ಚಿತ್ರದುರ್ಗ: ಪಟ್ಟಭದ್ರ ಹಿತಾಸಕ್ತಿಗಳಿ ಹಿಂದೂತ್ವದ ಹೆಸರಿನಲ್ಲಿ ಜಾತಿ ವ್ಯವಸ್ಥೆ ಮಾಡುತ್ತಿದ್ದಾರೆ. ಸ್ವಾರ್ಥಕ್ಕಾ ಜಾತಿ ವ್ಯವಸ್ಥೆ ಎಂದು ಹೇಳುವುದು ಎಷ್ಟು ಸರಿ.ನಾನು ಜಾತಿ ವ್ಯವಸ್ಥೆಗೆ ವಿರುದ್ದ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ನಗರದ ಮಡಿವಾಳ ಮಾಸಿದೇವ ಮಠದಲ್ಲಿ ಹಮ್ಮಿಕೊಂಡಿದ್ದ ಕಾಯಕ ಜನೋತ್ಸವ ಕಾರ್ಯಕ್ರಮದಲ್ಲಿ ಮಾಚಿದೇವಶ್ರೀ ಪ್ರಶಸ್ತ್ರಿಯನ್ನು ಸ್ವೀಕಾರ ಮಾಡಿ ಮಾತನಾಡಿದ ಅವರು, ಜಾತಿ ರಹಿತ, ವರ್ಗ ರಹಿತ ಸಮಾಜ, ಮನುಷ್ಯ ಸಮಾಜ ನಿರ್ಮಾಣ ಆಗಬೇಕು. ಧರ್ಮದ ಭಾಷೆ ಪ್ರೀತಿ. ಮನುಷ್ಯ ಮನುಷ್ಯನನ್ನು ಪ್ರೀತಿಸುವುದೆ ಪ್ರೀತಿ. ಇದನ್ನು ಪ್ರತಿಯೊಬ್ಬರು ತಿಳಿದು ಬದುಕಬೇಕು. ಜಾತಿಗಳನ್ನು ಗುರುತಿಸಿ ಜಾತಿ ವ್ಯವಸ್ಥೆಯನ್ಮು ವಿರೋಧಿಸುವ ಮೂಲಕ ಜಾತಿಗಳನ್ನು ಕಿತ್ತೊಗೆಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಜಾತಿ ವ್ಯವಸ್ಥೆಯ ಕಾರಣಕ್ಕೆ ನಮ್ಮಲ್ಲಿ ಅಸಮಾನತೆ ಆರ್ಥಿಕ ಹಾಗೂ ರಾಜಕೀಯವಾಗಿ ನಿರ್ಮಾಣ ಆಗಿದೆ. ದೇವರು, ಸ್ವಾಮೀಜಿಗಳು ಜಾತಿ ವ್ಯವಸ್ಥೆ ಹುಟ್ಟುಹಾಕಿಲ್ಲ. ನಾನು ಹಿಂದೂ. ನಮಗೆ ಖಾಯಿಲೆ ಬಂದರೆ ನಮ್ಮ ಜಾತಿಯ ವೈದ್ಯರೆ ಬೇಕು ಎನ್ನುತ್ತೇವೆಯೋ. ಬದುಕಿಸಲು ಯಾರಾದರೆನು ಎಂದು ನಂತರ ಸ್ವಾರ್ಥಕ್ಕಾ ಜಾತಿ ವ್ಯವಸ್ಥೆ ಎಂದು ಹೇಳುವುದು ಎಷ್ಟು ಸರಿ ಎಂದ ಅವರು, ಮಡಿವಾಳ ಸಮಾಜ ಸಣ್ಣ ಸಮಾಜ. ಇದನ್ನು ಸಾಮಾಜಿಕ ಆರ್ಥಿಕವಾಗಿ ಮೇಲೆ ತರುವ ನಿಟ್ಟಿನಲ್ಲಿ ಸ್ವಾಮೀಜಿಗಳು ಶ್ರಮಿಸಲಿ ಎಂದು ಸಿದ್ದರಾಮಯ್ಯ ಹಾರೈಸಿ ದೇಶದ ಸಂಪತ್ತು ಎಲ್ಲಾ ಜನರ ಸಂಪತ್ತು, ಯಾರು ಒಬ್ಬರು ತೆರಿಗೆ ಕಟ್ಟಲ್ಲ.
ಸ್ವಾತಂತ್ರ್ಯ ಬಂದಾಗ ೧೬% ಮಾತ್ರ ಶಿಕ್ಷಣ ಪಡೆದಿದ್ದರು.ಇಂದು ೭೮% ಶಿಕ್ಷಣ ಪಡೆದಿದ್ದಾರೆ. ನಿಮ್ಮಲ್ಲಿ ಬಹಳ ಕಡಿಮೆ ಇದ್ದಾರೆ.ಸಮ ಸಮಾಜ ಆಗಬೇಕು ಎಂದು ಗಾಂಧೀಜಿ, ಅಂಬೇಡ್ಕರ್, ಬುದ್ದ ಸೇರಿದಂತೆ ಮಹನೀಯರು ಹೇಳಿದ್ದಾರೆ. ಶಿಕ್ಷಣ ಸಂಘಟನೆ ಹೋರಾಟದ ಮೂಲಕ ನಮ್ಮ ಸಮಾಜದ ಅಭಿವೃದ್ಧಿ ಸಾಧ್ಯ. ೮೫೦ ವರ್ಷಗಳ ಹಿಂದೆ ಬಸವಣ್ಣ ಹೇಳಿದ ಇವ ನಮವ್ವ ಇವ ನಮ್ಮವ ಎಂದು ಹೇಳಿದರು ಆದರೆ ಇದುವೆರಿಗೂ ಅನುಷ್ಠಾನ ಮಾಡಿಲ್ಲ. ಅನುಷ್ಟಾನ ಆಗದೆ ಇರುವ ರೀತಿ ಮಾಡಲು ಪಟ್ಟಭದ್ರ ಹಿತಾಸಕ್ತಿಗಳು ಕೆಲಸ ಮಾಡುತ್ತಿವೆ. ಇದರ ಬಗ್ಗೆ ನಾವುಗಳು ಎಚ್ಚೆತ್ತುಕೊಳ್ಳಬೇಕು.ಜಾತಿ ವ್ಯವಸ್ಥೆಯಿಂದ ಗುಲಾಮಗಿರಿ ಮನೆ ಮಾಡಿದೆ. ಇದನ್ನು ಕಿತ್ತೊಗೆಯಬೇಕು. ಸ್ವಾಭಿಮಾನದಿಂದ ಬದುಕುವುದನ್ನು ಪ್ರತಿಯೊಬ್ಬರು ಕಲೆತಾಗ ಸಮ ಸಮಾಜ ನಿರ್ಮಾಣ ಆಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.