Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಆರೋಗ್ಯ ರಕ್ಷಣೆಗೆ ಜೀವನ ಶೈಲಿ ಬದಲಾಗಬೇಕು : ಮಾಜಿ ಸಚಿವ ಹೆಚ್. ಆಂಜನೇಯ

---Advertisement---

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 17  : ಬದಲಾದ ಜೀವನ ಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ಮನುಷ್ಯನ ಅರೋಗ್ಯ ದಿನ ದಿನಕ್ಕೂ ಕ್ಷಿಣಿಸುತ್ತಿದೆ. ನಾನಾ ನಮೂನೆಯ ಖಾಯಿಲೆಗಳಿಗೆ ತುತ್ತಾಗುವ ಮುನ್ನ ಎಚ್ಚರ ವಹಿಸುವುದು ಅನಿವಾರ್ಯ ಎಂದು ಮಾಜಿ ಸಚಿವ ಹೆಚ್. ಆಂಜನೇಯ ಅಭಿಪ್ರಾಯ ಪಟ್ಟರು.

 

ಇಲ್ಲಿನ ರೋಟರಿ ಕ್ಲಬ್ ಸಭಾಂಗಣದಲ್ಲಿ ಗೋಡೆಮನೆ ಅರೋಗ್ಯ ಮತ್ತು ರಸ್ತೆ ಜಾಗೃತಿ ಟ್ರಸ್ಟ್, ರೋಟರಿ ಕ್ಲಬ್ ಚಿನ್ಮೂಲಾದ್ರಿ, ರೆಡ್ ಕ್ರಾಸ್ ಸಂಸ್ಥೆ ಹಾಗೂ ಬೆಂಗಳೂರು ಸಪ್ತಗಿರಿ ಆಸ್ಪತ್ರೆ ಸಹಯೋದಲ್ಲಿ ಗೋಡೆಮನೆ ವಿನಯ್ ಹುಟ್ಟುಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ ಬೃಹತ್ ಅರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

 

ಮನುಷ್ಯ ಒತ್ತಡದ ಬದುಕಿನಲ್ಲಿ ನೆಮ್ಮದಿ ಕಳೆದುಕೊಳ್ಳುತ್ತಿದ್ದಾನೆ. ಹಿಂದಿನ ಕಾಲದಲ್ಲಿ ನಮ್ಮ ಪೂರ್ವಿಕರು ತುಂಬಾ ಗಟ್ಟಿಮುಟ್ಟಿಯಾಗಿ ಇರುತ್ತಿದ್ದರು. ಅವರ ಕಾಲದಲ್ಲಿ ಈಗಿನಷ್ಟು ಭಯಂಕರ ರೋಗ ಖಾಯಿಲೆಗಳು ಬರುತ್ತಿರಲಿಲ್ಲ. ಅವರು ಅನುಸರಿಸುತ್ತಿದ್ದ ಜೀವನ ಶೈಲಿಯೇ ಅವರ ಅರೋಗ್ಯದ ಗುಟ್ಟು ಎಂದು ಹೇಳಿದರು.

ಇಗೀಗ ಎಲ್ಲವೂ ಕಲುಷಿತವಾಗುತ್ತಿದೆ,ನಾವು ತಿನ್ನುವ ಅನ್ನ, ನೀರು, ಸೇವಿಸುವ ಗಾಳಿಯೂ ಸಹ ಶುದ್ಧವಿಲ್ಲ. ಎಲ್ಲವೂ ಕಲಬೆರೆಕೆಯಿಂದ ಕೊಡಿದೆ. ಈ ಕಾರಣಕ್ಕಾಗಿಯೇ ಇಂದು ಅರೋಗ್ಯ ಹಾಳಾಗುತ್ತಿದೆ ಎಂದು ವಿಷಾಧ ವ್ಯಕ್ತಪಡಿಸಿದರು.

 

ಹಿಂದಿನ ಕಾಲದ ನೈಸರ್ಗಿಕ ಕೃಷಿ ಪದ್ಧತಿ ಮಾಯವಾಗಿ ವಿಷಕಾರಿಕ ಪದ್ಧತಿ ಅನುಸರಿಸುವಂತಾಗಿದೆ. ಈಗಿನ ರೈತರು ಬೆಳೆಯುವ ಬೆಳೆಗಳಿಗೆ ರಾಸಾಯನಿಕ ಗೊಬ್ಬರ ಹಾಕಲಾಗುತ್ತಿದೆ. ಕೃಷಿ ಸಹ ಕಲಬೆರಕೆ ಆಗಿದೆ, ನಿತ್ಯ ಸೇವಿಸುವ ಆಹಾರ, ಅನ್ನ, ನೀರು ಸಹ ವಿಷ ಪೂರಿತ ಆಗುತ್ತಿರವ ಹಿನ್ನಲೆಯಲ್ಲಿ ಮನುಷ್ಯ ಅರೋಗ್ಯವಾಗಿರಲು ಪ್ರಯತ್ನ ಮಾಡಬೇಕು ಎಂದು ಹೇಳಿದರು.

ಪ್ರಕೃತಿಯ ಮೇಲೆ ಮನುಷ್ಯನ ದಾಳಿ ನಿಲ್ಲಬೇಕು, ಭೂಮಿ ಬೆಳೆಯುವುದಿಲ್ಲ. ಇರುವ ಭೂಮಿಯನ್ನು ಹಸಿರಾಗಿಸಿ ಉಳಿಸಿಕೊಳ್ಳಲು ಸಾಧ್ಯವಾಗದಿದ್ದರೆ ಭವಿಷ್ಯದ ದಿನದಲ್ಲಿ ದೊಡ್ಡ ಪ್ರಮಾಣದಲ್ಲಿ ಅಪಾಯವನ್ನು ಎದುರಿಸಬೇಕಾಗುತ್ತದೆ ಎಂದು ಹೆಚ್. ಆಂಜನೇಯ ಎಚ್ಚರಿಸಿದರು.

ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹಾಗೂ ಬಿಜೆಪಿ ಯುವ ಮುಖಂಡ ಎಂ. ಸಿ. ರಘುಚಂದನ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಸೇವಾ ಭಾವನೆಯಿಂದ ಮಾಡುವ ಯಾವುದೇ ಕೆಲಸಗಳಿಗೆ ಉತ್ತೇಜನ ಸಿಗುತ್ತಿಲ್ಲ. ಇಂತಹ ಸನ್ನಿವೇಶದಲ್ಲಿ ಗೋಡೆಮನೆ ಟ್ರಸ್ಟ್ ಕೈಗೊಂಡಿರುವ ಜನೋಪಯೋಗಿ ಕೆಲಸ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ನುಡಿದರು.

ಇತ್ತೀಚಿನ ದಿನಗಳಲ್ಲಿ ರಾಜಕಾರಣದಲ್ಲಿ ಯುವಕರ ಪ್ರವೇಶ ಕಡಿಮೆಯಾಗುತ್ತಿದೆ. ರಾಜಕಾರಣಿಗಳ ಮಕ್ಕಳೇ ಈ ಈ ರಂಗದಲ್ಲಿ ಬರಬೇಕು ಎನ್ನುವ ಯಾವ ಕರಾರು ಇಲ್ಲ, ಕಾನೂನು ಸಹ ಇಲ್ಲ. ಆದರೆ ಯುವಕರು ಸ್ವಂತ ಶಕ್ತಿಯ ಮೇಲೆ ರಾಜಕಾರಣ ಪ್ರವೇಶ ಮಾಡಬೇಕು. ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು
ಬೋವಿ ಸಮಾಜದಲ್ಲಿ ರಾಜಕೀಯ ನಾಯಕರ ಕೊರತೆ ಇದೆ. ಹೆಚ್ಚು ಜನಸಂಖ್ಯೆ ಇದ್ದರೂ ಪ್ರತಿನಿದ್ಯ ಇಲ್ಲ. ಹೀಗಾಗಿ ರಾಜಕೀಯ ರಂಗಕ್ಕೆ ನಮ್ಮ ಸಮಾಜದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು. ನಾಯಕತ್ವ ಗುಣಗಳನ್ನು ಬೆಳೆಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಪ್ರತಿಪಾಧಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ. ಕೆ. ತಾಜ್ ಪೀರ್ ಮಾತನಾಡಿ,ಯುವಕರು ಮತ್ತು ಕೂಲಿ ಕಾರ್ಮಿಕರು ದುಶ್ಚಟಗಳಿಗೆ ಹೆಚ್ಚು ಬಲಿಯಾಗುತ್ತಿದ್ದಾರೆ. ಗುಟ್ಕಾ. ಕುಡಿತ ಸೇರಿದಂತೆ ಇನ್ನಿತರೆ ಕೆಟ್ಟ ಹವ್ಯಾಸ ಬೆಳೆಸಿಕೊಂಡು ತಮ್ಮ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಗೋಡೆಮನೆ ಟ್ರಸ್ಟ್ ಅವರು ಮುಂದಿನ ದಿನಗಳಲ್ಲಿ ಇಂತಹ ಜೀವಪರವಾದ, ಬಡವರ ಪರವಾದ ಕಾರ್ಯಕ್ರಮಗಳನ್ನು ಹಳ್ಳಿಗಳಲ್ಲಿ ಮತ್ತು ಶ್ರಮಜೀವಿಗಳು ಹೆಚ್ಚಿನ ಪ್ರಮಾಣದಲ್ಲಿ ವಾಸಿಸುವ ಕಡೆ ಆಯೋಜನೆ ಮಾಡಿದರೆ ಒಳಿತು ಎಂದರು
ಕನ್ನಡ ಪರ ಹೋರಾಟಗಾರ ಕೆ ಟಿ ಶಿವಕುಮಾರ್ ಇದೇ ವೇಳೆ ಮಾತನಾಡಿ ಗೋಡೆಮನೆ ವಿನಯ್ ಅವರ ಸಾಮಾಜಿಕ ಸೇವಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವಿ. ಹನುಮಂತಪ್ಪ ಗೋಡೆಮನೆ, ರೆಡ್ ಕ್ರಾಸ್ ಸಂಸ್ಥೆಯ ಗಾಯತ್ರಿ ಶಿವರಾಮ್ , ನಗರ ಸಭೆ ಮಾಜಿ ಅಧ್ಯಕ್ಷರಾದ ಸಿ. ಟಿ. ಕೃಷ್ಣ ಮೂರ್ತಿ, ಡಿ. ಎನ್. ಮೈಲಾರಪ್ಪ, ವಿನಯ್ ಗೋಡೆಮನೆ, ನವೀನ್ ಮಾಸ್ಕಲ್, ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...