ದಾವಣಗೆರೆ; ನೇರ ನುಡಿಯಿಂದಾನೇ ಖ್ಯಾತಿ ಪಡೆದವರು ಚನ್ನಗಿರಿಯ ಶಾಸಕ ಶಿವಗಂಗಾ ವಿ ಬಸವರಾಜು ಅವರು. ಇದೀಗ ತಾವೂ ಮಂತ್ರಿಯಾಗುವ ಬಗ್ಗೆಯೂ ಅಷ್ಟೇ ಖಡಕ್ಕಾಗಿ ಮಾತನಾಡಿದ್ದಾರೆ.
ಎರಡು ವರ್ಷದ ಸಾಧನಾ ಸಮಾವೇಶ ಮಾಡ್ತಾ ಇದಾರೆ. ಕೆಲವು ಮಂತ್ರಿಗಳು ಸಾಧನಾ ಸಮಾವೇಶದ ಪ್ರಕಾರ ಸಾಧನೆಯನ್ನ ಮಾಡಿಲ್ಲ. ಅವರ ಹೆಸರನ್ನ ಹೇಳೋದು ಬೇಡ. ಹೊಸದಾಗಿ ಆಯ್ಕೆಯಾಗಿರುವ ಶಾಸಕರಿಗೆ ಒಂದು ಸಲ ಅವಕಾಶ ಮಾಡಿಕೊಡಬೇಕು. ಆಗ ಪಕ್ಷಕ್ಕೂ ಉತ್ತಮ ಎನಿಸುತ್ತದೆ. ಯಾಕಂದ್ರೆ ಮೊದಲ ಬಾರಿಗೆ ಗೆದ್ದವರಲ್ಲಿ ಒಂದು ಜೋಶ್ ಇರುತ್ತೆ. ಒಂದು ಟೇಸ್ಟ್ ಇರುತ್ತದೆ. ಈ ಹಳಬರಿಗೆಲ್ಲಾ ಟೇಸ್ಟ್ ಇರುವುದಿಲ್ಲ. ಹೊಸಬರಿಗೆ ಕೊಟ್ಟರೆ ಅನುಕೂಲವಾಗುತ್ತದೆ ಎಂದಿದ್ದಾರೆ.
ನೀವೂ ಕೂಡ ಆಕಾಂಕ್ಷಿಯ ಎಂದು ಕೇಳಿದಾಗ, ಯಾರು ಸನ್ಯಾಸಿ ಅಲ್ಲ ಸರ್. ಆಕಾಂಕ್ಷಿಯೇ. ಎರಡೆರಡು ಕೊಟ್ಟಿದ್ದಾರೆ. ಯಾರ್ಯಾರು ಕೆಲಸ ಮಾಡಿದ್ದಾರೆ ಎಂಬುದನ್ನ ರಿಪೋರ್ಟ್ ನಲ್ಲಿ ನೋಡಲಿ. ಕಾಂಗ್ರೆಸ್ ಹೈಕಮಾಂಡ್ ಒಂದು ದೃಢ ನಿರ್ಧಾರವನ್ನ ತೆಗೆದುಕೊಳ್ಳಬೇಕು. ನಾವೂ ಹೋದಂತ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಮಹಿಳೆಯರು, ತಾಯಂದಿರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ. ಹೀಗಾಗಿ ಕಾಂಗ್ರೆಸ್ ಪರವಾಗಿ ಒಲವಿದೆ. ಈ ಹಿಂದೆಲ್ಲಾ ಗಂಡು ಮಕ್ಕಳು ಕಾರ್ಯಕ್ರಮಕ್ಕೆ ಬರ್ತಾ ಇದ್ದರು. ಆದರೆ ಈಗ ಹೆಣ್ಣುಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಬರ್ತಾ ಇದ್ದಾರೆ. ಕಾಂಗ್ರೆಸ್ ಏನು ಹೆಣ್ಣು ಮಕ್ಕಳಿಗಾಗಿ ಕಾರ್ಯಕ್ರಮವನ್ನು ತಂದಿದೆ, ಹೆಣ್ಣು ಮಕ್ಕಳೇ ವಾಲಂಟರಿಯಿಂದ ಮುಂದೆ ಬರ್ತಾ ಇದ್ದಾರೆ. ಅದನ್ನ ನಾವೂ ಎನ್ ಕ್ಯಾಷ್ ಮಾಡಿಕೊಳ್ಳಬೇಕು. ಕೆಲವೊಂದು ಮಂತ್ರಿಗಳು ಅವರ ವ್ಯವಹಾರಕ್ಕೆ ಸೀಮಿತವಾಗಿದ್ದಾರೆ. ಅವರು ವ್ಯವಹಾರ ಮಾಡಿಕೊಂಡೆ ಇರಲಿ. ಯಾರೂ ಆಕ್ಟೀವ್ ಆಗಿದ್ದಾರೆ ಅವರನ್ನ ಮಂತ್ರಿ ಮಾಡಿದ್ರೆ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರುವುದರಲ್ಲಿ ಅನುಮಾನವೇ ಇಲ್ಲ ಎಂದಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











