Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮಹದೇವಪ್ಪ ಹೈಕಮಾಂಡ್ ಒಂದು ಭಾಗ : ಡಿಕೆಶಿ ಹಿಂಗ್ಯಾಕಂದ್ರು..?

---Advertisement---

ಬೆಂಗಳೂರು: ರಾಜಕಾರಣಿಗಳ ನಡುವಿನ ಮಾತುಕತೆಯಲ್ಲಿ ಸೈಲೆಂಟ್ ಆಗಿ ಕೊಡುವ ಪಂಚ್ ಗಳು ಕಡಿಮೆ ಏನು ಇರುವುದಿಲ್ಲ. ಕೆಲವೊಮ್ಮೆ‌ ನೇರವಾಗಿ ಹೇಳದೆ ಇರುವ ಮಾತನ್ನ ಸೈಲೆಂಟ್ ಆಗಿನೆ ಕೊಡುತ್ತಾರೆ. ಅದಕ್ಕೆ ಉದಾಹರಣೆ ಡಿಕೆ ಶಿವಕುಮಾರ್. ಹೌದು ಹೆಚ್.ಸಿ.ಮಹದೇವಪ್ಪ ಅವರ ಮಾತಿಗೆ ಈಗ ಸೈಲೆಂಟ್ ಆಗಿನೇ ಪಂಚ್ ಕೊಟ್ಟಿದ್ದಾರೆ ಡಿಕೆ ಶಿವಕುಮಾರ್.

ನಾಯಕತ್ವದ ಚರ್ಚೆಯನ್ನ ನಾಯಿಗಳಿಗೆ ಹೋಲಿಕೆ ಮಾಡಿದ್ದ ಮಹದೇವಪ್ಪ ಅವರಿಗೆ ತಿರುಗೇಟು ನೀಡಿದ್ದಾರೆ. ನಾನು ಮಹದೇವಪ್ಪ ಅಥವಾ ಬೇರೆಯವರ ಹೇಳಿಕೆಗೆ ಉತ್ತರ ಕೊಡಲು ತಯಾರಿಲ್ಲ. ನಾಯಕತ್ವ ವಿಚಾರವಾಗಿ ಈ ಹಿಂದೆ ಹೇಳಿರುವಂತೆ ನಾನು, ಸಿದ್ದರಾಮಯ್ಯ ಅವರು ಹಾಗೂ ಹೈಕಮಾಂಡ್ ಎಲ್ಲರೂ ಸೇರಿ ತೆಗೆದುಕೊಂಡಿರುವ ತೀರ್ಮಾನ.‌ ಈ ತೀರ್ಮಾನ ಏನು ಎಂಬುದು ಸಮಯ ಬಂದಾಗ ತಿಳಿಯುತ್ತದೆ. ಇದು ಕದ್ದು ಮುಚ್ಚಿ ಮಾಡಿಕೊಂಡಿರುವ ಗುಟ್ಟು, ವ್ಯವಹಾರವಲ್ಲ. ಸಿದ್ದರಾಮಯ್ಯ ಅವರೇ ಸಮಯ ಬಂದಾಗ ರಾಜ್ಯದ ಜನಕ್ಕೆ ಸಂದೇಶವನ್ನು ನೀಡುತ್ತಾರೆ ಎಂದಿದ್ದಾರೆ.

ಇನ್ನು ಹೆಚ್.ಸಿ.ಮಹದೇವಪ್ಪ ಅವರ ಹೇಳಿಕೆಗೆ ಡಿಕೆ ಸುರೇಶ್ ಅವರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಮಹದೇವಪ್ಪ ಅವರು ಯಾವುದೆರ ನಾಯಿಗೆ ಹೋಲಿಕೆ ಮಾಡಿ ಮಾತನಾಡಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಆದೃ ಕಟ್ಡಾ ಕಾಂಗ್ರೆಸ್ದಿಗರು ಯಾರೂ ಬೀದಿ ನಾಯಿಗಳಲ್ಲ. ಬೀದಿ ನಾಯಿಗೆ ಊಟ ಹಾಕುವುದು ಯಾಕೆ..? ಅವು ನಮ್ಮನ್ನ ಕಾಯುತ್ತವೆ ಅಂತ. ನಾಯಿಗಿರುವ ನಿಯತ್ತು ಮನುಷ್ಯರಿಗೆ ಇಲ್ಲ ಅಂತಾರೆ. ಹಲವಾರು ಸನ್ನಿವೇಶದಲ್ಲಿ ಆ ನಾಣ್ಣುಡಿಯನ್ನು ಕೇಳಿದ್ದೇವೆ. ಕಟ್ಟಾ ಕಾಂಗ್ರೆಸ್ಸಿಗರು ಯಾವತ್ತಿದ್ದರೂ ನಿಯತ್ತಿನ ನಾಯಿಗಳು. ಋಣ ತೀರುವ ವ್ಯಕ್ತಿತ್ವದ ನಾಯಿಗಳು, ಯಜಮಾನನ ಋಣ ತೀರಿಸುವ ನಾಯಿಗಳು ಎಂದು ತಿರುಗೇಟು ನೀಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...