ಬೆಂಗಳೂರು: ಸಿಲಿಕಾನ್ ಸಿಟಿಯ ರಸ್ತೆ ಗುಂಡಿ, ಕಸದ ಬಗ್ಗೆ ಕಟುವಾಗಿ ಟೀಕೆ ಮಾಡಿದ್ದ ಉದ್ಯಮಿ ಕಿರಣ್ ಮಜುಂದಾರ್ ಸೇರಿದಂತೆ ಹಲವು ಉದ್ಯಮಿಗಳು ಇಂದು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ. ಸದಾಶಿವನಗರದ ಡಿಕೆ ಶಿವಕುಮಾರ್ ಅವರ ಮನೆಗೆ ತೆರಳಿ, ದೀಪಾವಳಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.
ಇನ್ನು ಇದೇ ವೇಳೆ ಬೆಂಗಳೂರು ನಗರದ ರಸ್ತೆ ಗುಂಡಿಗಳ ಬಗ್ಗೆಯೂ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ. ರಸ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಕಿರಣ್ ಮಜುಂದಾರ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ ಟೀಕೆ ಮಾಡಿದ್ದರು. ಆದರೆ ಈ ಬೆನ್ನಲ್ಲೇ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ. ಉದ್ಯಮಿಗಳ ಸೋಷಿಯಲ್ ಮೀಡಿಯಾ ಟೀಕೆಗೆ ರಾಜಕಾರಣಿಗಳು ಸಹ ಪ್ರತಿಕ್ರಿಯೆ ನೀಡಿದ್ದರು. ಎಲ್ಲರು ಸೇರಿ ಇದಮ್ನ ಸರಿ ಪಡಿಸಬೇಕು. ಟೀಕೆ ಮಾಡುವುದರಿಂದ ಏನು ಪ್ರಯೋಜನವಿಲ ಎಂದಿದ್ದರು.
ಸರ್ಕಾರದ ಸಚಿವರ ಹೇಳಿಕೆಗೆ ಉದ್ಯಮಿಗಳು ಕೂಡ ಬೆಂಬಲ ನೀಡಿದ್ದರು. ನಾವೂ ಕೂಡ ಬೆಂಬಲ ನೀಡುವುದಕ್ಕೆ ಸಿದ್ಧ. ರಸ್ತೆಗಳು ಸರಿಯಾಗಬೇಕು ಅಷ್ಟೇ ಎಂಬುದು ನಮ್ಮ ಉದ್ದೇಶ ಎಂಬ ಮಾತನ್ನ ಹೇಳಿದ್ರು. ಈ ಬೆನ್ನಲ್ಲೇ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನ ಭೇಟಿಯಾಗಿ, ಪ್ರತಿಷ್ಠಿತ ಕಂಪನಿಗಳ ಮಾಲೀಕರು ಭೇಟಿ ನೀಡಿ, ಚರ್ಚೆ ಮಾಡುತ್ತಿದ್ದಾರೆ. ಯಾಕಂದ್ರೆ ದೊಡ್ಡ ದೊಡ್ಡ ಕಂಪನಿಗಳು ಇರುವ ರಸ್ತೆಗಳು ಕೂಡ ಹಾಳಾಗಿದೆ. ಬೇರೆ ಬೇರೆ ದೇಶದಿಂದ ಅತಿಥಿಗಳು ಕಂಪನಿಗಳ ವಿಸಿಟ್ ಮಾಡುವ ಕಾರಣ, ರಸ್ತೆಗಳು ಸರಿಯಾಗಬೇಕು. ನಾವೂ ಕೂಡ ಬೆಂಬಲ ನೀಡ್ತೇವೆ ಎಂದಿದ್ದರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

















