Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬಂದ ಹಣವನ್ನೆಲ್ಲ ದಾನ ಮಾಡಲು ಹೊರಟ ಮಂಜು ಕಿವಿ ಹಿಂಡಿದ ಕಿಚ್ಚ..!

---Advertisement---

ಉಗ್ರಂ ಮಂಜು ಅವರನ್ನ ನೋಡಿದ್ದ ಜನ ಈ ಸೀಸನ್ ನಲ್ಲಿ ವಿನ್ನರ್ ಇವರೇ ಎಂದು ಘೋಷಣೆ ಮಾಡಿದ್ದರು. ವಿನ್ನರ್ ಆಗದೆ ಇದ್ದರು ರನ್ನರ್ ಆದರೂ ಆಗ್ತಾರೆ ಎಂದುಕೊಂಡಿದ್ರು. ಆದರೆ ಬರ್ತಾ ಬರ್ತಾ ರಾಯರ ಕುದುರೆ ಕತ್ತೆ ಆಯ್ತು ಅಂತಾರಲ್ಲ ಹಾಗೇ ಗೌತಮಿ ಸಹವಾಸ ಮಾಡಿದ ಮೇಲೆ ಮಂಜು ಆಗಿದ್ದು. ಸೀಸನ 11ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ನಿಂತ ಜಾಗದಲ್ಲೂ ನಿಲ್ಲಲಿಲ್ಲ ಮಂಜು.

ಉಗ್ರಂ ಮಂಜುಗೆ ಮದುವೆ ಮಾಡಬೇಕು ಎಂಬುದು ಅವರ ತಂದೆ ತಾಯಿ ಆಸೆ. ಅದರ ಜೊತೆಗೆ ವಿಪರೀತ ಕುಡಿತವನ್ನ ಬಿಡಬೇಕು ಎಂಬುದು. ಅದನ್ನ ಸುದೀಪ್ ಅವರು ವೇದಿಕೆ ಮೇಲೆ ಕೇಳಿದ್ದಾರೆ. ಕುಡಿತ ಬಿಡಬೇಕು, ಮದುವೆಯಾಗಬೇಕು ಅನ್ನೋದು ಮನೆಯವರ ಆಸೆ. ಏನು ಮಾಡ್ತೀರ ಎಂದಾಗ. ಮಂಜು ಅವರ ತಾಯಿಗೆ ಸಮಾಧಾನ ಮಾಡಿದ್ದಾರೆ, ಅದು ಆಗಬೇಕಾದಾಗ ಆಗುತ್ತದೆ ಎಂದು ಹೇಳಿದ್ದಾರೆ.

ಐದನೇ ಸ್ಥಾನದಲ್ಲಿದ್ದ ಮಂಜುಗೆ 2 ಲಕ್ಷ ಕ್ಯಾಶ್ ಪ್ರೈಸ್ ಸಿಕ್ಕಿದೆ. ಇದೀಗ ಮಂಜು ಆ ಹಣವನ್ನು ವಯಸ್ಸಾದವರಿಗೆ ನೀಡಿದ್ದಾರೆ. ಮತ್ತೊಂದು ಲಕ್ಷ ಹಣ ಸಿಕ್ಕಿದ್ದು, ಅದನ್ನ ರೈತರಿಗೆ ನೀಡಿದ್ದಾರೆ. ಆಗ ಮಧ್ಯೆ ಪ್ರವೇಶಿಸಿದ ಸುದೀಪ್, ಬುದ್ದಿ ಹೇಳಿ, ಮೊದಲು ಎಲ್ಲಾ ಹಣವನ್ನು ಅವರ ತಂದೆ ತಾಯಿಗೆ ಕೊಡಿ.‌ಆಮೇಲೆ ಅವರು ಏನು ಮಾಡುತ್ತಾರೋ ಅವರೇ ತೀರ್ಮಾನ ಮಾಡಲಿ ಎಂದಿದ್ದಾರೆ. ಮಂಜು ಅವರಿಗೆ ಮೂರುವರೆ ಲಕ್ಷ ಸಿಕ್ಕಿದೆ. ಮಂಜು ಹುಡುಗಾಟದ ಬುದ್ದಿ ಇರೋರು, ವಿಪರೀತ ಕುಡಿಯುತ್ತಾರೆ. ಇದು ಅವರ ತಂದೆ ತಾಯಿಗೆ ಇರುವ ಬೇಸರ. ಈಗ ನೋಡಿದ್ರೆ ವೇದಿಕೆ ಮೇಲೆ ನಿಂತು ಬಂದ ಹಣವನ್ನೆಲ್ಲ ಇದಕ್ಕೆ ದಾನ ಅದಕ್ಕೆ ದಾನ ಅಂತ ಮಾಡ್ತಾ ಇದ್ರು. ಸುದೀಪ್ ಕಿವಿ ಹಿಂಡಿ ಬುದ್ದಿ ಹೇಳಿದ್ದಾರೆ. ದಾನ, ಧರ್ಮ ಬೇಕು ಆದರೆ ದಡ್ಡತನ ಬೇಡ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment