಂ ಬಿ ಪಾಟೀಲ್, ನಮ್ಮ ಅಧ್ಯಕ್ಷರು ಬೇರೆಲ್ಲಿಯೂ ಹೋಗಿಲ್ಲವಾ..? ಇವರು ಬೇರೆ ಯಾರ ಮನೆಗೂ ಹೋಗಿಲ್ವಾ, ಯಾರು ಬಂದಿಲ್ಲವಾ ಎಂದು ತಿರುಗೇಟು ನೀಡಿದ್ದಾರೆ.
ಪಕ್ಷದ ನಾಲ್ಕು ಗೋಡೆ ಮಧ್ಯದಲ್ಲಿ ಅವರ ನಿನ್ನೆ ಹೇಳಿಕೆ ಏನಿದೆ ರಕ್ಷಣೆಗಾಗಿ ಎಂಬುದು ಅದನ್ನು ನಾನು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದೇನೆ. ನಮ್ಮ ಪಕ್ಷದ ವೇದಿಕೆಯಲ್ಲಿ ಇದನ್ನು ಚರ್ಚೆ ಮಾಡುತ್ತೇನೆ. ಈ ರೀತಿಯಲ್ಲಿ ಲಘುವಾಗಿ ಹೇಳಿಕೆ ಕೊಡುವಂತಾಗಬಾರದು. ಯಾಕೆ ನೀವೆಲ್ಲೂ ಹೋಗಿಲ್ವಾ. ನನಗೆ ಅದು ಗೊತ್ತಿದೆ. ನಿಮ್ಮ ಮನೆಗೆ ಯಾರು ಬಂದಿಲ್ವಾ..? ಇದು ನಿಮ್ಮ ಖಾಸಗಿ ವಿಚಾರದ ಅದು. ಇದು ಒಳ್ಳೆಯದ್ದಲ್ಲ. ಇದು ತುಂಬಾ ಸಣ್ಣ ವಿಚಾರ ಯಾರ ಮನೆಗೆ ಯಾರು ಊಟಕ್ಕೆ ಹೋಗ್ತಾರೆ, ಯಾರು ಬರ್ತಾರೆ..? ರಾಜಕೀಯಕ್ಕೂ ಅದಕ್ಕೂ ಸಂಬಂಧವೇನಿದೆ.
ರಕ್ಷಣೆಗಾಗಿ ಅಂತೆ. ಏನದು ನನಗೆ ರಕ್ಷಣೆ ಕೊಡುವುದಕ್ಕೆ ಏನಿದೆ..? ನಾನೇನು ಮುಖ್ಯಮಂತ್ರಿಯಾ..? ನಾನೇನು ಹೋಂ ಮಿನಿಸ್ಟರ್ ಹಾ ಅಥವಾ ಪಕ್ಷದ ಅಧ್ಯಕ್ಷನಾ..? ನಾನು ಪ್ರಚಾರದ ಸಮಿತಿ ಅಧ್ಯಕ್ಷ. ರಕ್ಷಣೆ ಕೊಡಬೇಕು ಎಂದರೆ ಯಾರು ಕೊಡಬೇಕು, ಡಿಕೆ ಶಿವಕುಮಾರ್ ಅವರು ಕೊಡಬೇಕು, ಸಿದ್ದರಾಮಯ್ಯನವರು ಕೊಡಬೇಕು. ಪಕ್ಷ ಕೊಡುತ್ತೆ ನಾನು ಕೊಡೋದಕ್ಕೆ ಆಗುತ್ತಾ..? ಅವರ ಹೇಳಿಕೆ ಸರಿಯಾದುದ್ದಲ್ಲ ಎಂದು ಡಿಕೆ ಶಿವಕುಮಾರ್ ಹೇಳಿಕೆಗೆ ಗರಂ ಆಗಿದ್ದಾರೆ.