ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ. ನ. 23 : ಸಂಘದ ಯಶಸ್ಸು ಕೇವಲ ಒಬ್ಬ ವ್ಯಕ್ತಿಯಿಂದ ಸಾಧ್ಯವಿಲ್ಲ; ಎಲ್ಲ ಸದಸ್ಯರು ಶ್ರಮವಹಿಸಿ, ಯಾವುದೇ ಭೇದಭಾವವಿಲ್ಲದೆ ಸೌಹಾರ್ದತೆಯಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಸಂಘವು ಸದೃಢವಾಗಿ ಮುನ್ನಡೆ ಯುತ್ತದೆ ಎಂದು ಚಿತ್ರದುರ್ಗ ಜಿಲ್ಲಾ ನಿವೃತ್ತ ಪೋಲಿಸ್ ಅಧಿಕಾರಿಗಳ ಕ್ಷೇಮಾಭಿವೃದ್ದಿ ಸಂಘದ ಜಿಲ್ಲಾಧ್ಯP À್ಷರಾದ ನಿವೃತ್ತ ಡಿವೈಎಸ್ಪಿ ಭೀಮಾರೆಡ್ಡಿ ತಿಳಿಸಿದರು.
ಚಿತ್ರದುರ್ಗ ಜಿಲ್ಲಾ ನಿವೃತ್ತ ಪೋಲಿಸ್ ಅಧಿಕಾರಿಗಳ ಕ್ಷೇಮಾಭಿವೃದ್ದಿ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯು ಸೋಮವಾರ ಸಂಘದ ಕಲ್ಯಾಣಿಯಲ್ಲಿ ಹಮ್ಮಿಕೊಳ್ಳಲಾಗಿದ್ದು ಅದರ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಹಿಂದೆ ಜಿಲ್ಲೆಯಲ್ಲಿ ಸಂಘವು ನಿಷ್ಕ್ರಿಯವಾಗಿದ್ದ ಸಂದರ್ಭದಲ್ಲಿ, ತುಮಕೂರು ಸಂಘದ ಅಧ್ಯಕ್ಷರಾಗಿದ್ದ ಮಾಲೂರಪ್ಪ ಚಿತ್ರದುರ್ಗಕ್ಕೆ ಭೇಟಿ ನೀಡಿ ನೀಡಿದ ಪ್ರೋತ್ಸಾಹದ ಹಿನ್ನೆಲೆಯಲ್ಲಿ ಪೊಲೀಸ್ ಮೈದಾನದಲ್ಲಿ ಸಂಘವನ್ನು ಆರಂಭಿಸಲಾಯಿತು ಕಾಲಕ್ರಮೇಣ ನಿವೃತ್ತರಾಗುವವರು ಸದಸ್ಯರಾಗುತ್ತಾ ಬಂದರು. ದಿವಂಗತ ಹೆಚ್. ಆಂಜನೇಯ ನಿವೃತ್ತ ಪೊಲೀಸ್ ಉಪಾಧೀಕ್ಷಕರು ಅಧ್ಯಕ್ಷರಾಗಿ ಮತ್ತು ಇತರರು ಪದಾಧಿಕಾರಿಗಳಾಗಿ ಆಯ್ಕೆಯಾದ ನಂತರ ಸಂಘವು ವ್ಯವಸ್ಥಿತವಾಗಿ ಮುನ್ನಡೆಸಲಾಯಿತು ಎಂದರು.
ಆರಂಭದಲ್ಲಿ ಸಂಘಕ್ಕೆ ಸ್ವಂತ ಕಟ್ಟಡವಿರಲಿಲ್ಲ. ಹಳೆಯ ಪೊಲೀಸ್ ಅಧೀಕ್ಷಕರ ಕಚೇರಿ ಆವರಣದ ಎರಡು ಕೊಠಡಿಗಳನ್ನು ನವೀಕರಿಸಿ ನೀಡಲಾಗಿತ್ತು. ಮುಂದೆ ಎಂ.ಎನ್. ಅನುಚೇತ್ ಪೊಲೀಸ್ ಅಧೀಕ್ಷಕರಾಗಿದ್ದಾಗ ಸ್ವಂತ ಕಟ್ಟಡಕ್ಕೆ ಜಾಗ ನೀಡುವಂತೆ ಮನವಿ ಸಲ್ಲಿಸಲಾಯಿತು. ರೈಲು ಹಳಿಯ ಆ ಕಡೆಯ ಹಾಳುಬಿದ್ದ ಜಾಗವನ್ನು ಸೂಚಿಸಲಾದರೂ, ಸುರಕ್ಷತೆ ಮತ್ತು ಕಟ್ಟಡ ರಕ್ಷಣೆಯ ದೃಷ್ಟಿಯಿಂದ ಆ ಜಾಗ ಬೇಡವೆಂದು ಸ್ಪಷ್ಟವಾಗಿ ತಿಳಿಸಲಾಯಿತು. ನಂತರ ಲಿಖಿತ ಮನವಿ ಮತ್ತು ಪರವಾನಗಿ ಪ್ರಕ್ರಿಯೆಯ ಮೂಲಕ 60*50 ಅಳತೆಯ ಜಾಗ ಮಂಜೂರಾಯಿತು. ಅಂದಿನ ರಾಜ್ಯ ಅಧ್ಯಕ್ಷರಾಗಿದ್ದ ಕೆಂಪಯ್ಯ ಹಾಗೂ ಪೊಲೀಸ್ ಮಹಾನಿರ್ದೇಶಕರಾಗಿದ್ದ ಓಂ ಪ್ರಕಾಶ್ ಅವರ ಸಹಕಾರದಿಂದ ಜಾಗ ಲಭಿಸಿತು. ಆರಂಭದಲ್ಲಿ ನಾಲ್ಕು ಲಕ್ಷ ರೂಪಾಯಿ ಇದ್ದು, ಸದಸ್ಯರು, ಅಧಿಕಾರಿಗಳು, ಬೆಂಗಳೂರಿನವರು ಹಾಗೂ ಸ್ಥಳೀಯ ಸಾರ್ವಜನಿಕರಿಂದ ವಂತಿಗೆ ಸಂಗ್ರಹಿಸಿ ಕಟ್ಟಡ ನಿರ್ಮಿಸಿ ಉದ್ಘಾಟಿಸಲಾಯಿತು.
ಹಿಂದಿನ ಸಭೆಯಲ್ಲಿ ಬೈಲಾ ತಿದ್ದುಪಡಿ ಹಾಗೂ ಇತರ ರಾಜ್ಯಗಳ ವ್ಯವಸ್ಥೆಯನ್ನು ಗಮನಿಸಿ ಪ್ರಸ್ತುತ ಸಮಿತಿಯನ್ನು ಒಂದು ವರ್ಷ ಮುಂದುವರಿಸಲು ನಿರ್ಧರಿಸಲಾಗಿತ್ತು. ಈಗ ಕಾರ್ಯಕಾರಿ ಸಮಿತಿಯ ಅವಧಿ ಮುಕ್ತಾಯಗೊಂಡಿದ್ದು, ನೂತನ ಸಮಿತಿ ರಚನೆಯಾಗಬೇಕಿದೆ. ಹೊಸ ಸಮಿತಿ ರಚನೆಗಾಗಿ ನಿವೃತ್ತ ಪೊಲೀಸ್ ಉಪಾಧೀಕ್ಷಕರಾದ ಬಸಪ್ಪ, ಇಸಾಕ್ ಹಾಗೂ ರೆಹಮಾನ್ ಅವರನ್ನೊಳಗೊಂಡ ಪರಿಶೀಲನಾ ಸಮಿತಿಯನ್ನು ನೇಮಿಸಲಾಗಿದೆ. ಸದಸ್ಯರ ಪಟ್ಟಿಯನ್ನು ನೀಡಲಾಗಿದ್ದು, ಆಸಕ್ತಿ ಇರುವವರು ಹಾಗೂ ಹಿಂದಿನಿಂದ ಸಂಘಕ್ಕಾಗಿ ದುಡಿದವರನ್ನು ಗಮನದಲ್ಲಿಟ್ಟುಕೊಂಡು ನೇಮಕಾತಿ ಮಾಡುವಂತೆ ತಿಳಿಸಲಾಗಿದೆ ಎಂದರು.
ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯನ್ನು ಉದ್ಘಾಟಿಸಿದ ಚಿತ್ರದುರ್ಗ ಜಿಲ್ಲೆಯ ಉಪಾಧೀಕ್ಷರಾದ ಅರುಣ್ ನಾಗೇಗೌಡ ಮಾತನಾಡಿ, ತಾವು ಕರ್ನಾಟಕದ ಸುಮಾರು ಆರು-ಏಳು ಜಿಲ್ಲೆಗಳಲ್ಲಿ ಕೆಲಸ ಮಾಡಿದ್ದು ಇಷ್ಟು ಚೆನ್ನಾಗಿ ಒಂದು ಕಟ್ಟಡ ಆಗಲಿ ಅಥವಾ ಎಲ್ಲ ರೀತಿಯ ಸೌಲಭ್ಯಗಳು ಆಗಲಿ ಮತ್ತು ಇಷ್ಟೊಂದು ಜನ ಸೇರಿರುವುದನ್ನು ತಮ್ಮ ಜೀವನದಲ್ಲಿ ಇದೇ ಮೊದಲ ಬಾರಿಗೆ ನೋಡುತ್ತಿರುವುದಾಗಿ ಹೇಳಿ ಈ ರೀತಿಯ ಉತ್ತಮ ವ್ಯವಸ್ಥೆ ಮತ್ತು ಒಗ್ಗಟ್ಟು ಮುಂದುವರಿಯಬೇಕು. . ಕಟ್ಟಡ ಹಾಗೂ ಎಲ್ಲ ರೀತಿಯ ಸೌಲಭ್ಯಗಳು ಉತ್ತಮವಾಗಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಇದೇ ರೀತಿ ಮುಂದುವರಿಯಲಿ ಎಂದರು.
ಸನ್ಮಾನವನ್ನು ಸ್ವೀಕಾರ ಮಾಡಿ ಮಾತನಾಡಿದ ನಿವೃತ್ತ ಉಪ ಅಧಿಕ್ಷಕರಾದ ಬಸವರಾಜು ರಾಜ್ಯದ ಇತರೆ ಪೊಲೀಸ್ ನಿವೃತ್ತ ಸಂಘಗಳಿಗೆ ಹೋಲಿಸಿದರೆ ಚಿತ್ರದುರ್ಗ ಪೊಲೀಸ್ ನಿವೃತ್ತ ಸಂಘವು ಅತ್ಯುನ್ನತವಾಗಿ ಮತ್ತು ಗೌರವಾನಿತವಾಗಿ ಕಾರ್ಯನಿರ್ವಹಿಸುತ್ತಿದೆ ಜೀವನದಲ್ಲಿ ಮಾಡಿದ ಸಣ್ಣ ಒಳ್ಳೆಯ ಕೆಲಸಗಳು ಮಾತ್ರ ಅಂತಿಮವಾಗಿ ಉಳಿಯುತ್ತವೆ, ಅಧಿಕಾರ ಮತ್ತು ಅಂತಸ್ತುಗಳು ಶಾಶ್ವತವಲ್ಲ ಕರ್ನಾಟಕ ರಾಜ್ಯದಲ್ಲಿರುವ ಪೊಲೀಸ್ ನಿವೃತ್ತ ಸಂಘಗಳ ಪೈಕಿ ಚಿತ್ರದುರ್ಗ ಸಂಘವು ವಿವಿಧ ಕಾರ್ಯಕ್ಷೇತ್ರಗಳಲ್ಲಿ ಭಾಗವಹಿಸಿ ಅತ್ಯುನ್ನತವಾಗಿ ಕಾರ್ಯನಿರ್ವಹಿಸುತ್ತಿದೆ ಶಿವಮೊಗ್ಗ, ದಾವಣಗೆರೆ ಮತ್ತು ಬಳ್ಳಾರಿ ಸೇರಿದಂತೆ ಹಲವೆಡೆ ಭೇಟಿ ನೀಡಿದ್ದರೂ, ಇಂತಹ ಸುಸಜ್ಜಿತ ಕಟ್ಟಡ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸುವ ಸದಸ್ಯರನ್ನು ಬೇರೆಡೆ ಕಂಡಿಲ್ಲ ಎಂದ ಅವರು, ಬೇರೆಡೆ ಸದಸ್ಯರನ್ನು ಕರೆತಂದು ಸದಸ್ಯತ್ವ ಮಾಡುವ ಪರಿಸ್ಥಿತಿ ಇದ್ದರೆ, ನಮ್ಮ ಸಂಘ ಇನ್ನಷ್ಟು ಅಭಿವೃದ್ಧಿ ಹೊಂದಬೇಕು ಎಂದು ಆಶಿಸಿದರು.
ಜನನ ಮತ್ತು ಮರಣವು ನಿಶ್ಚಿತವಾಗಿದ್ದು, ಭೂಮಿಗೆ ಬಂದ ಪ್ರತಿಯೊಬ್ಬರೂ ಒಂದಲ್ಲ ಒಂದು ದಿನ ಈ ಭೂಮಿಯನ್ನು ಬಿಟ್ಟು ಹೋಗುವುದು ಕಡ್ಡಾಯ ಸಾವಿನ ನಂತರ ಸಂಘ, ಸಂಸ್ಥೆ ಅಥವಾ ಬಂಧುಬಳಗ ಯಾರೂ ಜೊತೆಗೆ ಬರುವುದಿಲ್ಲ; ಜೀವಿತಾವಧಿಯಲ್ಲಿ ಅಥವಾ ಸೇವಾವಧಿಯಲ್ಲಿ ಮಾಡಿದ ಕಿಂಚಿತ್ ಒಳ್ಳೆಯ ಕೆಲಸ ಮಾತ್ರ ಮುಕ್ತಿ ನೀಡುತ್ತದೆ ಅಪಘಾತ ಅಥವಾ ತುರ್ತು ಸಂದರ್ಭಗಳಲ್ಲಿ ಗುರುತು ಪತ್ತೆಹಚ್ಚಲು ಅನುಕೂಲವಾಗುವಂತೆ, ಸಂಘದ ಮುಂದಿನ ಪದಾಧಿಕಾರಿಗಳು ಎಲ್ಲಾ ಸದಸ್ಯರ ಶಾಶ್ವತ ವಿಳಾಸ, ವಯಸ್ಸು ಮತ್ತು ತುರ್ತು ಸಂಪರ್ಕ ಸಂಖ್ಯೆಗಳನ್ನು ಒಳಗೊಂಡ ವ್ಯವಸ್ಥೆಯನ್ನು ರೂಪಿಸಬೇಕುಸೇವೆಯಲ್ಲಿದ್ದಾಗ ಕರ್ತವ್ಯದ ಒತ್ತಡದಿಂದ ಕುಟುಂಬದವರೊಂದಿಗೆ ಸಮಯ ಕಳೆಯಲು ಸಾಧ್ಯವಾಗುವುದಿಲ್ಲ; ನಿವೃತ್ತಿಯ ನಂತರವಾದರೂ ಕುಟುಂಬದವರೊಂದಿಗೆ ಉತ್ತಮ ಸಮಯ ಕಳೆಯುವುದನ್ನು ಕಲಿಯಬೇಕು ಎಂದು ಸಲಹೆ ನೀಡಿದರು.
ಚಿತ್ರದುರ್ಗ ಜಿಲ್ಲಾ ನಿವೃತ್ತ ಪೋಲಿಸ್ ಅಧಿಕಾರಿಗಳ ಕ್ಷೇಮಾಭಿವೃದ್ದಿ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ನಿವೃತ್ತ ಡಿವೈಎಸ್ಪಿ ಯೂಸುಫ್ ಸಂಘ ನಡೆದು ಬಂದ ದಾರಿಯನ್ನು ವಿವರಿಸಿದರು. ಕೋಶಾಧ್ಯಕ್ಷರಾದ ನಿವೃತ್ತ ಡಿವೈಎಸ್ಪಿ ಹನುಮಂತ್ ರೆಡ್ಡಿ, ಗೌರವಾಧ್ಯಕ್ಷರಾದ ಎಸ್,.ಬಸವರಾಜು, ಉಪಾಧ್ಯಕ್ಷರಾದ ಟಿ.ಎಚ್. ರಾಜಪ್ಪ, ಸಹ ಕಾರ್ಯದರ್ಶಿ ಜಿ.ಎಸ್,ಕೃಷ್ಣಮೂರ್ತಿ, ಲೆಕ್ಕ ಪರಿಶೋಧಕರಾದ ಆರ್.ತಿಮ್ಮಣ್ಣ ಸೇರಿದಂತೆ ನಿರ್ದೇಶೇಕರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ 75 ವಸಂತಗಳನ್ನು ಪೂರೈಸಿದ 15 ಜನರಿಗೆ ಸನ್ಮಾನವನ್ನು ನಡೆಸಲಾಯಿತು. ಇದರೊಂದಿಗೆ ಹಾಲಿ ಇರುವ ಕಾರ್ಯಕಾರಿ ಸಮಿತಿಯ ಅವಧಿ ಮುಗಿದ್ದಿದ್ದು ಹೊಸ ಕಾರ್ಯಕಾರಿಣಿ ಸಮಿತಿಯ ಆಯ್ಕೆ 2026-27ನೇ ಸಾಲಿನ ಸಂಘದ ನವೀಕರಣದ ಮಾಡುವ ಬಗ್ಗೆ ಚರ್ಚೆ ನಡೆಸಲಾಯಿತು.
ಯಶೋಧಮ್ಮ ಪ್ರಾರ್ಥಿಸಿದರೆ, ಮಹಂತರೆಡ್ಡಿ ಸ್ವಾಗತಿಸಿದರು. ಇದೆ ಸಂದರ್ಭದಲ್ಲಿ ಏಪ್ರಿಲ್ 1 2025 ರಿಂದ 31.03.2026ರ ಸಮಯದಲ್ಲಿ ನಿಧನರಾದ 15 ಜನರಿಗೆ ಸಂತಾಪವನ್ನು ಸೂಚಿಸಲಾಯಿತು. ನಾಗರಾಜ್ ವಂದಿಸಿದರು.












