in ,

ಕಿಚ್ಚ ಆಹ್ವಾನಿಸಿಲ್ಲ ಅಂತಾರೆ.. ಫೋಟೋ ಸಾಕ್ಷಿ ಹೇಳುತ್ತಿದೆ : ದಾವಣಗೆರೆಯಲ್ಲಿ ನಡೆದ ಗಲಾಟೆ ಏನು..?

suddione whatsapp group join

ದಾವಣಗೆರೆ: ಜಿಲ್ಲೆಯ ರಾಜನಹಳ್ಳಿಯಲ್ಲಿ ನಿನ್ನೆ ವಾಲ್ಮೀಕಿ ಸಮುದಾಯದ ಜಾತ್ರೆ ನಡೆದಿದೆ. ಈ ಜಾತ್ರೆಗೆ ಬಂದಿದ್ದು, ಹೆಚ್ಚು ಸುದೀಪ್ ಅಭಿಮಾನಿಗಳೆ. ಸುದೀಪ್ ಬರುತ್ತಾರೆ ಎಂಬ ಆಸೆಯನ್ನಿಟ್ಟುಕೊಂಡು ಬಂದಿದ್ದರು. ಆದರೆ ಜಾತ್ರೆಗೆ ಸುದೀಪ್ ಬಾರದೆ ಇದ್ದದ್ದನ್ನು ಕಂಡು ಫ್ಯಾನ್ಸ್ ರೊಚ್ಚಿಗೆದ್ದಿದ್ದರು.

ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಅವರು ಕಾರ್ಯಕ್ರಮದಲ್ಲಿ ಭಾಷಣ ಆರಂಭಿಸಿದ್ದರು. ಈ ವೇಳೆ ಕಿಚ್ಚ.. ಕಿಚ್ಚ.. ಅಂತ ತಮ್ಮ ನೆಚ್ಚಿನ ನಟನ ಬಗ್ಗೆ ಜೈಕಾರ ಕೂಗುತ್ತಿದ್ದರು. ಅಭಿಮಾನಿಗಳ ಕಿಚ್ಚಿಗೆ ಸ್ವಾಮೀಜಿ ಅರ್ಧಕ್ಕೆ ತಮ್ಮ ಭಾಷಣವನ್ನು ಮೊಟಕುಗೊಳಿಸಿದರು. ಅಷ್ಟೇ ಅಲ್ಲದೆ ಫ್ಯಾನ್ಸ್ ಬ್ಯಾರಿಕೇಡ್ ಮುರಿದು ಮುಂದೆ ನುಗ್ಗಲು ಯತ್ನಿಸಿದರು. ಕಾರ್ಯಕ್ರಮಕ್ಕೆ ಅಭಿಮಾನಿಗಳು ತೀವ್ರ ಅಡ್ಡಿ ಮಾಡಿದಾಗ ಲಘು ಲಾಠಿ ಪ್ರಹಾರ ಕೂಡ ಮಾಡಲಾಗಿತ್ತು.

ಇದೀಗ ಕಿಚ್ಚ ಸುದೀಪ್ ಈ ಬಗ್ಗೆ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ. ಸ್ನೇಹಿತರಿಗೆ ನಲ್ಮೆಯ ನಮಸ್ಕಾರ – ದಾವಣಗೆರೆಯ ಜಿಲ್ಲೆಯ ರಾಜನಹಳ್ಳಿಯ ಘಟನೆ ತಿಳಿದು ಬೇಸರವಾಯಿತು. ನನಗೆ ಕಾರ್ಯಕ್ರಮದ ಆಯೋಜಕರಿಂದ ಆಹ್ವಾನವಿರಲಿಲ್ಲ. ಕಾರ್ಯಕ್ರಮದ ಕುರಿತು ಮಾಹಿತಿಯೂ ಇರಲಿಲ್ಲ. ನಾನು ಒಪ್ಪಿಕೊಂಡ ಕಾರ್ಯಕ್ರಮಗಳನ್ನು ತಪ್ಪಿಸಿದವನಲ್ಲ. ಆದರೂ ಇಂದು ನಡೆದ ಘಟನೆಯ ಬಗ್ಗೆ ತೀವ್ರ ವಿಷಾದವಿದೆ. ನಿಮ್ಮ ಜೊತೆ ಬೆರೆಯಲು ನನಗೂ ಸದಾ ಆತೀವ ಆಸೆ ..ಮುಂದೆ ಖಂಡಿತ ಬರುವೆ.ಪ್ರೀತಿ ಇರಲಿ. ಶಾಂತರೀತಿಯಿಂದ ವರ್ತಿಸಿ. ಪ್ರೀತಿಯೊಂದಿಗೆ ನಿಮ್ಮ ಕಿಚ್ಚ ಎಂದು ಟ್ವೀಟ್ ಮಾಡಿದ್ದಾರೆ.

ಇದರ ನಡುವೆ ವಾಲ್ಮೀಕಿ ಮಠದ ಪ್ರಸನ್ನಾನಂದಪುರಿ ಸ್ವಾಮೀಜಿ ಹಾಗೂ ಶಾಸಕ ಎಸ್ ವಿ ರಾಮಚಂದ್ರ ಅವರು ಕಿಚ್ಚ ಸುದೀಪ್ ಅವರ ತಂದೆಯನ್ನು ಭೇಟಿಯಾಗಿ ಆಹ್ವಾನಿಸಿದ್ದಾರೆ. ಪ್ರಸನ್ನಾನಂದಪುರಿ ಸ್ವಾಮೀಜಿ, ಸುದೀಪ್ ಅವರ ತಂದೆ ಸಂಜೀವ್ ಅವರನ್ನು ಸನ್ಮಾನಿಸಿ, ಸುದೀಪ್ ಅವರನ್ನು ಜಾತ್ರೆಗೆ ಕಳುಹಿಸುವಂತೆ ಕೇಳಿದ್ದಾರೆ ಎನ್ನಲಾಗಿದೆ.

What do you think?

Written by suddionenews

Leave a Reply

Your email address will not be published.

GIPHY App Key not set. Please check settings

ಐಎಸ್‍ಐ ಗುರುತು ಇರುವ ಉತ್ಪನ್ನಗಳು ಮಾತ್ರ ಬಳಕೆಗೆ ಯೋಗ್ಯ : ಸೌವಿಕ್ ಸಿಖ್‍ದರ್

ಡಾನ್‍ಬೋಸ್ಕೋ ಪ್ರೌಢಶಾಲೆಯಲ್ಲಿ ಕಲಾ ಸಂಭ್ರಮವನ್ನು ಉದ್ಘಾಟಿಸಿದ ಅಂಬಣ್ಣ ಮಹಿಪತಿ