ಬೆಂಗಳೂರು: ಆಂಧ್ರಪ್ರದೇಶದ ಸಚಿವ ನಾರಾ ಲೋಕೇಶ್ ಅವರು ಉದ್ಯಮಿಗಳಿಗೆ ನಮ್ಮ ರಾಜ್ಯಕ್ಕೆ ಬನ್ನಿ ಎಂದು ಆಹ್ವಾನ ನೀಡಿದ್ದಾರೆ. ದೇವನಹಳ್ಳಿ ಬಳಿಯ ಭೂಸ್ವಾಧೀನವನ್ನು ರೈತರು ಒಪ್ಪದ ಕಾರಣ ರೈತರಿಗೆ ಬೆಲೆ ಕೊಟ್ಟು ಸರ್ಕಾರ ಕೈಬಿಟ್ಟಿದೆ. ಇದರ ಬೆನ್ನಲ್ಲೇ ಆಂಧ್ರ ಸಚಿವ ಕರ್ನಾಟಕವನ್ನ ಕೆಣಕಿದೆ.
ಉದ್ಯಮಿಗಳ ನಂಬಿಕೆಯ ನಾಡು ಕರುನಾಡು. ಭಾರತದ ಏರೋಸ್ಪೇಸ್ ವಲಯಕ್ಕೆ ಕರ್ನಾಟಕವು 65% ಕೊಡುಗೆ ನೀಡುತ್ತಿದೆ. ರಾಷ್ಟ್ರೀಯವಾಗಿ ನಮ್ಮ ರಾಜ್ಯವು ನಂಬರ್ ಒನ್ ಸ್ಥಾನದಲ್ಲಿದ್ದು, ಜಾಗತಿಕವಾಗಿ 3ನೇ ಸ್ಥಾನದಲ್ಲಿದ್ದೇವೆ. ಏರೋ ಸ್ಪೇಸ್ ಮಾತ್ರವಲ್ಲದೆ ರಾಜ್ಯದಲ್ಲಿ ಯಾವುದೇ ರೀತಿಯ ಉದ್ಯಮ ಸ್ಥಾಪನೆಗೆ ಭೂಮಿ, ನೀರು ಹಾಗೂ ಅಗತ್ಯದ ಎಲ್ಲ ನೆರವು ನೀಡುತ್ತೇವೆ. ಹೀಗಾಗಿ ಉದ್ಯಮಿಗಳ ನಂಬಿಕೆಯ ನಾಡು ಕರ್ನಾಟಕ. ಜಾಗತಿಕವಾಗಿ ಹಾಗೂ ಸ್ಥಳೀಯವಾಗಿ ಇನ್ನಷ್ಟು ಕಂಪೆನಿಗಳು ಇಲ್ಲಿಗೆ ಬರಲಿವೆ. ಮತ್ತಷ್ಟು ಕಂಪೆನಿಗಳು ತಮ್ಮ ಹೂಡಿಕೆ ವಿಸ್ತರಣೆ ಮಾಡಲು ಸಿದ್ದವೂ ಆಗಿವೆ ಎಂದು ಟ್ವೀಟ್ ಮಾಡಿದ್ದಾರೆ.
ನಾರಾ ಲೋಕೇಶ್ ಹೇಳಿದ್ದೇನು ಅಂದ್ರೆ, ಆತ್ಮೀಯ ಏರೋಸ್ಪೇಸ್ ಉದ್ಯಮಿಗಳೇ ಇದರ ಬಗ್ಗೆ ಕೇಳಿ ಬೇಸರವಾಯ್ತು. ನಿಮಗಾಗಿ ನನ್ನ ಬಳಿ ಇದಕ್ಕಿಂತ ಉತ್ತಮವಾದ ಐಡಿಯಾ ಇದೆ. ನೀವೂ ಆಂಧ್ರಪ್ರದೇಶವನ್ನು ಏಕೆ ನೋಡಬಾರದು..? ಅತ್ಯುತ್ತಮ ಪ್ರೋತ್ಸಾಹ ಧನ ಹಾಗೂ 8 ಸಾವಿರ ಎಕರೆಗೂ ಹೆಚ್ಚು ಬಳಸಲು ಸಿದ್ಧವಾದ ಭೂಮಿ ಹೊಂದಿರುವ ಆಕರ್ಷಕ ಏರೋಸ್ಪೇಸ್ ನೀತಿಯನ್ನು ನಾವೂ ನಿಮಗಾಗಿ ಹೊಂದಿದ್ದೇವೆ. ಶೀಘ್ರದಲ್ಲೇ ನಿಮ್ಮನ್ನು ಭೇಟಿಯಾಗಲು ಆಶಿಸುತ್ತೇವೆ ಎಂದು ನಾರಾ ಲೋಕೇಶ್ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಗೆ ಈಗ ಕರ್ನಾಟಕದಲ್ಲಿ ಭಾರೀ ಆಕ್ರೋಶ ವ್ಯಕ್ಯವಾಗಿದೆ.
