ಬೆಂಗಳೂರು: ಒಂದೇ ಕೊಠಡಿ ಒಂದೇ ಸೆಂಟರ್ ನಲ್ಲಿ ಇದ್ದವರನ್ನ ಆಯ್ಕೆ ಮಾಡಿದ್ದ ಕಾರಣದಿಂದ ಕೆಪಿಎಸ್ಸಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎನ್ನಲಾಗ್ತಾ ಇದೆ. ಈ ಸಂಬಂಧ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಈ ರೀತಿಯ ಆರೋಪಗಳು ಬಂದಾಗ ಈ ಬಗ್ಗೆ ಮಾತನ್ನಾಡುವುದಕ್ಕೆ ಯಾರೂ ಜವಬ್ದಾರರು ಅವರು ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಅಧ್ಯಕ್ಷರು ಉತ್ತರವನ್ನ ಕೊಡಬೇಕಾಗುತ್ತದೆ. ಮಾಡ್ತಾರೆ ಎಂಬ ವಿಶ್ವಾಸವೂ ಇದೆ ಎಂದಿದ್ದಾರೆ.
ನೀವ್ ನೋಡುವಂತಹ ಹ್ಯಾಂಗಲ್ ನಲ್ಲಿ ಆ ಸಿರೀಸ್ ಕಂಟಿನ್ಯೂಸ್ ಇದ್ರೆ ಅವರಿಗೇನೋ ಆಗಿರಬಹುದು ಅಂತ ಹೇಳಿ, ಪಾರ್ಶಿಯಾಲಿಟಿ ಮಾಡಿರಬಹುದು, ಆನ್ಸರ್ ಶೀಟ್ ಗಳನ್ನು ಮ್ಯಾನಿಪಿಲೇಟ್ ಮಾಡಿರಬಹುದು. ಯಾವುದೇ ಆರೋಪಗಳು ಬಂದಾಗ ಪ್ರೂವ್ ಮಾಡಬೇಕು, ಅದನ್ನೇ ನಿಜ ಅಂತ ನಂಬೋದಕ್ಕೆ ಆಗಲ್ಲ. ಹೀಗಾಗಿ ಈ ರೀತಿಯ ಆರೋಪಗಳು ಬಂದಾಗ ಕೆಪಿಎಸ್ಸಿ ಅಧ್ಯಕ್ಷರು ಉತ್ತರ ಕೊಡಬೇಕು. ನಮ್ಮ ಸರ್ಕಾರದಲ್ಲಿ ಈ ರೀತಿಯ ಅನ್ಯಾಯ ಆಯ್ತು ಎಂದಾಗ ನಮ್ಮ ಮುಖ್ಯಮಂತ್ರಿಗಳು ಗಮನ ಕೊಡ್ತಾರೆ.
ನಮ್ಮ ಇಲಾಖೆಗಳಲ್ಲಿ ಬಹಳ ಟ್ರಾನ್ಸಪರೆಂಟ್ ನಲ್ಲಿ ಮಾಡ್ತೀವಿ. ವಿರೋಧ ಪಕ್ಷದವರು ಕೇಳಿದಾಗ ಇದಕ್ಕೆ ಉತ್ತರ ಕೊಡಬೇಕಾಗುತ್ತದೆ. ಈ ಬಗ್ಗೆ ನಂಗೆ ಡಿಟೈಲ್ ಗೊತ್ತಿಲ್ಲ. ಇತಿಹಾಸಗಳು ಒಂದು ಕಡೆ ಇರಲಿ. ಯಾರೂ ಕಷ್ಟಪಟ್ಟು ಓದಿರುತ್ತಾರೆ ಅವರಿಗೂ ಉತ್ತರ ಕೊಡುವುದು ನಮ್ಮ ಕರ್ತವ್ಯವಾಗಿರುತ್ತದೆ ಎಂದಿದ್ದಾರೆ.
ಇದರ ಬಗ್ಗೆ ಮಾತನ್ನಾಡೋದಕ್ಕೆ ಸ್ವಲ್ಪ ಮುಜುಗರ ಆಗುತ್ತೆ. ಹಾಲು ಜೇನು ಅಂತ ಇದ್ದೀವಿ ಅಂತ ಹೇಳಿದ್ದಾರೆ. ಯಾವಾಗ ನಾವೂ ಕಚ್ಚಾಡ್ತಾ ಇದ್ದೀವಿ ಅಂತ ಯಾರಾದ್ರೂ ಹೇಳಿದ್ದಾರಾ. ಡಿನ್ನರ್ ಮೀಟಿಂಗ್ ಎಲ್ಲರೂ ಫ್ರೆಂಡ್ಸ್ ಹೀಗಾಗಿ ಒಂದು ಕಡೆ ಸೇರಿ ಊಟ ಮಾಡಿದ್ದೀವಿ. ವೈಯಕ್ತಿಕವಾಗಿ ಸ್ಟೇಟ್ಮೆಂಟ್ ಕೊಡೋದು ತಪ್ಪು ಎಂದಿದ್ದಾರೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!
ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.












