ಮರ್ಯಾದೆ ವಿಚಾರದಲ್ಲಿ ಕಾವ್ಯಶ್ರೀ – ಗೊಬ್ಬರಗಾಲ ನಡುವೆ ಜೋರಾಯ್ತು ಜಗಳ..!

1 Min Read

 

ಬಿಗ್ ಬಾಸ್ ಮನೆಯಲ್ಲಿ ನವರಾತ್ರಿ ಸಂಭ್ರಮ ಕೂಡ ಕಳೆಗಟ್ಟಿದೆ. ಬಿಗ್ ಬಾಸ್ ಸದಸ್ಯರು ಹಬ್ಬದುಡುಗೆಯಲ್ಲಿ ಮಿರ ಮಿರ ಮಿಂಚುತ್ತಿದ್ದಾರೆ. ಇದರ ನಡುವೆ ಆಗಾಗ ಜಗಳ, ಮನಸ್ತಾಪ ಕೂಡ ನಡೆಯುತ್ತಾ ಇರುತ್ತದೆ. ಅದರಲ್ಲೂ ಹಬ್ಬದ ಸಂತಸದ ಸಮಯದಲ್ಲಿ ಗೊಬ್ಬರಗಾಲ ಮತ್ತು ಕಾವ್ಯಶ್ರೀ ನಡುವೆ ಮರ್ಯಾದೆ ಪ್ರಶ್ನೆ ಎದುರಾಗಿದೆ.

ವಿನೋದ್ ಗೊಬ್ಬರಗಾಲ ಗಿಚ್ಚಿ ಗಿಲಿಗಿಲಿಯಿಂದ ಬಂದವರು. ಕಾವ್ಯಶ್ರೀ ಮಂಗಳಗೌರಿ ಧಾರಾವಾಹಿಯಲ್ಲಿ ಖ್ಯಾತಿ ಪಡೆದವರು. ಈ ಇಬ್ಬರು ಬಿಗ್ ಬಾಸ್ ಮನೆಗೆ ಬಂದಾಗ ಮೊದಲೇ ಪರಿಚಯವಿದ್ದವರಂತೆ ನಡೆದುಕೊಂಡಿದ್ದರು. ಆಗಾಗ ರೆಗಿಸುವ ವಿಚಾರದಲ್ಲಿ ಇಬ್ಬರ ನಡುವೆ ಸಣ್ಣ ಪುಟ್ಟ ಜಗಳವಾಗುತ್ತಿತ್ತು. ಆದರೆ ಇದೀಗ ಮರ್ಯಾದೆ ಪ್ರಶ್ನೆಗೆ ಕಣ್ಣೀರು ಬರುವ ರೇಂಜಿಗೆ ಜಗಳ ತಾರಕಕ್ಕೇರಿದೆ.

ಎಲ್ಲರೂ ತಿಂಡಿ ತಿನ್ನುತ್ತಾ ಕುಳಿತಿದ್ದರು. ಕಾವ್ಯಶ್ರೀಗೆ ಅನ್ನ ಬೇಕಾಗಿತ್ತು. ಅನ್ನದ ಪಾತ್ರೆಗೆ ಹತ್ತಿರವೇ ಕುಳಿತಿದ್ದ ಗೊಬ್ಬರಗಾಲನನ್ನು ಅಣ್ಣ ಅನ್ನ ಹಾಕು ಅಂತ ಕೇಳಿದಳು. ಅದಕ್ಕೆ ವಿನೋದ್, ಬಂದು ಹಾಕಿಕೋ ಬಾ ಎಂದಿದ್ದಾನೆ. ಇದಕ್ಕೆ ಬೇಸರ ಮಾಡಿಕೊಂಡ ಕಾವ್ಯಶ್ರೀ, ನಾನೇನು ಅವನ ಮನೆ ಆಳ ಎಂದು ದೀಪಿಕಾ ಬಳಿ ಹೇಳಿಕೊಂಡು ಕಣ್ಣೀರು ಹಾಕಿದ್ದಾಳೆ. ವಿನೋದ್ ಕೂಡ ನೀನೇನು ನಂಗೆ ಮರ್ಯಾದೆ ಕೊಟ್ಟಿಲ್ಲವಲ್ಲ ಎಂದು ಯತಿರುಗೇಟು ಕೊಟ್ಟಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *