ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಫೆ. 15 : ಪರಮಾತ್ಮನ ಕಡೆಗೆ ಶರಣಾಗುವ ಮಾರ್ಗ ಶಿವರಾತ್ರಿಯಾಗಿದೆ, ಶಿವರಾತ್ರಿ ಎಲ್ಲರನ್ನು ಮುಕ್ತ ಪಥದತ್ತ ಕೊಂಡ್ಯೂತ್ತದೆ ಎಂದು ಬೆಂಗಳೂರಿನ ಗವಿಪುರಂನ ಶ್ರೀ ಭವಾನಿ ಪೀಠದ ಗೋಸಾಯಿ ಮಠದ ಪೀಠಾಧ್ಯಕ್ಷರಾದ ಶ್ರೀ ಮಂಜುನಾಥ್ ಭಾರತಿ ಶ್ರೀಗಳು ತಿಳಿಸಿದರು.
ನಗರದ ಕಬೀರಾನಂದ ನಗರದಲ್ಲಿನ ಶ್ತೀ ಕಬೀರಾನಂದ ಆಶ್ರಮದಲ್ಲಿ ಕಳೆದ ಫೆ. 11 ರಿಂದ ನಡೆಯುತ್ತಿರುವ 96ನೇ ಮಹಾ ಶಿವರಾತ್ರಿ ಮಹೋತ್ಸವದ ನಾಲ್ಕನೇ ದಿನವಾದ ಶನಿವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶ್ರೀಗಳು, ಶಿವಲಿಂಗಾನಂದ ಶ್ರೀಗಳು ತಮ್ಮಲ್ಲಿ ಬರುವ ಭಕ್ತರಿಗೆ ಯಾವುದೇ ರೀತಿಯ ಭೇದ ಬಾವ ಮಾಡದೆ ಎಲ್ಲರನ್ನು ಸಮಾನವಾಗಿ ನೋಡುವ ಪ್ರವೃತಿಯವರಾಗಿದ್ದಾರೆ. ಇದ್ದಲ್ಲದೆ ಸಮಸ್ಯೆಯಿಂದ ಬಂದವರಿಗೆ ಪರಿಹಾರವನ್ನು ನೀಡುವಂತ ಮಾತೃ ಹೃದಯಿಗಳಾಗಿದ್ದಾರೆ. ಶಾಸ್ತ್ರದಲ್ಲಿ ಪಂಡಿತ್ಯವನ್ನು ಹೊಂದುವುದರ ಮೂಲಕ ಜನತೆ ಸಹಾಯವನ್ನು ಮಾಡುತ್ತಿದ್ದಾರೆ. ನಮ್ಮಲ್ಲಿನ ಉಪನಿಷತ್ ಗಳು ತಿಳಿಸುವುದು ಸಹಾ ಮುಕ್ತಿಯ ದಾರಿಯನ್ನೇ, ಪರಮಾತ್ಮನ ಒಲುಮೆಗೆ ಏಕಾಗ್ರತೆ ಒಂದೇ ದಾರಿಯಾಗಿದೆ, ಅತನ ಧ್ಯಾನವನ್ನು ಮಾಡುವುದರ ಮೂಲಕ ಮುಕ್ತಿಯನ್ನು ಹೊಂದಬಹುದಾಗಿದೆ ಎಂದರು.
ಮೋಕ್ಷವನ್ನು ಪಡೆಯಲು ನಾನಾ ದಾರಿಗಳು ಇವೆ ಇದರಲ್ಲಿ ಭಕ್ತಿಯೂ ಸಹಾ ಒಂದಾಗಿದೆ ಪರಮಾತ್ಮನನ್ನು ಶ್ರದ್ದಾ ಭಕ್ತಿಯಿಂದ ಪೂಜೆ ಮಾಡಿ ಧ್ಯಾನ ಮಾಡುವುದರ ಮೂಲಕ ಮುಕ್ತಿಯನ್ನು ಪಡೆಯಲು ಸಾಧ್ಯವಿದೆ. ಭಕ್ತಿಯ ಉಪಾಸನೆಯಲ್ಲಿ ಮೋಕ್ಷವನ್ನು ಸಂಪಾದಿಸಲು ಸಾಧ್ಯವಿದೆ ಎಂದು ಶ್ರೀ ಮಂಜುನಾಥ್ ಭಾರತಿ ಶ್ರೀಗಳು ತಿಳಿಸಿದರು.
ಶ್ರೀ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು ಮಾತನಾಡಿ, ವರ್ಷದಿಂದ ವರ್ಷಕೆ ಶಿವರಾತ್ರಿ ಮಹೋತ್ಸವ ಎಲ್ಲರ ಸಹಕಾರ, ಸಹಾಯದಿಂದ ಚನ್ನಾಗಿ ನಡೆಯುತ್ತಿದೆ, ಇದು ಮುಂದಿನ ದಿನದಲ್ಲಿ ನಾಡಹಬ್ಬವಾಗಿ ಪರಿಣಮಿಸಬೇಕಿದೆ. ಇದರಲ್ಲಿ ಎಲ್ಲರಿಗೂ ಸಹಾ ಸಹಾಯವಾಗುತ್ತದೆ, ಕಲಾವಿದರು, ದಾರ್ಶನಿಕರು, ವಿದ್ವಾಂಸರು, ಮಠಾಧೀಶರು ಭಾಗವಹಿಸುವುದರ ಮೂಲಕ ಮಹೋತಸ್ವ ಯಶಸ್ವಿಯಾಗುತ್ತಿದೆ, ಇಲ್ಲಿದೆ ಶ್ರೀಗಳು ಬಂದ ಮೇಲೆ ವಿಶೇಷವಾದ ಬದಲಾವಣೆಯಾಗಿದೆ. ಸಮಾಜದ ಬದಲಾವಣೆಯ ಪರ್ವ ಬಂದಿದೆ, ಈಗ ಶಿವಲಿಂಗಾನಂದ ಶ್ರೀಗಳ ಪರ್ವ ಕಾಲವಾಗಿದೆ. ಮುಂದಿನ ದಿನದಲ್ಲಿ 100ನೇ ವರ್ಷ ಶಿವರಾತ್ರಿ ಮಹೋತ್ಸವ ಬರಲಿದೆ, ಇದರಲ್ಲಿ ದುರಾಲೋಚನೆ, ಅಜ್ಞಾನ, ದೂರ ಮಾಡಿ ಒಳ್ಳೆಯದನ್ನು ಆಳವಡಿಕೆ ಮಾಡಿಕೊಳ್ಳಬೇಕಿದೆ ಎಂದರು.
ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ಮಾತನಾಡಿ, ಶಿವರಾತ್ರಿ ಆಚರಣೆಯಿಂದಾಗ ಭಕ್ತರಲ್ಲಿ ಬದಲಾವಣೆಯಾಗುತ್ತದೆ. ಇದರಲ್ಲಿ ಭಾಗವಹಿಸುವ ಮಹಾನೀಯರು,ದಾರ್ಶನಿಕರು,ಮಠಾಧೀಶರು ಭಾಗವಹಿಸಿ ಅಮೃತವಾಣಿಯನ್ನು ದಯಪಾಲಿಸುವುದರಿಂದ ಕೇಳುಗರಿಗೆ ಆನಂದವನ್ನು ಉಂಟು ಮಾಡುತ್ತದೆ. ಕಳೆದ ವರ್ಷದಿಂದ ಈ ವರ್ಷದ ಶಿವರಾತ್ರಿ ಸಮಯದಲ್ಲಿ ನಮ್ಮಲ್ಲಿ ಏನು ಬದಾಲಾವಣೆಯಾಗಿದೆ ಎಂಬುದನ್ನು ನಾವುಗಲು ತಿಳಿಯಬೇಕಿದೆ, ಆಗ ಮಾತ್ರ ಶಿವರಾತ್ರಿ ಆಚರಣೆಗೆ ಅರ್ಥ ಬರುತ್ತದೆ. ಶಿವನಾಮ ಸ್ಮರಣೆಯಿಂದಾಗ ಎಲ್ಲವು ಬದಲಾವಣೆ ಸಾಧ್ಯವಿದೆ, ನಮ್ಮಲ್ಲಿನ ಚಿಂತೆಯನ್ನು ದೂರ ಮಾಡಲು ಸ್ವಾಮಿಗಳ ಬಳಿಗೆ ಹೋಗಿ ನಮ್ಮ ಚಿಂತೆಯನ್ನು ಅವರ ಬಳಿ ಹೇಳಿದಾಗ ನಮ್ಮ ಮನಸ್ಸಯ ಹಗುರವಾಗುತ್ತದೆ ಅಲ್ಲದೆ ನಮ್ಮ ಚಿಂತೆಗ ಅವರಲ್ಲಿ ಪರಿಹಾರ ಸಿಗುತ್ತದೆ, ಅದಕ್ಕೆ ಅಲ್ಲವೆ ಹರ ಮುನಿದೆ ಗುರು ಕಾಯುವನು ಎಂದು ನಮ್ಮ ಹಿರಿಯರು ಹೇಳುತ್ತಾರೆ ಎಂದರು.
ನಮ್ಮ ಬದುಕಿಗೆ ಅನಾವಶ್ಯಕವಾದ ವಿಷಯಗಳನ್ನು ಮನಸ್ಸಿಗೆ ತೆಗೆದುಕೊಳ್ಳದೆ ಇರುವುದರಿಂದ ನಮ್ಮ ಮನಸ್ಸು ಹಗುರವಾಗಿ ಇರಲು ಸಾಧ್ಯವಿದೆ. ಈ ಆಶ್ರಮಕ್ಕೆ ಶಿವಲಿಂಗಾನಂದ ಶ್ರೀಗಳು ಬರುವುದಕ್ಕಿಂತ ಮುಂಚೆ ಇದ್ದ ಆಶ್ರಮಕ್ಕೂ ಈಗ ಇರುವ ಆಶ್ರಮಕ್ಕೂ ಬಹಳವಾದ ವ್ಯತ್ಯಾಸ ಇದೆ, ಶ್ರೀಗಳು ಇಲ್ಲಿಗೆ ಬಂದ ಮೇಲೆ ಹಲವಾರು ಬದಲಾವಣೆಯನ್ನು ಮಾಡಿದ್ದಾರೆ. ಒಂದು ಕಾಲದಲ್ಲಿ ಹಾವಾಡಿಗರ, ಭಿಕ್ಷಕರ ದೇಶವಾಗಿದ್ದ ಭಾರತ ಇಂದು ವಿಶ್ವ ಗುರುವಾಗಲು ಹೋರಟಿದೆ, ಮುಂದಿನ ದಿನಮಾನದಲ್ಲಿ ಭಾರತ ಪ್ರಪಂಚಕ್ಕೆ ವಿಶ್ವ ಗುರುವಾಗಲಿದೆ ಇದ್ದಲ್ಲದೆ ಸಂಪತ್ ಭರುತವಾದ ದೇಶವಾಗಲಿದೆ ಎಂದರು.
ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ಇತ್ತೀಚಿನ ದಿನಮಾನದಲ್ಲಿ ನಾಡಿನಲ್ಲಿ ಜಾತಿಗೊಂದು ಮಠಗಳು ತಲೆ ಎತ್ತಿವೆ ಅವುಗಳು ಆಯಾ ಜಾತಿಗೆ ಸೀಮಿತವಾಗಿ ಅವುಗಳ ಅಭೀವೃದ್ದಿಯನ್ನು ಮಾಡುತ್ತಿವೆ ಆದರೆ ಕಬೀರಾನಂದಾಶ್ರಮ ಯಾವುದೇ ಜಾತಿ, ಧರ್ಮ, ಸಮುದಾಯ, ಜನಾಂಗಕ್ಕೆ ಮೀಸಲಿರದೆ ಇಲ್ಲಿಗೆ ಬಂದವರೆಲ್ಲರನ್ನು ಸಹಾ ಅಪ್ಪಿಕೊಳ್ಳುತ್ತಿದೆ, ಇದಕ್ಕೆ ಎಲ್ಲಾ ಸಮುದಾಯದವರು ಸಹಾ ಭಕ್ತರಾಗಿದ್ದಾರೆ. ಕಳೆದ 95 ವರ್ಷಗಳಿಂದ ಆಶ್ರಮ ನಿರಂತರವಾಗಿ ಶಿವರಾತ್ರಿ ಮಹೋತ್ಸವವನ್ನು ಆಚರಿಸಿಕೊಂಡು ಬರುತ್ತಿದೆ, ಇದ್ದಲ್ಲದೆ ಗೋಶಾಲೆ, ವೃದ್ದಾಶ್ರಮ, ಅನಾಥ್ ಮಕ್ಕಳ ಪೋಷಣೆ, ಅವರ ಶಿಕ್ಷಣಕ್ಕೆ ಒತ್ತು ನೀಡುತ್ತಿದೆ, ಇವರಿಗೆ ಸಂಸ್ಕಾರ, ಸಂಸ್ಕøತಿಯನ್ನು ಕಲಿಸುವುದರ ಮೂಲಕ ಉತ್ತಮ ಪ್ರಜೆಗಳನ್ನಾಗಿ ಮಾಡುತ್ತಿದೆ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹೊಸದುರ್ಗದ ಬ್ರಹ್ಮವಿದ್ಯಾ ನಗರದ ಶ್ರೀ ಉಪ್ಪಾರ ಭಗೀರಥ ಮಹಾ ಸಂಸ್ಥಾನದ ಶ್ರೀ ಪುರಯಷೋತ್ತಮಾನಂದ ಶ್ರೀಗಳು, ಶ್ರೀ ಕೃಷ್ಣಯಾದವ ಗುರುಪೀಠದ ಶ್ರೀ ಕೃಷ್ಣಯಾದವಾನಂದ ಶ್ರೀಗಳು, ಶಿವಲಿಂಗಾನಂದ ಶ್ರೀಗಳು ವಹಿಸಿದ್ದರು.
ಸಮಾರಂಭದಲ್ಲಿ ನಗರಾಭೀವೃದ್ದಿಮ ಪ್ರಾಧಿಕಾರದ ಅಧ್ಯಕ್ಷರಾಧ ಎಂ.ಕೆ.ತಾಜ್‍ಪೀರ್, ದಾವಣಗೆರೆ ಜಿ.ಪಂ. ಮಾಜಿ ಅಧ್ಯಕ್ಷರಾದ ಎಂ ರಾಮಪ್ಪ, ಹುಬ್ಬಳ್ಳಿಯ ವಿಶ್ವವೇದಾಂತ ಪರಿಷತ್ ಸಮಿತಿಯ ಅಧ್ಯಕ್ಷರಾದ ಶ್ಯಾಮಾನಂದ ಪೂಜಾರಿ, ಹುಬ್ಬಳ್ಳಿಯ ಸಿದ್ದಾರೂಢ ಮಠದ ಮಾಜಿ ಅಧ್ಯಕ್ಷರಾದ ಬಸವರಾಜ್ ಕಲ್ಯಾಣ ಶೆಟ್ಟರ್, 96ನೇ ಮಹಾ ಶಿವರಾತ್ರಿ ಮಹೋತ್ಸವದ ಅಧ್ಯಕ್ಷರಾದ ಭಾಸ್ಕರ್ ಉಪಾಧ್ಯಕ್ಷರಾಧ ಪರಮೇಶ್ವರಪ್ಪ ಭಾಗವಹಿಸಿದ್ದರು.
ಸುಬ್ರಾಯ ಭಟ್ಟರು ವೇಧ ಘೋಷ ಮಾಡಿದರೆ ಪ್ರಜ್ವಲ್ ಪ್ರಾರ್ಥಿಸಿದರು, ಗೋಪಾಲಸ್ವಾಮಿ ನಾಯಕ್ ಸ್ವಾಗತಿಸಿದರು, ಶ್ರೀವತಿ ಶೈಲಜ ವಿಜಯಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಬಾಲು ಮತ್ತು ತಂಡ ಸಾಂಸ್ಕøತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು, ಜೈ ವಾಸವಿ ಮುತ್ರ ವೃಂದ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಸಲಾಯಿತು.


