ನವದೆಹಲಿ: ಇತ್ತೀಚೆಗೆ ಎಲ್ಲಾ ವಸ್ತುಗಳ ಬೆಲೆಯಲ್ಲೂ ಸಾಕಷ್ಟು ಏರಿಕೆಯಾಗಿತ್ತು. ಅದರಲ್ಲೂ ಇಂದಿನಿಂದ ಇನ್ನಷ್ಟು ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಿದೆ. ಆದ್ರೆ ಇದೆಲ್ಲದರ ನಡುವೆ ಜನ ಸಾಮಾನ್ಯರಿಗೆ ಸಂತಸದ ಸುದ್ದಿಯೊಂದು ಸಿಕ್ಕಿದೆ. ಅದು ಎಲ್ಪಿಜಿ ಬೆಲೆ ಇಳಿಕೆ ವಿಚಾರ.
ಮೊದ ಮೊದಲಿಗೆ ಬಡ, ಮಧ್ಯಮ ವರ್ಗದವರಿಗೂ ಎಟಕುವಂತಿದ್ದ ಸಿಲಿಂಡರ್ ಆ ಬಳಿಕ ಸಾವಿರ ರೂಪಾಯಿಗಿಂತ ಹೆಚ್ಚಾಗಿತ್ತು. ಗ್ರಾಮೀಣ ಪ್ರದೇಶದಲ್ಲಂತೂ ಎಲ್ಪಿಜಿ ಬೆಲೆ ಏರಿಕೆಯಿಂದಾಗಿ ಮತ್ತೆ ಸೌದೆ ಒಲೆಯ ಕಡೆ ಸಾಕಷ್ಟು ಜನ ಮುಖ ಮಾಡುತ್ತಿದ್ದಾರೆ. ಇದರ ನಡುವೆ ಆಟೋ ಓಡಿಸುವವರು, ವ್ಯಾಪಾರಕ್ಕಾಗಿ ಗ್ಯಾಸ್ ಬಳಕೆ ಮಾಡುವವರು ತೀರಾ ಸಂಕಷ್ಟಕ್ಕೀಡಾಗಿದ್ದರು. ಇದೀಗ ವ್ಯಾಪಾರಿಗಳಿಗೆ ಕೊಂಚ ಸಮಾಧಾನ ತಂದಿದೆ.
19 ಕೆಜಿಯ ಒಂದು ಕಮರ್ಷಿಯಲ್ ಸಿಲಿಂಡರ್ ಬೆಲೆ 102 ರೂಪಾಯಿ ಇಳಿಕೆಯಾಗಿದೆ. ಡಿಸೆಂಬರ್ 1ರಂದು 19 ಕೆಜಿಯ ಸಿಲಿಂಡರ್ 100 ರೂಪಾಯಿ ಏರಿಕೆಯಾಗಿತ್ತು. ಇದೀಗ 102 ರೂಪಾಯಿ ಇಳಿಕೆಯಾಗಿದ್ದು, ಈ ಮೂಲಕ 1998.50 ಇಳಿಕೆಯಾಗಿದೆ. ಈ ಮೂಲಕ ಕೇವಲ ಕಮರ್ಷಿಯಲ್ ಬಳಕೆಯ ಸಿಲಿಂಡರ್ ಗಳ ಬೆಲೆ ಮಾತ್ರ ಇಳಿಕೆ ಮಾಡಿದೆ.