ಚಿನ್ನ ಕೊಳ್ಳುವಾಗ, ಮಾರುವಾಗ ಯಾವೆಲ್ಲಾ ತೆರಿಗೆ ಕಟ್ಟಬೇಕು ಅನ್ನೋ ಬಗ್ಗೆ ಹಲವರಿಗೆ ಸರಿಯಾದ ಮಾಹಿತಿ ಇರುವುದಿಲ್ಲ. ನೀವು ಚಿನ್ನವನ್ನು ಆಭರಣ, ಡಿಜಿಟಲ್ ರೂಪ ಅಥವಾ ಬಾಂಡ್‌ಗಳ ರೂಪದಲ್ಲಿ ಇಟ್ಟುಕೊಂಡಿದ್ದರೆ, ಯಾವೆಲ್ಲಾ ತೆರಿಗೆ ನಿಯಮಗಳು ಅನ್ವಯವಾಗುತ್ತದೆ ಗೊತ್ತೆ ?
ನೀವು ಚಿನ್ನದ ಆಭರಣ, ನಾಣ್ಯ ಅಥವಾ ಡಿಜಿಟಲ್ ಗೋಲ್ಡ್ ಖರೀದಿಸಿದರೆ, ಅದರ ಮೇಲೆ ಶೇ. 3ರಷ್ಟು ಜಿಎಸ್‌ಟಿ ಪಾವತಿಸಬೇಕು. ಅಷ್ಟೇ ಅಲ್ಲ, ಆಭರಣದ ಮೇಕಿಂಗ್ ಚಾರ್ಜ್ (ತಯಾರಿಕಾ ಶುಲ್ಕ) ಮೇಲೆ ಶೇ. 5ರಷ್ಟು ಜಿಎಸ್‌ಟಿ ಪ್ರತ್ಯೇಕವಾಗಿ ಬೀಳುತ್ತದೆ.
ಗೋಲ್ಡ್ ಇಟಿಎಫ್ 12 ತಿಂಗಳಿಗಿಂತ ಹೆಚ್ಚು ಕಾಲ ಇಟ್ಟುಕೊಂಡರೆ ಶೇ. 12.5ರಷ್ಟು ತೆರಿಗೆ. 12 ತಿಂಗಳೊಳಗೆ ಮಾರಿದರೆ ನಿಮ್ಮ ಸ್ಲ್ಯಾಬ್ ರೇಟ್ ಪ್ರಕಾರ ತೆರಿಗೆ ಕಟ್ಟಬೇಕು. ಗೋಲ್ಡ್ ಮ್ಯೂಚುವಲ್ ಫಂಡ್ 24 ತಿಂಗಳಿಗಿಂತ ಹೆಚ್ಚು ಕಾಲ ಇಟ್ಟುಕೊಂಡರೆ ಶೇ. 12.5ರಷ್ಟು, ಅದಕ್ಕಿಂತ ಕಡಿಮೆ ಅವಧಿಯಾದರೆ ಸ್ಲ್ಯಾಬ್ ರೇಟ್ ಪ್ರಕಾರ ತೆರಿಗೆ ಪಾವತಿಸಬೇಕು.

ಹತ್ತಿರದ ಸಂಬಂಧಿಕರು ಉಡುಗೊರೆಯಾಗಿ ಕೊಟ್ಟ ಚಿನ್ನಕ್ಕೆ ಯಾವುದೇ ತೆರಿಗೆ ಇಲ್ಲ.ಇನ್ನು, ಮರಣ ಅಥವಾ ವಿಲ್ ಮೂಲಕ ಬಂದ ಚಿನ್ನಕ್ಕೆ ಸದ್ಯಕ್ಕೆ ಯಾವುದೇ ತೆರಿಗೆ ಇಲ್ಲ.ಆದರೆ, ಸಂಬಂಧಿಕರಲ್ಲದವರಿಂದ ಒಂದೇ ವರ್ಷದಲ್ಲಿ ₹50,000ಕ್ಕಿಂತ ಹೆಚ್ಚು ಮೌಲ್ಯದ ಚಿನ್ನ ಉಡುಗೊರೆಯಾಗಿ ಬಂದರೆ, ಅದನ್ನು ‘ಇತರೆ ಮೂಲಗಳಿಂದ ಬಂದ ಆದಾಯ’ ಎಂದು ಪರಿಗಣಿಸಿ, ನಿಮ್ಮ ಆದಾಯ ತೆರಿಗೆ ಸ್ಲ್ಯಾಬ್ ಪ್ರಕಾರ ತೆರಿಗೆ ಕಟ್ಟಬೇಕು.ನೀವು ಗೋಲ್ಡ್ ಇಟಿಎಫ್ (Exchange Traded Funds), ಗೋಲ್ಡ್ ಮ್ಯೂಚುವಲ್ ಫಂಡ್‌ಗಳು ಅಥವಾ ಸಾವರಿನ್ ಗೋಲ್ಡ್ ಬಾಂಡ್‌ಗಳನ್ನು (SGB) ಖರೀದಿಸಿದರೆ ಜಿಎಸ್‌ಟಿ ಕಟ್ಟಬೇಕಾಗಿಲ್ಲ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.







