ಸಣ್ಣ ವಯಸ್ಸಿಗೇನೆ ಮಂಡಿನೋವು ಬರ್ತಾ ಇದ್ಯಾ : ಆಹಾರ ಕ್ರಮ ಹೀಗಿರಲಿ

1 Min Read

ಮಂಡಿನೋವು ಅನ್ನೋದು ಈ ಮೊದಲೆಲ್ಲಾ ನಮ್ಮ ಅಜ್ಜ ಮುತ್ತಾತಂದಿರಿಗೆ ಬರ್ತಾ ಇತ್ತು. ವಯಸ್ಸಾದ ಮೇಲೆ,‌ ಮೂಳೆ ಸವೆಯುವುದಕ್ಕೆ ಶುರುವಾದ ಮೇಲೆ. ಆದರೆ ಈಗಿನ ಪೀಳಿಗೆಯವರಲ್ಲಿ ಸಮಸ್ಯೆ ಬಹಳ ಬೇಗನೇ ಬರ್ತಾ ಇದೆ. ಇಪ್ಪತ್ತು/ಇಪ್ಪತ್ತೈದನೇ ವಯಸ್ಸಿನವರಲ್ಲಿಯೇ ಈ ಸಮಸ್ಯೆ ಕಾಡುತ್ತಿದೆ. ಹೀಗಾಗಿ ಅದೆಷ್ಟೋ ಜನ ಮೂಳೆಯ ಸಮಸ್ಯೆಯಿಂದ ಬಳಲುತ್ತಿರುವವರು ನೆಲದ ಮೇಲೆ ಕುಳಿತುಕೊಳ್ಳುವುದಕ್ಕೂ ಕಷ್ಟ ಪಡ್ತಾ ಇದಾರೆ, ಮೆಟ್ಟಿಲುಗಳನ್ನ ಹತ್ತುವುದಕ್ಕೂ ಸಂಕಟ ಪಡುತ್ತಿದ್ದಾರೆ. ಈ ರೀತಿ ಚಿಕ್ಕ ವಯಸ್ಸಿಗೇನೆ ಮೂಳೆಯ ಸಮಸ್ಯೆಯಿಂದ ಬಳಲುತ್ತಿರುವವರು ತಮ್ಮ ಆಹಾರದಲ್ಲಿಯೇ ಸೇವಿಸಬೇಕಾದ್ದನ್ನ ಸೇವಿಸುತ್ತಿಲ್ಲ ಎಂದೇ ಅರ್ಥ. ಹಾಗಾದ್ರೆ ಈ ಮೂಳೆ ಸಮಸ್ಯೆಗೆ ಪರಿಹಾರ ಏನು ಮಾಡಬೇಕು ಎಂಬುದನ್ನ ಇಲ್ಲಿ ತಿಳಿಸ್ತೀವಿ ನೋಡಿ.

* ಸಾಧ್ಯವಾದಷ್ಟು ನಮ್ಮ ಆಹಾರ ಕ್ರಮದಲ್ಲಿ ಹಸಿರು ತರಕಾರಿ, ಹಣ್ಣುಗಳನ್ನ ಅಳವಡಿಸಿಕೊಳ್ಳಬೇಕು. ಪ್ರತಿದಿನದ ಆಹಾರದಲ್ಲಿ ಅದನ್ನ ಸೇವಿಸುತ್ತಾ ಬರಬೇಕು. ಆಗ ಈ ಮೂಳೆ ನೋವಿನ ಸಮಸ್ಯೆಗೆ ಕೊಂಚ ಪರಿಹಾರ ಸಿಗಲಿದೆ.

* ಬ್ಲೂಬೆರಿ, ಸ್ಟ್ರಾಬೆರಿ ಹಣ್ಣುಗಳಲ್ಲಿ ಜಾಯಿಂಟ್ ಗೆ ಸಂಬಂಧಿಸಿದ ಅಂಶಗಳು ಅಡಗಿವೆ. ಹೀಗಾಗಿ ಸಾಧ್ಯವಾದಷ್ಟು ಈ ಹಣ್ಣುಗಳನ್ನು ತಿನ್ನುತ್ತಾ ಇರಿ.

* ಮಂಡಿನೋವಿನಿಂದ ಏನಾದ್ರೂ ಬಳಲುತ್ತಾ ಇದ್ದರೆ ಫೈನಾಪಲ್ ತಿನ್ನೋದನ್ನ ಅಭ್ಯಾಸ ಮಾಡಿಕೊಳ್ಳಿ. ಒಂದು ವಾರ ರೆಗ್ಯೂಲರ್ ಆಗಿ ತಿಂದು ನೋಡಿ. ಇದರಲ್ಲಿರುವ ಅಂಶವೂ ಮಂಡಿನೋವನ್ನ ಕಡಿಮೆ ಮಾಡುತ್ತದೆ.

* ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಸಿ ಹಾಗೂ ಕೆ ಅಂಶಗಳಿವೆ. ಇದು ನಿಮ್ಮ ತ್ವಜೆಯ‌ನ್ನು ಚೆಂದ ಮಾಡುವುದಲ್ಲದೆ, ಮೂಳೆಗಳ ಬಲವರ್ಧನೆಗೂ ಸಹಾಯ ಮಾಡುತ್ತದೆ.

* ಹಾಗೇ ಮಂಡಿನೋವು ಬರುವುದಕ್ಕೆ ಪ್ರಮುಖ ಕಾರಣವಾದ ಕಾರ್ಟಲೇಜ್ ಸಮಸ್ಯೆಯನ್ನು ಕಡಿಮೆ ಮಾಡುವ ಶಕ್ತಿ ಹೊಂದಿರುವುದು ಬ್ರೋಕಲಿ. ಪ್ರತಿದಿನ ಬ್ರೋಕಲಿ ಜೊತೆಗೆ ಮಿಶ್ರ ತರಕಾರಿಗಳನ್ನ ಹಾಕಿ, ಸ್ಟೀಮ್ ಮಾಡಿ ತಿನ್ನೋದರಿಂದ ಹಲವು ಉಪಯೋಗಗಳು ಸಿಗುತ್ತವೆ.

Share This Article
Leave a Comment

Leave a Reply

Your email address will not be published. Required fields are marked *