ಕೊಡಗು: ಜಿಲ್ಲೆಯಲ್ಲಿ ಒಂಟಿ ಮನೆಗಳೆ ಹೆಚ್ಚು. ಅದರಲ್ಲೂ ಕಾಫಿ ತೋಟದಲ್ಲೇ ಮನೆ ಮಾಡಿಕೊಂಡು, ಗಂಡ ಹೆಂಡತಿ ವಾಸವಿರುತ್ತಾರೆ. ಮಕ್ಕಳು ಎಲ್ಲೋ ದೂರದೂರಿಗೆ ದುಡಿಯೋದಕ್ಕೆ ಹೋಗಿರ್ತಾರೆ. ಹೀಗಾಗಿ ಅಪ್ಪ ಅಮ್ಮನೇ ತೋಟದ ಮನೆಯಲ್ಲಿ ವಾಸ ಮಾಡ್ತಾ ಇರ್ತಾರೆ.
ಈಗ ಕೊಡಗಿನಾದ್ಯಂತ ಒಂಟಿಯಾಗಿ ವಾಸಿಸುವುದೇ ಈಗ ಡೇಂಜರ್ ಎಂಬಂತಾಗಿದೆ. ಈ ದರೋಡೆಕೋರರ ಉಪಟಳ ಹೆಚ್ಚಾಗಿದೆ. ಅದರಲ್ಲೂ ಒಂಟಿ ಮನೆಯಲ್ಲಿ ವೃದ್ಧ ದಂಪತಿ ಇರುವುದನ್ನೇ ನೋಡಿ ಟಾರ್ಗೆಟ್ ಮಾಡುತ್ತಿದ್ದಾರೆ. ಅಂತದ್ದೊಂದು ಘಟನೆ ಜಿಲ್ಲೆಯ ನಾಪೊಕ್ಲು ಸಮೀಪದ ಕೊಳಕೇರಿ ಸಮೀಪದಲ್ಲಿ ನಡೆದಿದೆ.
ಜಾನಕಿ ಮತ್ತು ಅಮ್ಮಕ್ಕಿ ಎಂಬ ವೃದ್ಧರು ವಾಸಿಸುತ್ತಿದ್ದ ಮನೆಯಲ್ಲಿ ಕಳ್ಳತನ ನಡೆದಿದೆ. ಕಾಫಿ ತೋಟದಲ್ಲಿ ಇಬ್ಬರೇ ವಾಸವಾಗಿದ್ದರು. ಈ ಮನೆಗೆ ನುಗ್ಗಿದ ಕಳ್ಳರು, ಇಬ್ಬರಿಗೂ ಜೀವ ಬೆದರಿಕೆ ಒಡ್ಡಿ, ಕೈಕಾಲು ಕಟ್ಟಿ ಹಾಕಿ, ಬೀರು ಕೀ ಕಿತ್ತುಕೊಂಡು ಅದರಲ್ಲಿದ್ದ ಲಕ್ಷಾಂತರ ರೂಪಾಯಿ ಹಣ ಹಾಗೂ ಚಿನ್ನಾಭರಣ ದೋಚಿಕೊಂಡು ಹೋಗಿದ್ದಾರೆ. ಸದ್ಯ ನಮ್ಮನ್ನ ಏನು ಮಾಡಬೇಡಿ ಎಂದು ಬೇಡಿಕೊಂಡಿದ್ದಕ್ಕೆ ಅವರಿಬ್ಬರ ಮೇಲೂ ಹಲ್ಲೆ ಮಾಡಿ ಪ್ರಾಣಾಪಾಯ ಮಾಡದ ಹಾಗೇ ಬಿಟ್ಟು ಹೋಗಿದ್ದಾರೆ. ಈ ಘಟನೆ ಕೊಡಗಿನಲ್ಲಿ ಒಂಟಿ ಮನೆಯಲ್ಲಿ ವಾಸಿಸುವವರುಗೆ ದಿಗಿಲು ಬಡಿದಂತಾಗಿದೆ. ಒಬ್ಬೊಬ್ಬರೇ ಇರುವುದು ಹೇಗೆ ಎಂಬ ಪ್ರಶ್ನೆ ಕಾಡೋದಕ್ಕೆ ಶುರುವಾಗಿದೆ.