ಹಾಸನ: ಗಣೇಶೋತ್ಸವದ ಸಂದರ್ಭದಲ್ಲಿ ನಡೆದ ಅಪಘಾತದಲ್ಲಿ ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಇಂದು ಜಿಲ್ಕಾ ಉಸ್ತುವಾರಿ ಸಚಿವ ಕೃಷ್ಣ ಭೈರೇಗೌಡ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಜೊತೆಗೆ ಅಪಘಾತದಲ್ಲಿ ಸಾವನ್ನಪ್ಪಿದ್ದ ಮೃತ ಪ್ರಭಾಕರ್ ಎನ್ನುವವರ ಮನೆಗೆ ಭೇಟಿ ನೀಡಿದರು. ಬಳಿಕ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ. ಆದ್ರೆ ಈ ವೇಳೆ ಜನರು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದಾಗ ಆಕ್ರೋಶ. ಐದು ಲಕ್ಷ ಕೊಟ್ಟಿದ್ದೀರಿ. ಅಷ್ಟೇ ಆದ್ರೆ ನೀವೇ ಇಟ್ಟುಕೊಂಡು ಬಿಡಿ.
ದುರಂತ ಸ್ಥಳಕ್ಕೆ ಸಿದ್ದರಾಮಯ್ಯ ಭೇಟಿ ಕೊಡಬೇಕಿತ್ತು. ಆದ್ರೆ ಅವರು ಬಂದಿಲ್ಲ. ಸ್ಟೇಡಿಯಂನಲ್ಲಿ ಸತ್ರೆ ಐವತ್ತು ಲಕ್ಷ ಕೊಡ್ತೀರಿ. ಆದ್ರೆ ಈ ಮಕ್ಕಳು ಏನು ಮಾಡಿದ್ದಾರೆ. ಐವತ್ತು ಲಕ್ಷ ಕೊಡೋದಾದ್ರೆ ಕೊಡಿ. ಬಂದು ನೀವೆ ಪರಿಶೀಲನೆ ಮಾಡಿ. ನಮ್ಮದೇನಾದ್ರೂ ತಪ್ಪಿದ್ರೆ ಹೇಳಿ. ಅಲ್ಲಿ ಸರ್ವೀಸ್ ರಸ್ತೆ ಇಲ್ಲ, ಸರಿಯಾದ ತಡೆಗೋಡೆ ಇಲ್ಲ ಎಂದು ದೂರಿದ್ದಾರೆ.

ಈ ವೇಳೆ ಮಾತನಾಡಿದ ಕೃಷ್ಣ ಭೈರೇಗೌಡ ಅವರು, ಮಾನ್ಯ ಮುಖ್ಯಮಂತ್ರಿಗಳು ರಾತ್ರಿ ಮಾತನಾಡಿದಾಗ, ಕೂಡಲೇ ಅವರ ಕುಟುಂಬದಲ್ಲಿ ಆಗಿರಯವ ನಷ್ಟಕ್ಕೆ ಪರಿಹಾರ ನೀಡಿ ಅಂದ್ರು. ನಷ್ಟವನ್ನ ನಾವೂ ಯಾವುದೇ ಮೊತ್ತಕ್ಕೆ ಹೋಲಿಕೆ ಮಾಡುವುದಕ್ಕೆ ಆಗಲ್ಲ. ಅದಕ್ಕೆ ನಾನು ಆ ಮೊತ್ತದ ಬಗ್ಗೆ ಮಾತನಾಡುವುದಕ್ಕೆ ಹೋಗಲಿಲ್ಲ. ಆ ಮೊತ್ತದಲ್ಲಿ ಪ್ರಾಣವನ್ನ ಅಳೆಯುವುದಕ್ಕೆ ಆಗಲ್ಲ. ಸುಮಾರು ಜನ ಯುವಕರಿದ್ದಾರೆ, ವಿದ್ಯಾರ್ಥಿಗಳಿದ್ದಾರೆ. ಅವರಿಗೆ ಕುಟುಂಬದಲ್ಲಿ ಯಜಮಾನರ ಸ್ಥಾನದಲ್ಲಿದ್ದ ಪ್ರಭಾಕರ್ ಕೂಡ ಸಾವನ್ನಪ್ಪಿದ್ದಾರೆ. ಅವರ ಕುಟುಂಬಕ್ಕೆ ಸಹಾಯವಾಗಲಿ ಅಂತ ಐದು ಲಕ್ಷ ಪರಿಹಾರ ನೀಡಬೇಕೆಂದು ಮುಖ್ಯಮಂತ್ರಿಗಳ ಮೇರೆಗೆ ನಾನು ತಹಶಿಲ್ದಾರರಿಗೆ ಇವತ್ತೆ ತಲುಪಿಸುವಂತೆ ಹೇಲಕಿದ್ದೇನೆ. ಸ್ಥಳೀಯ ಜನ ಒತ್ತಾಯಿಸಿದ್ದಾರೆ ಎಂದು ಕೃಷ್ಣ ಭೈರೇಗೌಡ ತಿಳಿಸಿದ್ದಾರೆ.














