ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಕಾರು ಚಾಲಕನಾಗಿದ್ದ ಬಸಂತ್ ಕಂಡೋಲ್ಕರ್ ಗೆ ಚಾಕು ಇರಿಯಲಾಗಿದೆ. ಅದು ಬೆಳಗಾವಿ ನಗರದ ಒಳಗೆ ಈ ಘಟನೆ ನಡೆದಿದೆ. ಕ್ಲಬ್ ರಸ್ತೆಯಲ್ಲಿ ಚಾಕು ಇರಿದು ಎಸ್ಕೇಪ್ ಆಗಿದ್ದಾರೆ. ಬೈಕ್ ನಲ್ಲಿ ಬಂದಂತ ಇಬ್ಬರು ದುಷ್ಕರ್ಮಿಗಳು ಚಾಕು ಇರಿದಿದ್ದಾರೆ.
ನಗರದ ಕ್ಲಬ್ ರಸ್ತೆಯಲ್ಲಿ ಕಾರು ನಿಲ್ಲಿಸಿ ಕೆಳಗೆ ನಿಂತಿದ್ದ. ಅಲ್ಲಿಗೆ ಬಂದ ಬೈಕ್ ಸವಾರರು ಬಸವಂತ್ ಮೇಲೆ ದಾಳಿಯಾಗಿದೆ. ಬಸಂತ್ ಗೆ ಈಗಿನ್ನು 32 ವರ್ಷವಾಗಿತ್ತು. ಬೈಕ್ ಮೇಲೆ ಬಂದ ಇಬ್ಬರು ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಎದೆ, ಭುಜ, ತೊಡೆ ಸೇರಿ ನಾಲ್ಕು ಕಡೆ ಚಾಕುವಿನಿಂದ ಇರಿದು ಹತ್ಯೆ ಯತ್ನ ಮಾಡಿದ್ದಾರೆ. ಗಾಯಗೊಂಡ ಬಸವಂತಗೆ ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ.

ಖಾಸಗಿ ಆಸ್ಪತ್ರೆಗೆ ಡಿಸಿಪಿ, ಎಸಿಪಿ ಹಾಗೂ ಮೃಣಾಲ್ ಹೆಬ್ಬಾಳ್ಕರದ ಆಗಮಿಸಿದ್ದಾರೆ. ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹತ್ಯೆ ಯತ್ನದ ಘಟನೆ ನಡೆದಿದೆ. ಚಾಕು ಇರಿದ ಬಗ್ಗೆ ಸರಿಯಾದ ಕಾರಣ ಇನ್ನು ತಿಳಿದು ಬಂದಿಲ್ಲ. ಕಾರು ಚಾಲಕನಿಗೆ ಚಾಕು ಇರಿದಿದ್ದು ಯಾಕೆ ಎಂಬ ಬಗ್ಗೆ ತನಿಖೆ ನಡೆಸಲು ಆರೋಪಿಗಳ ಹುಡುಕಾಟ ನಡೆಸಿದ್ದಾರೆ. ಸದ್ಯ ಬಸವಂತ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಆದಷ್ಟು ಬೇಗ ಗುಣಮುಖರಾಗುವ ಭರವಸೆಯನ್ನ ನೀಡಿದ್ದಾರೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಸದ್ಯದಲ್ಲಿಯೇ ಘಟನೆಗೆ ನಿಜವಾದ ಕಾರಣ ಏನು ಎಂಬುದನ್ನ ಪತ್ತೆ ಹಚ್ಚಲಿದ್ದಾರೆ. ಬಳಿಕ ಆರೋಪಿಗಳಿಗೂ ಸರಿಯಾದ ಶಿಕ್ಷೆಯಾಗಲಿದೆ.















