Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಜಿಟಿ ದೇವೇಗೌಡ ಅವರನ್ನ ಹೆಸರನ್ನ ಎತ್ತಬೇಡಿ ಎಂದ ಕುಮಾರಸ್ವಾಮಿ : ಜೆಡಿಎಸ್‌ನಿಂದ ದೂರ ದೂರವಾ..?

---Advertisement---

ಮೈಸೂರು: ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಪಕ್ಷದಿಂದ ಅಂತರವನ್ನ ಕಾಯ್ದುಕೊಂಡಿದ್ದಾರೆ. ಆಗಾಗ ಸಿದ್ದರಾಮಯ್ಯ ಅವರನ್ನ ಹೊಗಳುತ್ತಾ ಇರುತ್ತಾರೆ. ಅದರಲ್ಲೂ ಮೂಡ ಹಗರಣದ ಸಂದರ್ಭದಲ್ಲಿ ಸಿದ್ದರಾಮಯ್ಯ ಮಾತ್ರವಲ್ಲ ತನಿಖೆಯಾದರೆ ಎಲ್ಲರೂ ಸಿಕ್ಕಿ ಬೀಳ್ತಾರೆ ಎಂಬ ಮಾತನ್ನ ಹೇಳಿದ್ದರು. ಇದೀಗ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಈ ಬಗ್ಗೆ ಮಾತನ್ನಾಡಿದ್ದಾರೆ. ಅವರ ಹೆಸರನ್ನ ಎತ್ತಬೇಡಿ ಎಂದಿದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು ನಮ್ಮೊಂದಿಗೆ ಇದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಣಕ್ಕಿಳಿಯುವ ಹಲವಾರು ನಾಯಕರು ಇದ್ದಾರೆ. ದೊಡ್ಡ ಮಟ್ಟದಲ್ಲಿ ತಯಾರಿ ಮಾಡಿಕೊಂಡಿರುವವರು ಇದ್ದಾರೆ. ದೊಡ್ಡ ಮಟ್ಟದ ಅಭ್ಯರ್ಥಿಯನ್ನೆ ಮುಂದಿನ ಚುನಾವಣೆಗೆ ಕಣಕ್ಕಿಳಿಸುತ್ತೇನೆ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ. ಜೊತೆಗೆ ಜಿ.ಟಿ.ದೇವೇಗೌಡ ಹೆಸರು ಅನ್ನು ಕೂಡ ನಮ್ಮ ಎದುರು ಪ್ರಸ್ತಾಪ ಮಾಡಬೇಡಿ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಜೆಡಿಎಸ್ ನಿಂದ ಜಿಟಿಡಿ ಅವರು ಮಾತ್ರ ಅಂತರವನ್ನು ಕಾಯ್ದುಕೊಂಡಿದ್ದಾರೆ. ಆದರೆ ಅವರ ಪುತ್ರ ಜಿ.ಡಿ.ಹರೀಶ್ ಗೌಡ ಅವರು ಜೆಡಿಎಸ್ ಜೊತೆಗೇನೆ ಇದ್ದಾರೆ. ಇತ್ತೀಚೆಗೆ ಮಗನ ಹುಟ್ಟುಹಬ್ಬ ಅಂದ್ರೆ ಹರೀಶ್ ಗೌಡ ಅವರ ಮಗನ ಹುಟ್ಟುಹಬ್ಬದಂದು ಹಾಕಿದ್ದ ಬ್ಯಾನರ್ ನಲ್ಲಿಯೂ ಜಿಟಿಡಿ ಅವರ ಫೋಟೋ ಇರಲಿಲ್ಲ. ಜೆಡಿಎಸ್ ನಾಯಕರ ಫೋಟೋ ಮಾತ್ರ ಇತ್ತು. ಇದರಿಂದಾನೂ ಜಿಟಿಡಿ ಅವರನ್ನು ಜೆಡಿಎಸ್ ಕೂಡ ಅವೈಡ್ ಮಾಡುತ್ತಿದೆ ಎಂಬುದು ಇದರಿಂದಾನೇ ಅರ್ಥವಾಗುತ್ತಿದೆ. ಹಲವು ಬೆಳವಣಿಗೆಗಳನ್ನು ನೋಡಿದಾಗ ಅಂತರ ಹೆಚ್ಚಾದದ್ದು ಅರ್ಥವಾಗಿದೆ. ಸದ್ಯ ಜಿಟಿಡಿ ಅವರು ಕಾಂಗ್ರೆಸ್ ಜೊತೆಗೆ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಮುಂದೊಂದು ದಿನ ಕಾಂಗ್ರೆಸ್ ಪಕ್ಷಕ್ಕೆ ಬರ್ತಾರಾ ಹೇಗೆ ನೋಡಬೇಕಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now