ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 28 : ಮಾರಣಾಂತಿಕ ಹಲ್ಲೆ ಮಾಡಿದ ಆರೋಪಿಗೆ ನ್ಯಾಯಾಲಯವು ಐದು ವರ್ಷ ಜೈಲು ಶಿಕ್ಷೆ ಹಾಗು 25,000/- ದಂಡ ವಿಧಿಸಿದೆ.
ತಿಪ್ಪೇಸ್ವಾಮಿ ಶಿಕ್ಷೆಗೊಳಗಾದ ಆರೋಪಿ. ಈತನು ಮೇ. 30, 2024 ರಲ್ಲಿ ಹಿರಿಯೂರು ನಗರದ ನಂಜಯ್ಯನಕೊಟ್ಟಿಗೆಯಿಂದ ಕೆ.ಎಂ. ಕೊಟ್ಟಿಗೆಗೆ ರಸ್ತೆಯಲ್ಲಿ ಹೋಗುವಾಗ ದ್ವಿಚಕ್ರ ವಾಹನವನ್ನು ಅತಿವೇಗವಾಗಿ ಚಾಲನೆ ಮಾಡಿಕೊಂಡು ಬರುತ್ತಿದ್ದಾಗ ಶ್ರೀಧರ್‌ಮೂರ್ತಿ ಎಂಬ ವ್ಯಕ್ತಿ ಇಷ್ಟು ಜೋರಾಗಿ ಏಕೆ ಬರುತ್ತೀಯಾ ನಿಧಾನವಾಗಿ ಬಾ ಎಂದು ಹೇಳಿದ್ದಕ್ಕೆ ಆರೋಪಿ ತಿಪ್ಪೇಸ್ವಾಮಿ ಶ್ರೀಧರ್‌ಮೂರ್ತಿ ರವರಿಗೆ ನೀನು ಯಾರು ಕೇಳುವುದಕ್ಕೆ ಎಂದು ಅವಾಚ್ಯ ಪದಗಳಿಂದ ನಿಂದಿಸಿ ತನ್ನ ಪ್ಯಾಂಟ್ ಜೇಬಿನಲ್ಲಿದ್ದ ಬಿಯರ್ ಬಾಟಲಿ ತೆಗೆದುಕೊಂಡು ಶ್ರೀಧರಮೂರ್ತಿಯವರ ತಲೆಗೆ ಮಾರಣಾಂತಿಕ ಹಲ್ಲೆ ಮಾಡಿರುತ್ತಾನೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಶ್ರೀಧರಮೂರ್ತಿಯವರು ಹಿರಿಯೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುತ್ತಾರೆ.
ಈ ಪ್ರಕರಣವನ್ನು ಠಾಣೆಯ ತನಿಖಾಧಿಕಾರಿಗಳಾದ ಮಂಜುನಾಥ ಬಿ.ಎನ್. ಪಿ.ಎಸ್.ಐ. ಹಿರಿಯೂರು ನಗರ ಪೋಲಿಸ್ ಠಾಣೆ ಇವರು ತನಿಖೆಯನ್ನು ಪೂರೈಸಿ ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿಯನ್ನು ಸಲ್ಲಿಸಿದರು.
ಈ ಪ್ರಕರಣವು ಚಿತ್ರದುರ್ಗ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಆರೋಪಿ ತಿಪ್ಪೇಸ್ವಾಮಿ ಶ್ರೀಧರ್‌ಮೂರ್ತಿಗೆ ಮಾರಣಾಂತಿಕ ಹಲ್ಲೆ ಮಾಡಿರುವುದು ಸಾಬೀತಾಗಿದ್ದರಿಂದ ಆರೋಪಿತನಿಗೆ
ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ವೀರಣ್ಣ ಸೋಮಶೇಖರ ರವರು ನಿನ್ನೆ (ದಿನಾಂಕ: 27-03 -2026) ಐದು ವರ್ಷ ಜೈಲು ಶಿಕ್ಷೆ ಹಾಗು 25,000/- ದಂಡ ವಿಧಿಸಿ ಆದೇಶಿಸಿರುತ್ತಾರೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಶ್ರೀ ಶಂಶೀರ್ ಅಲಿಖಾನ್ ರವರು ವಾದ ಮಂಡಿಸಿರುತ್ತಾರೆ.
ಈ ಪ್ರಕರಣವನ್ನು ಉತ್ತಮ ರೀತಿಯಲ್ಲಿ ತನಿಖೆ ಕೈಗೊಂಡು ಆರೋಪಿತರಿಗೆ ಶಿಕ್ಷೆ ಆಗುವಂತೆ ಕಾರ್ಯ ನಿರ್ವಹಿಸಿದ ತನಿಖಾಧಿಕಾರಿಯಾದ ಮಂಜುನಾಥ ಬಿಎನ್, ಪಿಎಸ್‌ಐ, ತನಿಖಾ ಸಹಾಯಕರು ಸಿಬ್ಬಂದಿಗಳು ಮತ್ತು ಕೋರ್ಟ್ ಸಿಬ್ಬಂದಿ ಹಾಗೂ ಕೋರ್ಟ್ ಮಾನಿಟರಿಂಗ್ ಸೆಲ್ ವಿಭಾಗದವರ ಕಾರ್ಯವನ್ನು ಪೊಲೀಸ್ ಅಧೀಕ್ಷಕರಾದ ರಂಜಿತ್ ಕುಮಾರ್ ಬಂಡಾರು ಐಪಿಎಸ್, ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಡಾ.ಶಿವಕುಮಾರ ಚಿತ್ರದುರ್ಗ ಜಿಲ್ಲೆ ಇವರು ಪ್ರಶಂಶಿಸಿರುತ್ತಾರೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!
ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.













