in ,

ಲಿಂಗಾಯತ ಪಂಚಮಸಾಲಿ 2 ಎ.ಮೀಸಲಾತಿ : ಜನವರಿ 21 ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಧರಣಿ ಸತ್ಯಾಗ್ರಹ : ಎಸ್.ಎಂ.ಎಲ್.ತಿಪ್ಪೇಸ್ವಾಮಿ

suddione whatsapp group join

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ, (ಜ.17): ಲಿಂಗಾಯತ ಪಂಚಮಸಾಲಿಗಳಿಗೆ 2 ಎ.ಮೀಸಲಾತಿ ನೀಡುವುದಾಗಿ ಬರೀ ಆಶ್ವಾಸನೆಯಲ್ಲಿಯೇ ಕಾಲಕಳೆಯುತ್ತಿರುವ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿರವರ ನಡೆಯನ್ನು ಖಂಡಿಸಿ ಲಿಂಗಾಯತ ಪಂಚಮಸಾಲಿ ಮಹಾಸಭಾ ಕೂಡಲಸಂಗಮ ಪೀಠ ಜಿಲ್ಲಾ ಘಟಕದ ವತಿಯಿಂದ ಜ.21 ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ಗೌರವಾಧ್ಯಕ್ಷ ಎಸ್.ಎಂ.ಎಲ್.ತಿಪ್ಪೇಸ್ವಾಮಿ ತಿಳಿಸಿದರು.

ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಪಂಚಮಸಾಲಿಗಳಿಗೆ 2 ಎ.ಮೀಸಲಾತಿ ನೀಡುವುದಾಗಿ ಆರು ಬಾರಿ ವಚನ ನೀಡಿರುವ ಮುಖ್ಯಮಂತ್ರಿ ಮಾತು ತಪ್ಪಿರುವುದರಿಂದ ರಾಜ್ಯದ ಪ್ರತಿ ಜಿಲ್ಲೆಯಿಂದ ಒಂದೊಂದು ದಿನ ಫ್ರೀಡಂ ಪಾರ್ಕಿನಲ್ಲಿ ಧರಣಿ ನಡೆಸಲಾಗುವುದು. ಅದರಂತೆ ಜ.21 ರಂದು ಜಿಲ್ಲೆಯಿಂದ ಇನ್ನೂರು ಮಂದಿ ಧರಣಿಯಲ್ಲಿ ಭಾಗವಹಿಸಲಿದ್ದೇವೆಂದು ಹೇಳಿದರು.

ಲಿಂಗಾಯತ ಪಂಚಮಸಾಲಿ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಸಿ.ಗಂಗಾಧರಪ್ಪ, ಯುವ ಘಟಕದ ಜಿಲ್ಲಾಧ್ಯಕ್ಷ ಹೆಚ್.ಎಂ.ಮಂಜುನಾಥ್, ನವೀನ್‍ಕುಮಾರ್ ಎಸ್.ಟಿ. ಕಾರ್ತಿಕ್, ಗಿರೀಶ್ ಎಂ.ಎಸ್. ಗ್ರಾಮ ಪಂಚಾಯಿತಿ ಸದಸ್ಯ ತಿಪ್ಪೇಸ್ವಾಮಿ ಎಸ್. ಮನು ತಮಟಕಲ್ಲು, ವಿಜಯ್‍ಕುಮಾರ್ ಎಲ್.ಎಂ. ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.

What do you think?

Written by suddionenews

Leave a Reply

Your email address will not be published.

GIPHY App Key not set. Please check settings

ಚಿತ್ರದುರ್ಗ : ಚಿತ್ರಹಳ್ಳಿ ಗೇಟ್ ಪೊಲೀಸರಿಂದ ಇಬ್ಬರು ಕೊಲೆ ಆರೋಪಿಗಳ ಬಂಧನ

ಮಾರಘಟ್ಟದಲ್ಲಿ ವಿಜೃಂಭಣೆಯಿಂದ ನಡೆದ ದುರ್ಗಾಂಭಿಕ ದೇವಿ ಜಾತ್ರೆ