Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ आध्यात्मिक अन्य

---Advertisement---

ಸಿದ್ದರಾಮಯ್ಯ ಬಗ್ಗೆ ಕೋಡಿಶ್ರೀಗಳಿಂದ ಭವಿಷ್ಯ

---Advertisement---

ಧಾರವಾಡ: ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಬದಲಾವಣೆಯ ವಿಚಾರ ಇನ್ನು ತಣ್ಣಗಾಗಿಲ್ಲ. ಬೂದಿ ಮುಚ್ಚಿದ ಕೆಂಡದಂತೆ ಆಗಾಗ ಹೊಗೆಯಾಡುತ್ತಲೇ ಇರುತ್ತದೆ. ಈಗ ಮತ್ತೆ ಸಿಎಂ ಬದಲಾವಣೆಯ ಚರ್ಚೆ ನಡೆಯುತ್ತಿದ್ದು, ಹಲವರು ನವೆಂಬರ್ ನಲ್ಲಿ ಖಂಡಿತ ಬದಲಾಗಲಿದೆ ಮುಖ್ಯಮಂತ್ರಿ ಖುರ್ಚಿ ಎಂದಿದ್ದಾರೆ. ಇದರ ನಡುವೆ ಕೋಡಿಶ್ರೀಗಳು ಈ ವಿಚಾರಕ್ಕೆ ಭವಿಷ್ಯ ನುಡಿದಾಗ ಎಲ್ಲರ ಚಿತ್ತ ಒಂದು ಕ್ಷಣ ಆ ಕಡೆ ನೆಟ್ಟಿರುತ್ತದೆ. ಹಾಗಾದ್ರೆ ಕೋಡಿಶ್ರೀಗಳು ಸಿಎಂ ಸಿದ್ದರಾಮಯ್ಯ ವಿಚಾರದಲ್ಲಿ ನುಡಿದ ಭವಿಷ್ಯವೇನು ಎಂಬುದು ಇಲ್ಲಿದೆ ನೋಡಿ.

ಇಂದು ಧಾರವಾಡದಲ್ಲಿ ದಸರಾ ಸಂಭ್ರಮದಲ್ಲಿ ಕೋಡಿಶ್ರೀಗಳು ಭಾಗಿಯಾಗಿದ್ದರು. ದಸರಾ ಹಬ್ಬದ ಪ್ರಯುಕ್ತ ಜಂಬೂ ಸವಾರಿಗೆ ಚಾಲನೆ ನೀಡಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸ್ವಾಮೀಜಿಗಳು ಸಿದ್ದರಾಮಯ್ಯ ಸರ್ಕಾರದ ಬಗ್ಗೆಯೂ ಮಾತನಾಡಿದರು. ದಸರಾದ ನಿಜವಾ್ ಅರ್ಥ ಎಂದ್ಎ ದುಷ್ಟ ಶಕ್ತಿಗಳನ್ನು ದೂರ ಮಾಡುವುದು. ಮನುಷ್ಯನ ಕೋಪ, ತಾಪ, ಆಸೆಗಳನ್ನು ಗೆಲ್ಲುವಂತೆ ಮಾಡುವುದೇ ಆಗಿದೆ. ಅಲ್ಲದೇ ಮನುಷ್ಯನಿಗೆ ಶಾಂತಿ, ಸುಖ, ನೆಮ್ಮದಿಗಾಗಿ ದಸರಾವನ್ನು ಆಚರಿಸಲಾಗುತ್ತದೆ ಎಂದು ದಸರಾದ ಮಹತ್ವವನ್ನು ಸಾರಿದರು.

ಇದೆ ವೇಳೆ ಸಿಎಂ ಸಿದ್ಧರಾಮಯ್ಯ ಅವರ ಸರ್ಕಾರದ ಬಗ್ಗೆ ಭವಿಷ್ಯ ನುಡಿದಂತ ಅವರು, ಸಂಕ್ರಾಂತಿಯವರೆಗೆ ಯಾವುದೇ ತೊಂದರೆ ಸಿದ್ಧರಾಮಯ್ಯ ಸರ್ಕಾರಕ್ಕೆ ಇಲ್ಲ. ಭಯವೂ ಇಲ್ಲ. ಸಂಕ್ರಾಂತಿ ಬಳಿಕ ಆ ಸಿದ್ಧರಾಮಯ್ಯ ಸರ್ಕಾರದ ಬಗ್ಗೆ ಭವಿಷ್ಯ ನುಡಿಯುವುದಾಗಿ ಹೇಳಿದರು. ಇನ್ನೂ ನಾನು ಈ ಹಿಂದೆಯೇ ಹೇಳಿದ್ದೇನೆ. ಅದೇನೆಂದರೇ ಬಯಲು ಸೀಮೆ ಮಲೆನಾಡು ಆಗಲಿದೆ. ಮಲೆನಾಡು ಬಯಲು ಸೀಮೆ ಆಗುತ್ತದೆ ಎಂಬುದಾಗಿ. ಅದರಂತೆ ನಮ್ಮಲ್ಲೀಗ ಬಯಲು ಸೀಮೆ ಮಲೆನಾಡು ಆಗಿದೆ ಎಂಬುದಾಗಿ ಶಾಂಕಿಂಗ್ ಭವಿಷ್ಯ ನುಡಿದರು.

Join WhatsApp

Join Now

Join Telegram

Join Now