Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಂದು ಆದ್ಮೇಲೆ ಆಕೃತಿ ಜೊತೆಗೂ ಲವ್ ಬ್ರೇಕಪ್ : ಬಿಗ್ ಬಾಸ್ ಸ್ಪರ್ಧಿ ಜಶ್ವಂತ್ ಲವ್ ಕಹಾನಿ..!

---Advertisement---

ಕಳೆದ ಬಾರಿ ಬಿಗ್ ಬಾಸ್ ಒಟಿಟಿ ಮೂಲಕ ನಂದು ಹಾಗೂ ಜಶ್ವಂತ್ ಎಲ್ಲರಿಗೂ ಪರಿಚಿತರಾಗಿದ್ದರು. ಇಬ್ಬರು ರಿಯಕ್ ಆಗಿನೆ ಪ್ರೇಮ ಪಕ್ಷಿಗಳಾಗಿದ್ದರು. ಬಿಗ್ ಬಾಸ್ ಬರುವುದಕ್ಕೂ ಮುನ್ನ ರೋಡೀಸ್ ಶೋನಲ್ಲಿ ಇಬ್ಬರು ಗೆಲುವು ಕಂಡಿದ್ದರು. ಬಿಗ್ ಬಾಸ್ ಮನೆಗೆ ಬಂದ ಮೇಲೆ ಜಶ್ವಂತ್ ನಡವಳಿಕೆಯಲ್ಲಿ ಕೆಲವೊಂದು ಬದಲಾವಣೆಯಾಗಿತ್ತು. ಪ್ರೀತಿ ಪ್ರೇಮ ಬಿಗ್ ಬಾಸ್ಯೊಳಗೆ ಮುಗಿದಿತ್ತು. ಹೊರಗೆ ಬಂದ ಮೇಲೆ ನಂದು ತಮ್ಮ ಬ್ರೇಕಪ್ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿದ್ದರು.

ಬಳಿಕ ಜಶ್ವಂತ್ ಹೆಸರು ಆಕೃತಿ ನೇಗಿ ಜೊತೆಗೆ ತಗಲಾಕಿಕೊಂಡಿತ್ತು. ರಿಯಾಲಿಟಿ ಶೋ ಒಂದರಲ್ಲಿಯೇ ಇಬ್ಬರ ಪರಿಚಯವಾಗಿತ್ತು. ಆಕೃತಿ ಹಾಗೂ ಜಶ್ವಂತ್ ನಡುವೆ ಇದ್ದ ಬಾಂಡಿಂಗ್ ಕಂಡು ಅವರಿಬ್ಬರು ಪ್ರೀತಿ ಮಾಡ್ತಾ ಇದಾರೆ ಎಂದೇ ಮಾತಾಡಿಕೊಂಡರು. ಇಬ್ಬರ ರೊಮ್ಯಾಂಟಿಕ್ ಫೋಟೋಗಳು, ರೀಲ್ಸ್ ಗಳು ಸೋಷಿಯಲದ ಮೀಡಿಯಾದಲ್ಲಿ ಜಲ್ ಚಲ್ ಎಬ್ಬಿಸಿತ್ತು. ಇದೀಗ ಇಬ್ಬರ ನಡುವೆ ಬ್ರೇಕಪ್ ಆಗಿದೆ. ಈ ಬಗ್ಗೆ ಜಶ್ವಂತ್ ತಮ್ಮ ಸೋಷಿಯಲ್ ಮೀಡಿಯಾದ ಮೂಲಕ ಸ್ಪಷ್ಟನೆ ನೀಡಿದ್ದಾರೆ.

 

ಇದು ನಮ್ಮಿಬ್ಬರಿಗೂ ಕಠಿಣ ನಿರ್ಧಾರವಾಗಿತ್ತು. ಆದ್ರೆ ಇದು ಅನಿವಾರ್ಯವೂ ಕೂಡ ಆಗಿದೆ. ನಮ್ಮಿಬ್ಬರ ಮಧ್ಯೆ ಕೆಲವು ಗೊಂದಲಗಳಿವೆ. ಈ ಮಧ್ಯೆ ಯಾವುದೇ ಆರೋಪ ಮಾಡೋದಿಲ್ಲ. ಬಹುಶಃ ನಿಮ್ಮೆಲ್ಲರಿಗೂ ಹೇಳೋದಕ್ಕೆ ಇದು ಒಳ್ಳೆ ಸಮಯ. ನಮ್ಮದೇ ಆದ ರೀತಿಯಲ್ಲಿ ನಾವು ಮುಂದುವರೆಯಲೂ ನಿರ್ಧರಿಸಿದ್ದೇವೆ ಇದಕ್ಕೆ ನಿಮ್ಮ ಬೆಂಬಲವಿರಲಿ ಎಂದು ಬರೆದುಕೊಂಡಿದ್ದಾರೆ. ಹಾಗೇ ಇಬ್ಬರು ಒಬ್ಬರಿಗೊಬ್ಬರು ಅನ್ ಫಾಲೋ ಮಾಡಿದ್ದಾರೆ. ಜೊತೆಗಿದ್ದ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment