ಕಸದಿಂದ ಆರಂಭವಾದ ಪ್ರೇಮ, ಸಾವಿನಲ್ಲಿ ಅಂತ್ಯ

suddionenews
1 Min Read

ಬೆಂಗಳೂರು: ಒಮ್ಮೆ ಪ್ರೀತಿ ಪ್ರೇಮ ಅಂತ ಹೋಗುವ ಅದೆಷ್ಟೋ ಘಟನೆಗಳು ಅಪಾಯ ತಂದೊಡ್ಡುತ್ತವೆ. ಪ್ರೀತಿಸದವನೇ ಜೀವ ತೆಗೆದಿರುವ ಅದೆಷ್ಟೋ ಉದಾಹರಣೆಗಳನ್ನ ಓದಿದ್ದೇವೆ. ಇಲ್ಲೊಂದು ಕಥೆಯೂ ಹಾಗೇ ಆಗಿದರ. ಕಣ್ಣೋಟದಲ್ಲಿ ಬೆರೆತ ಪ್ರೀತಿ ಪ್ರೇಮ ದುರಂತ ಸಾವಿನಲ್ಲಿ ಅಂತ್ಯವಾಗಿದೆ. ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ

ಮಂಜುನಾಥ್ ಎಂಬಾತ ಬೆಂಗಳೂರಿನಲ್ಲಿ ಕಸ ವಿಲೇವಾರಿ ಆಟ ಓಡಿಸಿಕೊಂಡಿದ್ದ. ಪ್ರತಿದಿನ ಕಸ ಸಂಗ್ರಹಿಸಲು ಎಲ್ಲರ ಮನೆ ಬಾಗಿಲಿಗೆ ಈತನ ಆಟೋ ಹೋಗುತ್ತಿತ್ತು. ಗಾಯತ್ರಿ ಎಂಬಾಕೆ ಬೇರೊಬ್ಬರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದಳು. ಆಕೆ ಕಸ ಹಾಕುವಾಗ ಮಂಜುನಾಥ್ ಮೇಲೆ ಅದೆಂತದ್ದೋ ಸೆಳೆತ ಶುರುವಾಗಿದೆ. ಪ್ರತಿದಿನ ಆತನ ಆಟೋಗಾಗಿ ಕಾಯುವಿಕೆ ಶುರುವಾಗಿದೆ.

ಹೀಗೆ ಮುಂದುವರೆದು ಒಂದು ದಿನ ಇಬ್ಬರ ಹೆಸರು ಕೇಳಿಕೊಂಡಿದ್ದಾರೆ, ನಂಬರ್ ಎಕ್ಸ್ಚೇಂಜ್ ಆಗಿದೆ. ಮಾತು ಕಥೆ ನಡುವೆ ಪ್ರೀತಿ ಪ್ರೇಮ ಪ್ರಣಯವೂ ಶುರುವಾಗಿದೆ. ಆದ್ರೆ ಈ ಮಧ್ಯೆ ಬಂದ ಸಮಸ್ಯೆ ಅಂದ್ರೆ ಗಾಯತ್ರಿಗೆ ಅದಾಗಲೇ ಮದುವೆಯಾಗಿ ಎರಡು ಮಕ್ಕಳಿದ್ರು, ಗಂಡ ಇರಲಿಲ್ಲ. ಮಂಜುನಾಥ ಸ್ಟಿಲ್ ಬ್ಯಾಚುಲರ್. ಈಗಿರುವಾಗ ಗಾಯತ್ರಿ ಮಂಜುನಾಥ್ ನನ್ನ ತುಂಬಾ ಅಚ್ಚಿಕೊಂಡಿದ್ದಳು. ನನಗೆ ಮಕ್ಕಳಿಗೆ ಈತನೇ ಧಿಕ್ಕು ಅಂತಿದ್ಲು.

ಆದ್ರೆ ಮಂಜುನಾಥ ಮಾತ್ರ ಅದಕ್ಕೆ ತದ್ವಿರುದ್ಧವಾಗಿ ಯೋಚಿಸಿದ್ದ. ನನಗಿನ್ನು ಮದಯವೆಯಾಗಿಲ್ಲ. ಮಕ್ಕಳಿರುವವಳನ್ನ ಅದೇಗೆ ಮದುವೆಯಾಗಲಿ ಎಂದುಕೊಂಡಿದ್ದ. ಬೇರೆ ಮದುವೆಗೆ ಫ್ಲ್ಯಾನ್ ಮಾಡಿದ್ದ. ಇದೆಲ್ಲವನ್ನು ಗಾಯತ್ರಿ ವಿರೋಧಿಸಿದ್ದಳು. ಒಂದು ದಿನ ಗಾಯತ್ರಿಗೆ ಪಾಠ ಕಲಿಸಬೇಕೆಂದು ಗಾಂಜಾ ಹೊಡೆದು ಬಂದಿದ್ದ.

ಮತ್ತದೇ ಮಾತು ಬೇರೆ ಮದುವೆಯಾಗುತ್ತೇನೆಂದು ಮಂಜುನಾಥ ಹಠ ಹಿಡಿದ. ಜಗಳ ತಾರಕಕ್ಕೇರಿ ಗಾಯತ್ರಿಯನ್ನ ಕೊಲೆ ಮಾಡಿದ. ವೇಲಿನಲ್ಲಿ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ. ಆ ಬಳಿಕ ವಿಜಯನಗರ ಠಾಣೆಗೆ ಹೋಗಿ ಮಂಜುನಾಥ ತಪ್ಪೊಪ್ಪಿಕೊಂಡಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *