Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಉಸ್ತುವಾರಿಯನ್ನ ಸರಿಯಾಗ ಮಾಡದ ಚೈತ್ರಾಗೆ ಕಿಚ್ಚ ಕ್ಲಾಸ್ : ಮತ್ತೆ ಕಣ್ಣೀರು.. ಅದೇ ಆರೋಪ..!

Facebook
Twitter
Telegram
WhatsApp

ಬಿಗ್ ಬಾಸ್ ಸೀಸನ್ 11ರಲ್ಲಿ ಚೈತ್ರಾ, ಬರೀ ಕಣ್ಣೀರು ಸುರಿಸೋದು, ಜೋರು ಧ್ವನಿಯಲ್ಲಿ ಎಲ್ಲರಿಗೂ ಕಿರಿಕಿರಿ ಮಾಡೋದೆ ಬಂತು. ಹಾಗೇ ಮೂರು ಸಲ ಜೈಲು ವಾಸ ಸೇರಿ ಹೆಚ್ಚು ಸಲ ಜೈಲು ಸೇರಿದವರೆಂಬ ಹಿಸ್ಟರಿಯನ್ನು ಬರೆದಾಯ್ತು. ಇದೀಗ ಕಿಚ್ಚ ಸುದೀಪ್ ಪಂಚಾಯ್ತಿಯಲ್ಲಿ ಚೈತ್ರಾಗೆ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ.

ಚೈತ್ರಾಗೆ ಈ ಬಾರಿಯೂ ಉಸ್ತುವಾರಿಯನ್ನು ನೀಡಲಾಗಿತ್ತು. ಆದರೆ ಉಸ್ತುವಾರಿಯಲ್ಲಿ ಪಕ್ಷಪಾತವನ್ನೇ ಹೆಚ್ಚು ಮಾಡಿದರು. ಇದಕ್ಕೆ ರಜತ್ ಸೇರಿದಂತೆ ಎದುರಾಳಿಗಳು ತಿರುಗಿ ಬಿದ್ದಿದ್ದರು. ಇದೀಗ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ ನಲ್ಲಿ ಇದೇ ವಿಚಾರ ಬಂದಿದೆ. ಕಿಚ್ಚನ ಕ್ಲಾಸ್ ಗೆ ಚೈತ್ರಾ ಕಣ್ಣೀರು ಹಾಕಿದ್ದಾರೆ.

ಇವತ್ತು ಕಿಚ್ಚ ಸುದೀಪ್ ಕೂಡ ನಾಮಿನೇಷನ್ ಮಾಡುವುದಕ್ಕೆ ಒಂದು ಅವಕಾಶ ಕೊಟ್ಟರು. ಈ ವೇಳೆ ಮತ್ತೆ ಚೈತ್ರಾ ಹೆಸರನ್ನೇ ಮನೆ ಮಂದಿ ತೆಗೆದುಕೊಂಡರು. ಆಗ ಚೈತ್ರಾ, ಯಾವಾಗಲೂ ಉಸ್ತುವಾರಿ ಕೊಡ್ತಾರೆ. ಕಳಪೆ ಕೊಡುವಾಗ ಉಸ್ತುವಾರಿ ಸರಿಯಾಗಿ ಮಾಡಲಿಲ್ಲ ಎಂಬ ಕಾರಣವನ್ನ ನೀಡ್ತಾರೆ. ಬರೀ ಕುಗ್ಗಿಸೋ ಕೆಲಸವನ್ನೇ ಮಾಡ್ತಾರೆ ಎಂದು ಕಣ್ಣೀರು ಹಾಕಿದ್ದಾರೆ. ಆಗ ಕೋಪಗೊಂಡ ಕಿಚ್ಚ, ನೀವ್ ಹೇಳ್ತೀರಲ್ಲ ಕುಗ್ಗಿಸಿದ್ರು ಅಂತ. ನೀವೂ ಹೆಸರು ತೆಗದುಕೊಂಡಾಗ ಅವರು ಕುಗ್ಗಲ್ವಾ..? ಬಾಣ ಬಿಡೋಕೆ ರೆಡಿ ಇರುವವರು ಬಾಣ ಬಿಡಿಸಿಕೊಳ್ಳೋಕೂ ರೆಡಿ ಇರಬೇಕು. ತಗೋಳೋಕೆ ರೆಡಿ ಇಲ್ಲ ಅಂದ್ರೆ ಈ ಆಟಕ್ಕೆ ಫಿಟ್ ಇಲ್ಲ ಎಂದು ಚೈತ್ರಾಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಪ್ರತಿ ವಾರ ನಾಮಿನೇಷನ್ ನಿಂದ ಸೇವ್ ಆದಾಗಲೂ ಏನೋ ಒಂದು ಮಾಡ್ತೀನಿ ಅಂತ ಹೇಳಿ ಏನು ಮಾಡದ ಚೈತ್ರಾ ಕಂಡು ನಿಜಕ್ಕೂ ಸುದೀಪ್ ಅವರಿಗೂ ಕೋಪ ತರಿಸಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರಿಗೆ ಧನಪ್ರಾಪ್ತಿ, ವಿದೇಶ ಪ್ರಯಾಣ, ಕೆಲಸದ ಯೋಗ, ಮದುವೆ ಯೋಗ ಕೂಡಿ ಬರಲಿದೆ.

ಈ ರಾಶಿಯವರಿಗೆ ಧನಪ್ರಾಪ್ತಿ, ವಿದೇಶ ಪ್ರಯಾಣ, ಕೆಲಸದ ಯೋಗ, ಮದುವೆ ಯೋಗ ಕೂಡಿ ಬರಲಿದೆ. ಭಾನುವಾರ-ಡಿಸೆಂಬರ್-22,2024 ಸೂರ್ಯೋದಯ: 06:46, ಸೂರ್ಯಾಸ್: 05:43 ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ದಕ್ಷಿಣ ಅಯಣ, ಶುಕ್ಲ

ಪರುಶುರಾಮಪುರ ಬಳಿ ಭೀಕರ ಕೊಲೆ : 48 ಗಂಟೆಯಲ್ಲಿ ಪ್ರಕರಣ ಭೇದಿಸಿದ ಪೊಲೀಸರು

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 21 : ಚಳ್ಳಕೆರೆ ತಾಲೂಕಿನ ಪರುಶುರಾಮಪುರ ಠಾಣಾ ವ್ಯಾಪ್ತಿಯಲ್ಲಿ ಇದೇ ಡಿಸೆಂಬರ್ 19 ರಂದು ನಡೆದಿದ್ದ ಕೊಲೆ ಪ್ರಕರಣ ದಾಖಲಾದ 48 ಗಂಟೆಯಲ್ಲಿಯೇ ಕೊಲೆ ಆರೋಪಗಳನ್ನು ಪತ್ತೆ ಮಾಡಿ ಬಂಧಿಸಿದ

ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ಶತಮಾನೋತ್ಸವ ವ್ಯವಸ್ಥಿತವಾಗಿ ನಡೆಸಲು ಕ್ರಮ: ಸಿದ್ದರಾಮಯ್ಯ

ಬೆಂಗಳೂರು, ಡಿ.21: ಡಿಸೆಂಬರ್ 26 ಮತ್ತು 27ರಂದು ಬೆಳಗಾವಿಯಲ್ಲಿ ನಡೆಯುವ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮವನ್ನು ಅತ್ಯಂತ ವ್ಯವಸ್ಥಿತವಾಗಿ ಆಯೋಜಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದರು. ಶನಿವಾರ ಕೃಷ್ಣಾದಲ್ಲಿ ಶತಮಾನೋತ್ಸವ

error: Content is protected !!