Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ವಚನಗಳು ಬದುಕಿನ ದಾರಿದೀಪವಾಗಲಿ: ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಕರೆ

---Advertisement---

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 17 : ವಚನಗಳು ಕೇವಲ ಒಂದು ಭಾಷೆಯ ಪದಗಳಾಗಲಿ, ಶಬ್ದಗಳಾಗಲಿ, ವಾಕ್ಯಗಳಾಗಲಿ, ಕಾವ್ಯ ಅಥವಾ ಪದ್ಯಗಳಾಗಲಿ ಅಲ್ಲ. ಅವು ಅನುಭವದಿಂದ ಮೂಡಿಬಂದ ಸತ್ಯದ ಪ್ರತಿಪಾದನೆಗಳಾಗಿವೆ. ಸತ್ಯವನ್ನರಿಯಲು ವಚನಗಳನ್ನು ಅಧ್ಯಯನ ಮಾಡಬೇಕು. ಸತ್ಯನಿಷ್ಠರಾಗಲು ವಚನಗಳನ್ನು ಬದುಕಿನ ದಾರಿದೀಪವನ್ನಾಗಿ ಸ್ವೀಕರಿಸಬೇಕು ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿರವರು ಆಶೀರ್ವಚನ ನೀಡಿದರು.

ಮುರುಘಾ ಮಠದಲ್ಲಿ ವಚನ ಝೇಂಕಾರ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದ ಪೂಜ್ಯರು ವಚನಗಳನ್ನು ಕಾಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುವುದಲ್ಲ; ಬದಲಾಗಿ, ಅವುಗಳ ಆಶಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದೇ ನಿಜವಾದ ಸಾಧನೆ. ಸಂಪ್ರದಾಯಬದ್ಧ ಮಠಗಳು ವಚನ ಸಾಹಿತ್ಯದ ಮೌಲ್ಯಗಳನ್ನು ತಮ್ಮ ಆಚರಣೆ ಮತ್ತು ಜೀವನಕ್ರಮದಲ್ಲಿ ಅಳವಡಿಸಿಕೊಳ್ಳುವುದು ಮಹತ್ವದ ಕಾರ್ಯವಾಗಿದೆ. ಈ ನಿಟ್ಟಿನಲ್ಲಿ ಮುರುಘಾಮಠವು ಅತ್ಯಂತ ಧೈರ್ಯ ಮತ್ತು ಬದ್ಧತೆಯಿಂದ ವಚನಗಳ ಆಶಯಗಳನ್ನು ಅಳವಡಿಸಿಕೊಂಡಿರುವುದು ಶ್ಲಾಘನೀಯ.

ವಚನಗಳು ನಾಲಿಗೆಯ ತುದಿಯಲ್ಲಿ ನಲಿದಾಡುವುದಕ್ಕೆ ‘ವಚನ ಝೇಂಕಾರ’ ಕಾರ್ಯಕ್ರಮ ಅವಕಾಶ ಮಾಡಿಕೊಟ್ಟಿದೆ. ಆದರೆ, ವಚನಗಳ ನಿಜವಾದ ಆಶಯಗಳು ನಾಲಿಗೆಯಿಂದಾಚೆಗೆ ಸಾಗಿ, ನಮ್ಮ ನರನಾಡಿಗಳಲ್ಲಿ ತುಂಬಿ, ನಮ್ಮ ನಡೆ-ನುಡಿ ಹಾಗೂ ಜೀವನದ ಭಾಗವಾಗಬೇಕು. ಅಂತಹ ಮಹತ್ವದ ಕಾರ್ಯಕ್ಕೆ ಈ ಕಾರ್ಯಕ್ರಮ ವೇದಿಕೆಯಾಗಲಿ ಎಂಬುದು ನಮ್ಮ ಆಶಯವಾಗಿದೆ ಎಂದರು.

ಪ್ರಸ್ತುತ ಮುರುಘಾಮಠವು ಸಾಲಮುಕ್ತವಾಗಿ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಮಠವು ಸಾಧಿಸಿರುವ ಈ ಮಹತ್ವದ ಪ್ರಗತಿ ಮತ್ತು ಸಾಧನೆಗಳು ದಾಖಲೆಯ ರೂಪದಲ್ಲಿ ಜನರಿಗೆ ತಲುಪಲಿ. ಈ ಸಾಧನೆಗಳ ಇತಿಹಾಸವು ಪುಸ್ತಕ ರೂಪದಲ್ಲಿ ಪ್ರಕಟಗೊಂಡು, ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿ ಎಂದು ಆಶಿಸುತ್ತೇನೆ ಎಂದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now