ಹಾವೇರಿ: ಲಂಚ..ಲಂಚ..ಲಂಚ.. ಎಲ್ಲಿ ನೋಡಿದ್ರು, ಯಾವ ಕೆಲಸ ಆಗಬೇಕು ಎಂದರೂ ಇದಿಲ್ಲದೆ ಹೋದರೆ ಏನು ನಡೆಯಲ್ಲ. ಲಂಚ ಕೊಟ್ಟು ಕೊಟ್ಟು ಸುಸ್ತಾಗಿ ಹೋಗಿದ್ದಾರೆ ಜನ. ಗ್ರಾಮ ಪಂಚಾಯ್ತಿಯಿಂದ ಹಿಡಿದು ದೊಡ್ಡ ದೊಡ್ಡ ಕಚೇರಿಗಳಲ್ಲೂ ನೇರವಾಗಿಯೇ ಲಂಚಕ್ಕೆ ಬೇಡಿಕೆ ಇಡುತ್ತಾರೆ. ಆದ್ರೆ ಎಲ್ಲರೂ ಈ ರೈತನಂತೆ ಬುದ್ಧಿವಂತರಾಗಿ, ಧೈರ್ಯವಾಗಿ ನಿಂತರೆ ಲಂಚ ಮುಕ್ತ ಮಾಡುವುದು ತೀರಾ ಕಷ್ಟ ಸಾಧ್ಯವಲ್ಲ.
ಈ ಘಟನೆ ನಡೆದಿರುವುದು ಸಿಎಂ ಬೊಮ್ಮಾಯಿ ಅವರ ತವರು ಜಿಲ್ಲೆಯಲ್ಲಿ. ಯಲ್ಲಪ್ಪ ರಾಣೋಜಿ ಎಂಬ ರೈತ ತನ್ನ ಮನೆಯ ಖಾತೆ ಬದಲಾಯಿಸುವುದಕ್ಕೆ ಜಿಲ್ಲೆಯ ಸವಣೂರಿನ ಪುರಸಭೆಗೆ ಬಂದಿದ್ದಾರೆ. ಅಲ್ಲಿ ಮೊದಲಿದ್ದ ಅಧಿಕಾರಿ ಹಣ ಕೇಳಿದ್ದಾರೆ. ಪಾಪ ಈ ರೈತ ಹಾಗೋ ಹೀಗೋ ಒದಗಿಸಿ ಹಣ ಕೊಟ್ಟಿದ್ದಾರೆ. ಹಣ ತಿಂದವ ಕೆಲಸವನ್ನು ಮಾಡಿಕೊಡದೆ, ಅಲ್ಲಿಂದ ವರ್ಗಾವಣೆಯಾಗಿದ್ದಾರೆ.
Even farmers are not spared by cruel 40% @BJP4Karnataka sarkar. Frustrated farmer wanted to give his cattle as bribe to an officer in @BSBommai's home district.
No wonder Basavaraj Bommai is known as #PayCM. He is a CM only for those who pay him.#BrashtaJanagalaPaksha pic.twitter.com/iaoS4ojY0G
— Siddaramaiah (@siddaramaiah) March 10, 2023
ಈಗ ಆ ಜಾಗಕ್ಕೆ ಮತ್ತೊಬ್ಬ ಅಧಿಕಾರಿ ಬಂದಿದ್ದು, ಮತ್ತೆ 25 ಸಾವಿರಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದರಿಂದ ಕಂಗೆಟ್ಟ ಯಲ್ಲಪ್ಪ, ತನ್ನಲ್ಲಿದ್ದ ಎತ್ತುಗಳನ್ನು ಕರೆದುಕೊಂಡು ಬಂದು, ಸಾರ್ ನನ್ನ ಬಳಿ ನೀವೂ ಕೇಳಿದಷ್ಟು ಹಣವಿಲ್ಲ. ನಾನು ಹಣ ನೀಡುವ ತನಕ ಈ ಎತ್ತುಗಳನ್ನು ಇಟ್ಟುಕೊಳ್ಳಿ ಎಂದು ಹೇಳಿದ್ದಾರೆ. ರೈತನ ನಡೆಗೆ ಅಧಿಕಾರಿಗಳು ದಂಗಾಗಿದ್ದಾರೆ.
ಇನ್ನು ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, 40 ಪರ್ಸೆಂಟ್ ಸರ್ಕಾರ ರೈತರನ್ನು ಬಿಟ್ಟಿಲ್ಲ. ಪೇಸಿಎಂ ಬಸವರಾಜ್ ಬೊಮ್ಮಾಯಿ ಯಾರು ಲಂಚ ಕೊಡುತ್ತಾರೋ ಅವರ ಪರ ಕೆಲಸ ಮಾಡುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.