ಬೆಂಗಳೂರು: ಇಂದು ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಕಾರ್ಯಕ್ರಮವನ್ನ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಉದ್ಘಾಟಿಸಿದರು. ಇಂದಿನಿಂದ ಮಾರ್ಚ್ 10ರ ತನಕ ಚಲನಚಿತ್ರೋತ್ಸವ ನಡೆಯಲಿದೆ.
ಉದ್ಘಾಟನೆ ಬಳಿಕ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಮಾತನಾಡಿ, ತಮ್ಮ ಬಾಲ್ಯದ ಸಿನಿಮಾದ ಬಗ್ಗೆ ನೆನೆದಿದ್ದಾರೆ. ಬ್ಲಾಕ್ ಅಂಡ್ ವೈಟ್ ಸಿನಿಮಾಗಳೇ ನನಗೆ ಇಷ್ಟವಾಗ್ತಾ ಇತ್ತು. ಈಗಲೂ ಅದೇ ಇಷ್ಟ. ಈಗಿನ ಸಿನಿಮಾದಲ್ಲೂ ಆಗಾಗ ಬ್ಲಾಕ್ ಅಂಡ್ ವೈಟ್ ಕಾಣಿಸುತ್ತಿರುತ್ತೆ.
ಕಾಲೇಜಲ್ಲಿ ಸಿನಿಮಾ ಹೋಗುವಾಗ ಹೌಸ್ ಫುಲ್ ಅಂತ ಬೋರ್ಡ್ ಇರ್ತಾ ಇತ್ತು. ಆದ್ರೂ ಕೂಡ ಬಿಡ್ತಾ ಇರ್ಲಿಲ್ಲ. ಕನ್ನಡ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಈಗ ನಡೀತಾ ಇದೆ. ಇದು ಚೆನ್ನಾಗಿ ನಡೆಯಬೇಕು.
ಚಲನಚಿತ್ರ ರಂಗ ಉಳಿಸೋದು ತುಂಬಾ ಅನಿವಾರ್ಯತೆ ಇದೆ. ಕನ್ನಡ ಉಳಿಯೋದಕ್ಕೆ, ಕನ್ನಡ ಬೆಳೆಯೋದಕ್ಕೆ, ಅದರ ಭವಿಷ್ಯ ಬೆಳೆಯೋದಕ್ಕೆ ಸಿನಿಮಾ ಅವಶ್ಯಕತೆ ಇದೆ. ಅತ್ಯಂತ ಪ್ರಭಾವಿ ಮಾಧ್ಯಮ ಅಂದ್ರೆ ಅದು ಸಿನಿಮಾ. ಥಿಯೇಟರ್ ಇದ್ದರೆ ತಾನೇ ಜನ ಬರೋದು ಸಿನಿಮಾ ನೋಡೋದು. ನಮ್ಮಲ್ಲಿರುವ ಟ್ಯಾಲೆಂಟ್ ಅನ್ನ ಇಲ್ಲಿಯೆ ಬಳಕೆ ಮಾಡಿ, ಆಮೇಲೆ ಮುಂದೆ ಹೋಗಿ. ಪರಿವಾರದ ಜೊತೆಗೆ ಬಂದು ಸಿನಿಮಾ ನೋಡ್ತಾ ಇದ್ರಲ್ಲ. ಆ ರೀತಿ ಈಗ ಮಾಡಬೇಕು. ಆ ನಿಟ್ಟಿನಲ್ಲಿ ಥಿಂಕ್ ಮಾಡೋದಕ್ಕೆ ನಮ್ಮ ಸರ್ಕಾರ ಚಿಂತೆ ಮಾಡುತ್ತೆ. ಹೀಗಾಗಿ ಇಂದಿನ ದಿನವನ್ನ ಅಂದರೆ ಮಾರ್ಚ್ 3ಅನ್ನ ವಿಶ್ವ ಕನ್ನಡ ಸಿನಿಮಾ ದಿನವೆಂದು ಘೋಷಣೆ ಮಾಡಲಾಗುತ್ತಿದೆ ಎಂದರು.
ಸಿಎಂ ಘೋಷಣೆಯ ಬೆನ್ನಲ್ಲೇ ಚಿತ್ರರಂಗ ಹಾಗೂ ಅಕಾಡೆಮಿ ಪರವಾಗಿ ಸುನೀಲ್ ಪುರಾಣಿಕ್ ಧನ್ಯವಾದ ತಿಳಿಸಿದ್ದಾರೆ.