ಚಿತ್ರದುರ್ಗ, (ಮಾ.22) : ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ವತಿಯಿಂದ ಮಾ.23ರ ಸಂಜೆ 6 ಗಂಟೆಗೆ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ರಾಜಗುರು ಸುಖದೇವ್ ಅವರ ಸ್ಮರಣಾರ್ಥ ರಾಷ್ಟ್ರೀಯ ಬಲಿದಾನದ ಅಂಗವಾಗಿ ಬೃಹತ್ ಪಂಜಿನ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಯುವ ಮೋರ್ಚಾ ಘಟಕದ ಅಧ್ಯಕ್ಷ ಹನುಮಂತೇಗೌಡ ತಿಳಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಹಾರರಲ್ಲಿ ಅಗ್ರ ಮಾನ್ಯವಾಗಿ ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿ ಹೋರಾಟಗಾರರಿಗೆ ಸೂರ್ತಿಯಾಗಿದ್ದ ಇವರ ರಾಷ್ಟ್ರಭಕ್ತಿ ಇಂದಿಗೂ ಕೂಡ ನಮ್ಮೆಲ್ಲಾ ಯುವಜನತೆಗೆ ಪ್ರೇರಣೆ ಮತ್ತು ಸೂರ್ತಿಯಾಗಿದೆ.
ಸರ್ವಾಧಿಕಾರಿ ಮನಸ್ಥಿತಿಯ ಬ್ರಿಟಿಷ್ ಸರ್ಕಾರ ಈ ರಾಷ್ಟ್ರ ಭಕ್ತರನ್ನು 1931 ಮಾ.23 ರಂದು ಗಲ್ಲಿಗೇರಿಸಿತು. ಇವರ ರಾಷ್ಟ್ರಭಕ್ತಿ ಮತ್ತು ವಿಚಾರವನ್ನು ಯುವಜನತೆ ಮೈಗೂಡಿಸಿಕೊಳ್ಳಬೇಕಿದೆ ಎಂದರು.
ಪೂಜ್ಯನೀಯರಾದ ಇವರ ಸ್ಮರಣೆಯ ಅಂಗವಾಗಿ ಮಾ.23ರ ಸಂಜೆ 6 ಗಂಟೆಗೆ ನಗರದ ಆನೇ ಬಾಗಿಲ ಬಳಿಯಿಂದ ಓನಕೆ ಒಬವ್ವ ವೃತ್ತದವರೆಗೂ ಪಂಜಿನ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ.
ಇದರಲ್ಲಿ ಸುಮಾರು 500ಕ್ಕೂ ಹೆಚ್ಚು ಯುವ ಜನತೆ ಭಾಗವಹಿಸಲಿದ್ದಾರೆ. ತದ ನಂತರ ಓನಕೆ ಒಬವ್ವ ವೃತ್ತದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಇದರಲ್ಲಿ ಕೇಂದ್ರ ಸಚಿವರಾದ ಎ.ನಾರಾಯಣಸ್ವಾಮಿ, ಸಚಿವರಾಧ ಶ್ರೀರಾಮುಲು, ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ಬಿಜೆಪಿಯ ಅಧ್ಯಕ್ಷರಾದ ಮುರಳಿ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ನರೇಂದ್ರನಾಥ್, ನಾಗರಾಜ್ ಬೇದ್ರೆ, ದಗ್ಗೆ ಶಿವಪ್ರಕಾಶ್, ಮೋಹನ್, ಭರತ್, ಚಂದ್ರಶೇಖರ್ ಸೇರಿದಂತೆ ಇತರರು ಭಾಗವಹಿಸಿದ್ದರು.