ದೆಹಲಿ.ಆಗಸ್ಟ್.1: ವಿಶ್ವದಲ್ಲೇ ಅತ್ಯಂತ ವೇಗದ ಇಂಟರ್ನೆಟ್ ಸೇವೆ ಒದಗಿಸುವ ಟಾಪ್ 10 ದೇಶಗಳ ನೂತನ ಪಟ್ಟಿ ಬಿಡುಗಡೆಯಾಗಿದೆ. ಈ ಪಟ್ಟಿಯಲ್ಲಿ ಸಿಂಗಾಪುರ ಮೊದಲ ಸ್ಥಾನವನ್ನು ಪಡೆದುಕೊಂಡು ವಿಶ್ವದ ಅತ್ಯಂತ ವೇಗದ ಇಂಟರ್ನೆಟ್ ಹೊಂದಿರುವ ದೇಶವಾಗಿ ಹೊರಹೊಮ್ಮಿದೆ. ತಂತ್ರಜ್ಞಾನದಲ್ಲಿ ಅತ್ಯಂತ ಮುಂಚೂಣಿಯಲ್ಲಿರುವ ಅಮೆರಿಕ (ಯುಎಸ್) ಈ ಪಟ್ಟಿಯಲ್ಲಿ 10ನೇ ಸ್ಥಾನ ಪಡೆದುಕೊಂಡಿದೆ.
ಈ ಪಟ್ಟಿಯಲ್ಲಿರುವ ದೇಶಗಳು, ಅವುಗಳ ಇಂಟರ್ನೆಟ್ ವೇಗ (Mbps) ಮತ್ತು 1 GB ಸಾಮರ್ಥ್ಯದ ವೀಡಿಯೊ ಡೌನ್‌ಲೋಡ್ ಮಾಡಲು ತೆಗೆದುಕೊಳ್ಳುವ ಸಮಯದ ವಿವರ ಇಲ್ಲಿದೆ.
ಸಿಂಗಾಪುರ: 278.4 Mbps
(ಸರಾಸರಿ 1GB ವೀಡಿಯೊ ಡೌನ್‌ಲೋಡ್ ಮಾಡಲು ಕೇವಲ 29 ಸೆಕೆಂಡ್)
ಹಾಂಗ್ ಕಾಂಗ್: 273.0 Mbps
(ಸುಮಾರು 30 ಸೆಕೆಂಡ್)
ಮೊನಾಕೊ: 261.5 Mbps
(31 ಸೆಕೆಂಡ್)
ಸ್ವಿಟ್ಜರ್ಲ್ಯಾಂಡ್: 234.3 Mbps
(34 ಸೆಕೆಂಡ್)
ಡೆನ್ಮಾರ್ಕ್: 229.1 Mbps
(ಸುಮಾರು 35 ಸೆಕೆಂಡ್)
ದಕ್ಷಿಣ ಕೊರಿಯಾ: 224.7 Mbps
(36 ಸೆಕೆಂಡ್)
ರೊಮೇನಿಯಾ: 218.8 Mbps
(ಸುಮಾರು 37 ಸೆಕೆಂಡ್)
ಫ್ರಾನ್ಸ್: 213.6 Mbps
(38 ಸೆಕೆಂಡ್)
ಥೈಲ್ಯಾಂಡ್: 205.9 Mbps
(39 ಸೆಕೆಂಡ್)
ಅಮೆರಿಕ (USA): 201.3 Mbps
(41 ಸೆಕೆಂಡ್)
ಸಿಂಗಾಪುರದಲ್ಲಿ ಡೌನ್‌ಲೋಡಿಂಗ್ ವೇಗ ಅತ್ಯುನ್ನತ ಮಟ್ಟದಲ್ಲಿದ್ದು, ಡಿಜಿಟಲ್ ಮೂಲಸೌಕರ್ಯದಲ್ಲಿ ವಿಶ್ವದಲ್ಲೇ ಮೊದಲ ಸ್ಥಾನ ಕಾಯ್ದುಕೊಂಡಿದೆ.















