ಮಕಾನ.. ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿಯೇ ಎಲ್ಲರು ಈ ಹೆಸರನ್ನು ಕೇಳಿಯೇ ಇರುತ್ತೀರಿ ಹಾಗೇ ತಿಂದು ಇರುತ್ತೀರಿ. ಬೇಕರಿಗಳಲ್ಲಿ ಕೂಡ ಮಜಾನ ಲಭ್ಯವಿರುತ್ತದೆ. ಇದನ್ನ ಲೋಟಸ್ ಬೀಜ ಅಥವಾ ಫಾಕ್ಸ್ ಸೀಡ್ಸ್ ಎಂದು ಕರೆಯುತ್ತಾರೆ. ತಾವರೆ ಬೀಜಗಳಿಂದ ಮಾಡುವಂತದ್ದು. ಆರೋಗ್ಯಕ್ಕೆ ಸಾಕಷ್ಟು ಲಾಭವನ್ನು ತಂದುಕೊಡುತ್ತದೆ. ಅದರಲ್ಲೂ ಗರ್ಭಿಣಿಯರಿಗೂ ಉತ್ತಮ ಆಹಾರ ಎಂದು ವೈದ್ಯರೇ ಸಲಹೆಗಳನ್ನು ನೀಡುತ್ತಾರೆ.
* ಡ್ರೈ ಫ್ರೂಟ್ಸ್ ಗಳಿಗಿಂತಲೂ ಉತ್ತಮ ಪೌಷ್ಟಿಕಾಂಶ ಈ ತಾವರೆ ಬೀಜದಲ್ಲಿ ಅಡಗಿದೆ.
* ಇವುಗಳನ್ನ ಸೇವಿಸುವುದರಿಂದ ಹೃದಯಕ್ಕೆ ಸಂಬಂಧಿಸಿದ ಯಾವುದೇ ಕಾಯಿಲೆಗಳಿದ್ದರೂ ಇವುಗಳ ಸೇವನೆಯಿಂದ ದೂರವಾಗುತ್ತವೆ.
* ಡಯೆಟ್ ಮಾಡುವವರಿಗೆ ಇದು ಬೆಸ್ಟ್ ಪದಾರ್ಥ. ಸಾಕಷ್ಟು ಪೋಷಕಾಂಶಗಳು ಇದರಲ್ಲಿ ಇರುವ ಕಾರಣ, ಡಯೆಟ್ ಸಮಯದಲ್ಲಿ ಖಾಲಿ ಹೊಟ್ಟೆ ಬಿಡುವುದಕ್ಕಿಂತ ಮಕಾನ ಸೇವಿಸಬಹುದಾಗಿದೆ.
* ಕ್ಯಾಲೊರಿಯನ್ನು ಕಡಿಮೆ ಮಾಡುವುದಕ್ಕೆ ಮಕಾನ ಬೀಜಗಳು ಸಹಾಯ ಮಾಡುತ್ತವೆ. ಹೀಗಾಗಿ ಪ್ರತಿದಿನದ ಆಹಾರ ಸೇವನೆಯಲ್ಲಿ ಮಕಾನ ಇರುವುದು ಉತ್ಯಮ.
* ಮಖಾನ ಬೀಜಗಳಲ್ಲಿ ಆಂಟಿ – ಏಜಿಂಗ್ ಗುಣ ಲಕ್ಷಣಗಳಿಂದ ಯಥೇಚ್ಛವಾದ ಆಂಟಿ – ಆಕ್ಸಿಡೆಂಟ್ ಗಳನ್ನು ಒಳಗೊಂಡಿವೆ. ಪ್ರತಿ ದಿನ ಒಂದು ಹಿಡಿ ಮಖಾನ ಬೀಜಗಳನ್ನು ಸೇವಿಸುವುದರಿಂದ ನಿಮ್ಮ ಸೌಂದರ್ಯ ಹಾಗೂ ಯೌವ್ವನ ಹಾಗೇ ಉಳಿದು ನಿಮ್ಮ ದೇಹದ ಚರ್ಮದ ಹೊಳಪು ಹೆಚ್ಚುತ್ತದೆ. ಆದರೆ ಯಾವುದೇ ಕಾರಣಕ್ಕೂ ಮಖಾನ ಬೀಜಗಳನ್ನು ಎಣ್ಣೆಯಲ್ಲಿ ಕರಿದು ತಿನ್ನಬಾರದು.
* ಮಖಾನ ಬೀಜಗಳು ಮಧುಮೇಹಿ ಮತ್ತು ಹೃದಯ ರಕ್ತನಾಳಗಳ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಬಹಳ ಒಳ್ಳೆಯ ಆಹಾರ ಎನಿಸಿವೆ. ಏಕೆಂದರೆ ಇವುಗಳಲ್ಲಿ ದೇಹಕ್ಕೆ ಅಗತ್ಯವಿರುವ ಒಳ್ಳೆಯ ಕೊಬ್ಬಿನ ಅಂಶಗಳು ಹೇರಳವಾಗಿದ್ದು, ಸ್ಯಾಚುರೇಟೆಡ್ ಕೊಬ್ಬಿನ ಅಂಶಗಳು ಬಹಳಷ್ಟು ಕಡಿಮೆ ಇವೆ.
(ಪ್ರಮುಖ ಸೂಚನೆ: ಆರೋಗ್ಯ ತಜ್ಞರು ಮತ್ತು ಇತರ ಅಧ್ಯಯನಗಳಿಂದ ಪಡೆದ ಮಾಹಿತಿಯ ಆಧಾರದ ಮೇಲೆ ನಾವು ಈ ವಿವರಗಳನ್ನು ಒದಗಿಸುತ್ತಿದ್ದೇವೆ. ವಿಷಯಗಳು ಕೇವಲ ತಿಳುವಳಿಕೆಗಾಗಿ ಮಾತ್ರ. ನಿಮಗೆ ಯಾವುದೇ ಅನುಮಾನಗಳು ಅಥವಾ ಸಮಸ್ಯೆಗಳಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.)