ವಿಕ್ರಂ ಸಿಂಹ ತಗಲಾಕಿಕೊಂಡಿದ್ದೇಗೆ..? ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ಆಕ್ರೋಶ

suddionenews
1 Min Read

ಬೆಂಗಳೂರು: ಮಂಡ್ಯದಲ್ಲಿ ಒಬ್ಬ ವಿಧಾನ ಪರಿಷತ್ ನ ಸದಸ್ಯರ ಸಮ್ಮುಖದಲ್ಲಿ ಸರ್ಕಾರಿ ಭೂಮಿಯ ಮರ ಕಡಿದಿದ್ದಾರೆ. ಏನು ಕ್ರಮ ತೆಗೆದುಕೊಂಡ್ರಿ ಸಿದ್ದರಾಮಣ್ಣ ಅವರೆ. ನಾವೂ ಮಾಡುವುದೇ ಸರಿ ಪರಮೇಶಣ್ಣನವರೆ. ನಮ್ಮ ಅಧಿಕಾರಿಗಳು ಸಮರ್ಥರಿದ್ದಾರೆ. ಯಾವ ರೀತಿ ಸಮರ್ಥರು ನಿಮ್ಮ ಅಧಿಕಾರಿಗಳು. ಈ ಕೆಲಸ ಮಾಡುವುದಕ್ಕಾ..? ಈ ಸರ್ಕಾರದ ನಡವಳಿಕೆ ಯಾವ ಮಟ್ಟದಲ್ಲಿ ಇದೆ ಎಂಬುದಕ್ಕೆ ಇದು ಗಂಭೀರವಾದ ಉದಾಹರಣೆ. ಅಲ್ಪ ಸಂಖ್ಯಾತರಿಗೆ ತಗೋ ಏನು ಬೇಕು ಅಂತ ಎಲ್ಲಾ ಕೊಡುತ್ತೀರಿ. ಆದರೆ ಈ ಅಧಿಕಾರಿ ಸಸ್ಪೆಂಡ್ ಮಾಡಿದ್ದೀರಲ್ಲ, ಪರಮೇಶ್ವರ್ ಅವರೇ ದಲಿತ ಪ್ರಾಮಾಣಿಕ ಅಧಿಕಾರಿ. ಆ ಅಧಿಕಾರಿ ಪೋಸ್ಟಿಂಗ್ ಯಾಕೆ ಕೊಟ್ರಿ ಎಂದು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ.

 

ಗೆಂಡೆಕಟ್ಟೆ ಫಾರೆಸ್ಟ್ ಇದ್ಯಲ್ಲ ಅಲ್ಲಿ ಬೀಟೆ ಮರ ಇದೆ, ಅದನ್ನ ಡಿಎಫ್ಒಗೆ ಹೇಳಿ ಕಟ್ ಮಾಡಿ, ಈ ಜಾಗದಲ್ಲಿ ಹಾಜಿ ಅಂತ ಹೇಳಿದರು. ಯಾವ ಸಂದರ್ಭದಲ್ಲಿ ಕರೆ ಮಾಡಿದರು, ಏನೇನು ಆಯ್ತು ಎಂಬುದನ್ನು ಕಾಲ್ ಲೀಸ್ಟ್ ತೆಗೆದರೇನೆ ಗೊತ್ತಾಗಿ ಬಿಡುತ್ತೆ. ಇವರ ವಿರುದ್ಧ ಮಾತನಾಡುವಂತವರ ಬಾಯಿ ಮುಚ್ಚಿಸಬೇಕು. ಹೆದರಿಸಲು ಆಡಳಿತ ಯಂತ್ರವನ್ನು ಯಾವ ರೀತಿ ದುರುಪಯೋಗ ಪಡಿಸಿಕೊಳ್ಳುತ್ತದೆ ಎಂಬುದು ಉದಾಹರಣೆ. ಈಗ ಕರಸೇವಕರ ಕೇಸ್ ನಡೆಯುತ್ತಿದೆಯಲ್ಲ ಅದಕ್ಕೆ ಹೇಳಿದೆ.

 

ವಿಕ್ರಂ ಸಿಂಹ ಅರಣ್ಯ ಅಧಿಕಾರಿಗಳನ್ನ ಭೇಟಿ ಮಾಡಿ ಎಲ್ಲಾ ವಿಚಾರವನ್ನು ತಿಳಿಸಿದರು. ಇದಕ್ಕೂ ನನಗೂ ಸಂಬಂಧವಿಲ್ಲ ಅಂತ ಎಲ್ಲಾ ಮಾಹಿತಿ ಕೊಟ್ಟು ಹೋದರು. ಮಾಹಿತಿ ಕೊಟ್ಟು ಹೋದ ನಂತರವೂ ಅವರನ್ನು ಬಂಧಿಸುತ್ತಾರೆ. ಎ1, ಎ2ಗೆ ಬೇಲ್ ಕಿಟ್ಟರು ಇವರನ್ನ ಯಾಕೆ ಅಲ್ಲಿಯೇ ಇರಿಸಿಕೊಂಡರು. ಮ್ಯಾಜಿಸ್ಟ್ರೇಟ್ ಕೂಡ ಇವರಿಗೆ ಉಗೀತು ಎಂದು ಆಕ್ರೋಶ ಹೊರ ಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *